ಮನೋರಂಜನೆ

ಸಾಲಮನ್ನಾ ಬೇಡ ಎಂದ‌ ನಟ ದರ್ಶನ ವಿರುದ್ಧ ರೈತರ ಆಕ್ರೋಶ!

Pinterest LinkedIn Tumblr


ಲೋಕಸಭಾ ಚುನಾವಣೆಯ ನಂತರವೂ ನಟ ಚಾಲೇಂಜಿಗ್ ಸ್ಟಾರ್ ದರ್ಶನ್ ರವರು ನೆನ್ನೆ ವಿ.ವಿ ಪುರಂ ನ BIT ಕಾಲೇಜಿನಲ್ಲಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದರ್ಶನ ಈ ಹೇಳಿಕೆಗೆ ರಾಜ್ಯದಾದ್ಯಂತ ರೈತರ ಹಾಗೂ ರೈತಮುಖಂಡರ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಹೌದು ನಿನ್ನೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಬೆಂಗಳೂರಿನ ವಿವಿ.ಪುರಂನ BIT ಕಾಲೇಜಿಗೆ ಮುಖ್ಯ ಅತಿಥಿಯಾಗಿ ಭೇಟಿ ನೀಡಿದ್ದರು. ಈ ವೇಳೆ ವಿದ್ಯಾರ್ಥಿಗಳ ಮುಂದೆ ಮಾತನಾಡಿದ ದರ್ಶನ್ ”ನಮಗೆ ಸಾಲಮನ್ನಾ ಮಾಡೋದು ಬೇಡ. ರೈತರು ಬೆಳೆದ ಬೆಲೆಗೆ ಸರಿಯಾದ ಬೆಲೆ ಕೊಟ್ರೆ ಸಾಕು” ಎಂದು ಸಿ.ಎಂ ಕುಮಾರಸ್ವಾಮಿರವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದರು.

ನಿಮಗೆ ರೈತರ ಸಾಲಮನ್ನಾ ಮಾಡಲು ಸಾಧ್ಯವಾಗದೇ ಇದ್ದರೆ, ಅವರಿಗೆ ಬೆಂಬಲ ಬೆಲೆ ಕೊಡಿ. ಆಗ ರೈತರೇ ಸಾಲ ತೀರಿಸುತ್ತಾರೆ. ನಾವೆಲ್ಲ ಇಲ್ಲಿ ನೆಮ್ಮದಿಯಾಗಿ ಇದ್ದೀವಿ ಅಂದರೆ ಅದಕ್ಕೆ ಕಾರಣ ನಮ್ಮನ್ನು ಕಾಯುತ್ತಿರುವ ಸೈನಿಕರು. ಅದೇ ರೀತಿ ತುಂಬಾ ಕಡೆ ಸಾಲಮನ್ನ ಮಾಡಿಲ್ಲ, ಎಂದು ಹೇಳುತ್ತಾ ರೈತರ ಸಾಲಮನ್ನಾ ಮಾಡುವುದು ಬೇಡ. ಅವರಿಗೆ ಬೆಂಬಲ ಕೊಟ್ಟರೆ ಸಾಕು ರೈತರೇ ತಮ್ಮ ತಮ್ಮ ಸಾಲವನ್ನು ತೀರಿಸಿಕೊಳ್ಳುತ್ತಾರೆ. ರೈತರಿಗೆ ಸಾಲ ತೀರಿಸುವ ಶಕ್ತಿ ಇದೆ ಎಂದು ಹೇಳಿದರು.

ರೈತರ ಕುರಿತ ದರ್ಶನ ಅವರ ಈ ಬೇಜವಾಬ್ದಾರಿ ಹೇಳಿಕೆಗೆ ರಾಜ್ಯದೆಲ್ಲೆಡೆ ರೈತರ ವಿರೋಧ ವ್ಯಕ್ತವಾಗಿದೆ. ನಾವು ಸಾಲ ತೀರಿಸಲಾಗದೇ ಒದ್ದಾಡುತ್ತಿದ್ದೇವೆ. ಹೀಗಿರುವಾಗ ಸಾಲಮನ್ನಾ ಬೇಡ ಎನ್ನಲು ದರ್ಶನ ಯಾರು ಎಂದು ರೈತರು ನೋವಿನಿಂದ ಪ್ರಶ್ನಿಸಿದ್ದಾರೆ.

ಇನ್ನು ದರ್ಶನ ಈ ಹೇಳಿಕೆ ಬಗ್ಗೆ ರೈತ ಮುಖಂಡರೊಬ್ಬರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಚುನಾವಣೆ ಸಮೀಪ ಬಂದಾಗ ನೆನಪಾಗುವ ರೈತರು ಬೇರೆ ಸಮಯದಲ್ಲಿ ಯಾಕೆ ನೆನಪಾಗುವುದಿಲ್ಲ. ದರ್ಶನ್ ರವರು ರೈತರ ಜೊತೆ ಸಮಯ ಕಳೆದಿದ್ದರೆ ಮಾತ್ರ ಅವರಿಗೆ ರೈತರ ಕಷ್ಟ ಏನು ಎಂಬುವುದರ ಅರಿವಾಗುತ್ತಿತ್ತು. ಎಷ್ಟು ಜನ ರೈತರ ಕಷ್ಟ ಕಂಡು ದರ್ಶನ್ ಸಾಲ ಮನ್ನಾ ಬೇಡ ಎನ್ನುವ ಮಾತನ್ನು ಆಡಿದ್ದಾರೆ. ಎಂದು ಪ್ರಶ್ನಿಸಿದ್ದಾರೆ.

Comments are closed.