ರಾಷ್ಟ್ರೀಯ

ಲಂಕಾ ಸ್ಟೋಟದ ರೂವಾರಿ ನಂಟು ಕೇರಳದ ಮೂವರು ಶಂಕಿತರ ವಿಚಾರಣೆ

Pinterest LinkedIn Tumblr


ನವದೆಹಲಿ: ಶ್ರೀಲಂಕಾ ಕೃತ್ಯದ ರೂವಾರಿ ಸಹ್ರಾನ್ ಹಾಶಿಂ ಕೇರಳಕ್ಕೆ ಬಂದಿದ್ದಾನೆ ಎಂಬ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಕಾಸರಗೋಡು ಮತ್ತು ಪಾಲಕ್ಕಾಡ್‌ನಲ್ಲಿ ಇಂದು ಶೋಧ ನಡೆಸಿದೆ. ಮೂವರು ಶಂಕಿತರ ವಿಚಾರಣೆ ನಡೆಸಿದ್ದು, ನಾಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದೆ.

ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದನಾ ಕೃತ್ಯದ ರೂವಾರಿ ಸಹ್ರಾನ್ ಹಾಶಿಂ ಕೇರಳಕ್ಕೆ ಬಂದಿದ್ದಾನೆ ಎಂಬ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಕೇರಳದ ಕಾಸರಗೋಡು ಮತ್ತು ಪಾಲಕ್ಕಾಡ್‌ನಲ್ಲಿ ಇಂದು ಶೋಧ ನಡೆಸಿತು.

ಕಾಸರಗೋಡಿನ ಎರಡು ಮನೆಗಳಲ್ಲಿ ಮತ್ತು ಪಾಲಕ್ಕಾಡ್‌ನ ಒಂದು ಪ್ರದೇಶದಲ್ಲಿ ತಪಾಸಣೆ ನಡೆಸಲಾಯಿತು. ಮೂವರು ಶಂಕಿತರ ವಿಚಾರಣೆ ನಡೆಸಲಾಗಿದೆ. 2016ರಲ್ಲಿ ಐಸಿಸ್ ಸೇರಲು ಕೇರಳ ತೊರೆದಿರುವ ಗುಂಪಿನೊಂದಿಗೆ ಇವರು ಸಂಪರ್ಕದಲ್ಲಿರುವ ಶಂಕೆ ಇದೆ.

ಕಾಸರಗೋಡಿನ ಅಬೂಬಕ್ಕರ್‌ ಸಿದ್ಧಿಖಿ ಮತ್ತು ಅಹ್ಮದ್ ಅರಾಫತ್ ಮನೆಗಳಲ್ಲಿ ಶೋಧ ನಡೆಸಲಾಗಿದ್ದು, ನಾಳೆ ಕೊಚ್ಚಿಯ ಕಚೇರಿಗೆ ಬಂದು ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಎನ್ಐಎ ಆದೇಶಿಸಿದೆ. ಆದ್ರೆ, ಮೂರನೇ ಶಂಕಿತನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಸಿದ್ಧಿಖಿ ಮತ್ತು ಅರಾಫತ್ ಅವರಿಂದ ಮೊಬೈಲ್ ಮತ್ತು ಹಲವು ದಾಖಲೆ ವಶಕ್ಕೆ ಪಡೆಯಲಾಗಿದೆ.

ಶ್ರೀಲಂಕಾ ಸ್ಫೋಟದ ರೂವಾರಿ, ನ್ಯಾಷನಲ್ ತೌಹೀದ್ ಜಮಾಅತ್ ಸಂಘಟನೆ ಮುಖಂಡ ಸಹ್ರಾನ್ ಪದೇ ಪದೇ ತಮಿಳುನಾಡು ಮತ್ತು ಕೇರಳಕ್ಕೆ ಭೇಟಿ ನೀಡುತ್ತಿರುತ್ತಾನೆ ಎಂದು ಶ್ರೀಲಂಕಾದ ಮಾಧ್ಯಮಗಳು ವರದಿ ಮಾಡಿದ್ದವು. ಆಲುವಾ, ಪನಾಯಿಕುಳ ಮತ್ತು ಮಲಪ್ಪುರಂನಲ್ಲಿ ಅವನು ಭಾಷಣ ಮಾಡಿದ್ದ ಎಂದು ಆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇಷ್ಟೇ ಅಲ್ಲದೆ, ಶ್ರೀಲಂಕಾ ಸ್ಫೋಟದ ಮತ್ತೊಬ್ಬ ರೂವಾರಿ ಝಹ್ರಾನ್ ಹಾಶಿಂ ಜತೆ ನಿಕಟ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ಮೇರೆಗೆ ಕೇರಳದ ಮೂವರು ಶಂಕಿತರ ವಿಚಾರಣೆ ನಡೆಸಲಾಗಿದೆ. ಈ ಯುವಕರು ಝಹ್ರಾನ್ ಚಿಂತನೆಗಳಿಂದ ಆಕರ್ಷಿತರಾಗಿದ್ದರು ಎಂದು ಮೂಲಗಳು ಹೇಳಿವೆ. ಐಸಿಸ್ ಸಂಘಟನೆ ಜತೆಗೂ ಇವರು ನಿಕಟ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂದಿದೆ.

ಶಂಕಿತರಿಂದ ವಿವಾದಾತ್ಮಕ ಇಸ್ಲಾಂ ಬೋಧಕ ಝಾಕಿರ್ ನಾಯ್ಕ್‌ನ ಬೋಧನೆಗಳ ಡಿವಿಡಿಗಳು, ಮೊಬೈಲ್‌ಗಳು, ಸಿಮ್‌ ಕಾರ್ಡ್‌ಗಳು, ಮೆಮೋರಿ ಚಿಪ್‌ಗಳು, ಪೆನ್‌ಡ್ರೈವ್‌ ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಅರೆಬಿಕ್‌ ಮತ್ತು ಮಲಯಾಳಂ ಭಾಷೆಯಲ್ಲಿದ್ದ ಕೈಬರಹದ ಕೆಲವು ದಾಖಲೆ ಕೂಡ ಎನ್‌ಐಎ ಜಪ್ತಿ ಮಾಡಿದೆ.

2016ರ ಐಸಿಸ್‌ ಕಾಸರಗೋಡು ಮೋಡ್ಯೂಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಕಡೆ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ ಪ್ರಕಟಣೆ ಮಾಹಿತಿ ನೀಡಿದೆ. ಇದರ ಬಗ್ಗೆ ತನಿಖೆ ನಡೆಯುತ್ತಲೇ ಇದೆ.

2016ರ ಮೇ ತಿಂಗಳಲ್ಲಿ 6ಮಂದಿ ಮಹಿಳೆಯರು,ಮಕ್ಕಳು ಸೇರಿದಂತೆ 21ಮಂದಿ ಕೇರಳಿಗರು ಸಿರಿಯಾ ಹಾಗೂ ಇರಾಕ್‌ಗೆ ಹೋಗಿದ್ದರು. ಇದಾದ 6 ತಿಂಗಳ ನಂತರ 2016ರ ಡಿಸೆಂಬರ್‌ ಮತ್ತು 2017ರ ಜನವರಿಯ ಒಂದು ತಿಂಗಳ ಅಂತರದಲ್ಲಿ ಈ ತಂಡ ಅನುಮಾನಾಸ್ಪದವಾಗಿ ಗಲ್ಫ್‌ನಿಂದ ನಾಪತ್ತೆಯಾಯ್ತು. ಹೀಗಾಗಿ, ಅವರು ಐಸಿಸ್‌ ಉಗ್ರ ಸಂಘಟನೆ ಸೇರಿಕೊಂಡಿರುವ ಶಂಕೆ ಇದೆ. ಇದರಲ್ಲಿ ಕೆಲವರು ಬಲಿಯಾಗಿರುವ ವರದಿಯೂ ಇದೆ.

Comments are closed.