ಅಂತರಾಷ್ಟ್ರೀಯ

5 ವರ್ಷಗಳ ನಂತರ ಕಾಣಿಸಿಕೊಂಡ ಐಎಸ್ಐಎಸ್ ಮುಖ್ಯಸ್ಥ ಬಗ್ದಾದಿ..!

Pinterest LinkedIn Tumblr


ಬಗ್ದಾದ್​: ಶ್ರೀಲಂಕಾದಲ್ಲಿ ಸರಣಿ ಬಾಂಬ್​ ದಾಳಿಯ ಹೊಣೆ ಹೊತ್ತಿದ್ದ ಐಎಸ್​ಐಎಸ್​​ ಉಗ್ರ ಸಂಘಟನೆ ಮತ್ತೆ ಜನರಲ್ಲಿ ಭೀತಿ ಹುಟ್ಟಿಸಲು ಮುಂದಾಗಿದೆ. ನ್ಯೂಜಿಲ್ಯಾಂಡ್​​ನ ಚರ್ಚ್​ ಮೇಲಿನ ದಾಳಿಗೆ ಶ್ರೀಲಂಕಾದ ದಾಳಿ ಪ್ರತಿಕಾರ ಎನ್ನಲಾಗುತ್ತಿದೆ.

ಐಸಿಸ್ ಕೂಡ ಇದರ ಹೊಣೆ ಹೊತ್ತಿದೆ. ಈ ನಡುವೆ ಬರೋಬ್ಬರಿ 5 ವರ್ಷಗಳ ಕಾಲ ಭೂಗತನಾಗಿದ್ದ ಇಸ್ಲಾಮಿಕ್​ ಸ್ಟೇಟ್​ ಗ್ರೂಪ್​ನ ಮುಖ್ಯಸ್ಥ ಅಬೂ ಬಕರ್​ ಅಲ್-ಬಗ್ದಾದಿ ಮತ್ತೆ ವಿಡಿಯೋ ಮೂಲಕ ಕಾಣಿಸಿಕೊಂಡಿದ್ದಾನೆ. ಐಎಸ್​ಐಎಸ್​ನ ಪ್ರಚಾರದ ವಿಡಿಯೋದಲ್ಲಿ ಅರೇಬಿಕ್​ ಭಾಷೆಯಲ್ಲಿ ಮಾತನಾಡಿರುವ ಈತ ಶ್ರೀಲಂಕಾದ ದಾಳಿಯ ಕುರಿತೂ ಉಲ್ಲೇಖಿಸಿದ್ದಾನೆ. ಶ್ರೀಲಂಕಾ ದಾಳಿಯನ್ನ ನಾವೇ ಮಾಡಿದ್ದು ಅಂತ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಬಘೌಝ್​​ನ ಯುದ್ಧ ಇಲ್ಲಿಗೆ ಮುಕ್ತಾಯವಾಗಿದೆ. ಶ್ರೀಲಂಕಾದಲ್ಲಿ ನಡೆಸಿದ ಸರಣಿ ದಾಳಿಯೂ ಈ ಬಘೌಝ್​ ದಾಳಿಗೆ ಪ್ರತಿಕಾರವಾಗಿದೆ ಅಂತ ಹೇಳಿದ್ದಾನೆ. ಅಲ್ಲದೆ ಪಶ್ಚಿಮ ರಾಷ್ಟ್ರಗಳ ವಿರುದ್ಧ ಯುದ್ಧ ಸುದೀರ್ಘವಾಗಿದೆ. ಹಾಗೂ ಮೃತಪಟ್ಟಿರುವ ಸದಸ್ಯರ ವಿರುದ್ಧ ಸೇಡು ತೀರಿಸಿಕೊಳ್ಳಲು ಯುದ್ಧ ಮುಂದುವರೆಯಲಿದೆ ಅಂತ ಎಚ್ಚರಿಸಿದ್ದಾನೆ.

ಇನ್ನು ಈ ವಿಡಿಯೋ ಹೊರಬರುತ್ತಿದ್ದಂತೆ ಎಸ್​​ಐಟಿಇ ತಂಡ ಹಾಗೂ ಇರಾಕಿನ ತಜ್ಞರ ತಂಡ ಈತ ಬಗ್ದಾದಿಯೇ ಅನ್ನೋದನ್ನೂ ಖಚಿತ ಪಡಿಸಿದೆ. ಆದ್ರೆ, 5 ವರ್ಷಗಳ ಕಾಲ ಭೂಗತನಾಗಿದ್ದ ಬಗ್ದಾದಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದ್ದು ಯಾಕೆ..? ಅನ್ನೋ ಪ್ರಶ್ನೆ ಮೂಡಿದೆ. ಜೊತೆಗೆ ಯುದ್ಧ ಮುಂದುವರಿಯಲಿದೆ ಅನ್ನೋ ಎಚ್ಚರಿಕೆಯನ್ನ ರವಾನಿಸಿದ್ದು, ಮತ್ಯಾವ ರಾಕ್ಷಸೀಯ ಕೃತ್ಯಕ್ಕೆ ಸಂಚು ರೂಪಿಸಿದ್ದಾರೆ ಅನ್ನೋ ಆತಂಕ ಮತ್ತು ಅನುಮಾನವನ್ನೂ ಹುಟ್ಟುಹಾಕಿದೆ.

Comments are closed.