ಕೊಲಂಬೊ: ಈಸ್ಟರ್ ದಿನವೇ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಚರ್ಚ್, ಹೋಟೆಲ್ ಗಳ ಮೇಲೆ ಏಕಕಾಲದಲ್ಲಿ ನಡೆದ ಬಾಂಬ್ ಸ್ಟೋಟದಿಂದಾಗಿ 185 ಜನರು ಮೃತಪಟ್ಟಿದ್ದು, 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸ್ಟೋಟ ಸಂಭವಿಸಿದ್ದ ಹೋಟೆಲ್ ಗಳಲ್ಲಿ ಒಂದಾದ ಸಿನ್ನಾಮಾನ್ ಗ್ರಾಂಡ್ ಹೋಟೆಲ್ ನಲ್ಲಿದ್ದ ಕಾಲಿವುಡ್ ನಟಿ ರಾಧಿಕಾ ಶರತ್ ಕುಮಾರ್ , ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಬಾಂಬ್ ಸ್ಟೋಟ ಸಂವಿಸುವ ಕೆಲವೇ ನಿಮಿಷದ ಮುಂಚೆ ಆಕೆ ಆ ಹೋಟೆಲ್ ನಿಂದ ಹೊರಗೆ ಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಹೇಳಿದ್ದಾರೆ.
ಕೊಲಂಬೊದಲ್ಲಿನ ಚಿನ್ನಾಮೊನ್ ಗ್ರಾಂಡ್ ಹೋಟೆಲ್ ನಿಂದ ನಿರ್ಗಮಿಸಿದ ಕೆಲ ಹೊತ್ತಿನಲ್ಲಿ ಬಾಂಬ್ ಸ್ಟೋಟ ಸುದ್ದಿ ಕೇಳಿ ಶಾಂಕ್ ಆಗಿದೆ. ದೇವರ ದಯೆಯಿಂದ ನಾವೆಲ್ಲಾ ಅಪಾಯದಿಂದ ಪಾರಾಗಿರುವುದಾಗಿ ರಾಧಿಕಾ ಶರತ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಈಸ್ಟರ್ ದಿನವಾದ ಇಂದು ಬೆಳಗ್ಗೆ 8-45ರ ಸುಮಾರಿನಲ್ಲಿ ಚರ್ಚ್ ಗಳಲ್ಲಿ ಸಾಮೂಹಿಕ ಪಾರ್ಥನೆ ನಡೆಯುತ್ತಿದ್ದ ವೇಳೆಯಲ್ಲಿ ಶ್ರೀಲಂಕಾದ ಹಲವು ಕಡೆಗಳಲ್ಲಿ ಏಕಕಾಲದಲ್ಲಿ ಬಾಂಬ್ ಸ್ಟೋಟ ಸಂಭಿಸಿದೆ ಎಂದು ಪೊಲೀಸ್ ವಕ್ತಾರ ರುವಾನ್ ಗುಣಶೇಕೆರಾ ಹೇಳಿದ್ದಾರೆ.