ಕರ್ನಾಟಕ

ರೌಡಿ ಸುನಿಲ್ ಹತ್ಯೆ ಪ್ರಕರಣದಲ್ಲಿ ನಟಿ ಪ್ರಿಯಾಂಕ ಬಂಧನ!

Pinterest LinkedIn Tumblr


ರೌಡಿ ಶೀಟರ್ ಸುನೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಹೊಸ ಟ್ವಿಸ್ಟ್ ಸಿಕ್ಕಿದೆ. ಹೌದು ಸ್ಯಾಂಡಲ್​ವುಡ್ ನಟಿಯೊಬ್ಬರನ್ನು ರೌಡಿ ಶೀಟರ್ ಸುನೀಲ್ ಹತ್ಯೆ ಪ್ರಕರಣದ ವಿಚಾರವಾಗಿ ರಾಮನಗರ ಪೊಲೀಸರು ಇಂದು ಬಂಧಿಸಿದ್ದಾರೆ.

ಕೆಲವು ದಿನಗಳ ಹಿಂದೆ ಬಸವೇಶ್ವರ ನಗರದ ರೌಡಿ ಶೀಟರ್ ಸುನೀಲ್ ನನ್ನು ಮನೆಗೆ ನುಗ್ಗಿದ್ದ ರೌಡಿಗಳ ಗುಂಪು ಹೊರಗೆಳೆದು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಂದಿದ್ದರು.ಈ ಹಿಂದೆ ರೌಡಿ ಸುನೀಲನ ಗ್ಯಾಂಗ್ ಸ್ಪಾಟ್ ನಾಗನ ಮೇಲೆ ಹಲ್ಲೆ ನಡೆಸಿದ್ದರು. ಇದಾದ ಬಳಿಕ ಹೆಂಡತಿ ಮಕ್ಕಳು ನಾಗನನ್ನ ತೊರೆದಿದ್ದರು. ಇದೇ ಪ್ರಕರಣದಲ್ಲಿ ಜೈಲಿಗೆ ಹೋಗಿ 10 ದಿನಗಳ ಹಿಂದಷ್ಟೇ ಬಿಡುಗಡೆಯಾಗಿ ಬಂದಿದ್ದ ಸುನೀಲ ಈಗಲೂ ನಾಗನನ್ನ ಕುಂಟನೆಂದು ರೇಗಿಸುತ್ತಿದ್ದರಿಂದ ಬೇಸತ್ತಿದ್ದ ನಾಗ ಸುನೀಲನ ಮನೆಗೇ ನುಗ್ಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿತ್ತು.

ಆದರೆ ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್​ವುಡ್​ ನಟಿ ಪ್ರಿಯಾಂಕ ಮತ್ತು ಆಕೆಯ ತಾಯಿ ನಾಗಮ್ಮ ರನ್ನು ಪೊಲೀಸರು ಬಂಧಿಸಿದ್ದಾರೆ. ಯತ್ನ ಮತ್ತು ಐಪಿಸಿ ಸೆಕ್ಷನ್​​-300 ಹೆಸರಿನ ಸಿನಿಮಾಗಳಲ್ಲಿ ಪ್ರಿಯಾಂಕ ಅಲಿಯಾಸ್ ಸವಿತಾ ನಟಿಸಿದ್ದರು.
ಜನವರಿ 29ರಂದು ಚನ್ನಪಟ್ಟಣ ತಾಲೂಕು ರಾಂ ಪುರದ ತೋಟದ ಮನೆಯಲ್ಲಿ ಸುನಿಲ್​​ ಕೊಲೆ ನಡೆದಿದ್ದು. ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಮನು ಅಲಿಯಾಸ್ ಮಾದೇಗೌಡ, ಶಿವರಾಜ್ ಅಲಿಯಾಸ್ ಕುದುರೆಯನ್ನು ಬಂಧಿಸಿದ್ದರು. ವಿಚಾರಣೆ ನಡೆಸುವ ವೇಳೆ ಆರೋಪಿಗಳ ನೀಡಿದ ಮಾಹಿತಿ ಮೇರೆಗೆ ಪ್ರಿಯಾಂಕ ಮತ್ತು ಆಕೆಯ ತಾಯಿ ನಾಗಮ್ಮರನ್ನು ಇದೀಗಾ ಪೊಲೀಸರು ಬಂಧಿಸಿದ್ದಾರೆ.

Comments are closed.