ರಾಷ್ಟ್ರೀಯ

ಮತ ಚಲಾಯಿಸಲು 80 ಕಿ.ಮೀ. ಸೈಕಲ್​ ತುಳಿದ ವೈದ್ಯ!

Pinterest LinkedIn Tumblr


ಜೈಪುರ್​: ವೋಟ್​ ಮಾಡಿ ಎಂದು ಚುನಾವಣಾ ಆಯೋಗ ಎಷ್ಟೋ ಹಣ ಖರ್ಚು ಮಾಡಿ ಜಾಗೃತಿ ಮೂಡಿಸುತ್ತದೆ. ಇಂತಹ ಜಾಗೃತಿಯಿಂದ ಈ ಬಾರಿ ತಮ್ಮ ಹಕ್ಕು ಚಲಾಯಿಸಲು ಭಾರತೀಯರು ವಿದೇಶದಿಂದಲೂ ಆಗಮಿಸಿ ವೋಟ್​ ಮಾಡಿ ಸಾರ್ಥಕತೆ ಮರೆದಿದ್ದರು. ಇದೇ ರೀತಿ ರಾಜಸ್ತಾನದಲ್ಲೊಬ್ಬ ಡಾಕ್ಟರ್​ ಮತದಾನ ಜಾಗೃತಿ ಮೂಡಿಸಲು ಬರೊಬ್ಬರಿ 80 ಕಿಲೋ ಮೀಟರ್​ ಸೈಕಲ್​ ಜಾಥಾ ಮಾಡಿ ವೋಟ್​ ಮಾಡಿದ್ದಾರೆ.

ಜೈಪುರದಲ್ಲಿ ನೆಲೆಸಿರುವ 52 ವರ್ಷದ ಜಿ.ಎಲ್​.ಶರ್ಮಾ ಎಸ್​ಎಂಎಸ್​ ಕಾಲೇಜ್​ ಮತ್ತು ಆಸ್ಪತ್ರೆಯಲ್ಲಿ ಹೃದ್ರೋಗ ವೈದ್ಯರಾಗಿದ್ದಾರೆ. ಟೊಂಕ್​-ಸವೈಮಧೊಪುರ್ ಲೋಕಸಭಾ ಕ್ಷೇತ್ರದ ಸೋಡಾ ಗ್ರಾಮದಲ್ಲಿ ಹುಟ್ಟಿ ಬೆಳೆದ ಶರ್ಮಾರ ವೋಟಿಂಗ್ ಹಕ್ಕು, ಅವರ ಗ್ರಾಮದಲ್ಲೇ ಇದೆ. ಹೀಗಾಗಿ ಜೈಪುರದಿಂದ ತಮ್ಮ ಹುಟ್ಟೂರಿಗೆ ಬಂದು ವೋಟ್​ ಮಾಡಲು ಶರ್ಮಾ ಬೆಳಗ್ಗೆ 4 ಗಂಟೆಗೆ ಸೈಕಲ್​ ಹತ್ತಿದವರು 80 ಕಿಲೋ ಮೀಟರ್​ ದೂರದ ತಮ್ಮ ಗ್ರಾಮವನ್ನ ಸಂಜೆ ಹೊತ್ತಿಗೆ ತಲುಪಿ ಹಕ್ಕು ಚಲಾಯಿಸಿದ್ದಾರೆ. ಇವರು ಈ ರೀತಿ ಮಾಡುತ್ತಿರುವುದು ಇದೇ ಮೊದಲೇನು ಅಲ್ಲವಂತೆ. ಇದಕ್ಕೂ ಮೊದಲು 3 ಬಾರಿ ಇದೇ ರೀತಿ ಸೈಕಲ್​ ಜಾಥಾದಿಂದ ಮತದಾನದ ಬಗ್ಗೆ ಜಾಗೃತಿ ಮೂಡಿಸಿ ವೋಟ್​ ಮಾಡಿದ್ದಾರಂತೆ. ಶರ್ಮಾ ಹೃದ್ರೋಗ ವೈದ್ಯರಾಗಿದ್ದರಿಂದ ಸೈಕಲ್​ ತುಳಿದರೆ ಹೃದಯಕ್ಕೆ ಒಳ್ಳೆಯದು. ಹೃದಯ ಸಂಬಂಧ ಕಾಯಿಲೆಗಳಿದ್ದರೆ ದಯವಿಟ್ಟು ಸೈಕಲ್​ ಓಡಿಸಿ ಆದಷ್ಟು ಗುಣಮುಖವಾಗುತ್ತದೆ. ಇದು ಹೃದಯಕ್ಕೆ ತುಂಬಾ ಒಳ್ಳೆಯ ವ್ಯಾಯಾಮ. ಬಾಡಿ ಕೂಡ ಫಿಟ್​ ಆಗಿರುತ್ತದೆ ಎಂದು ಹೇಳುತ್ತಾರೆ.

Comments are closed.