ಕ್ರೀಡೆ

ಮಂಕಡ್ ರನೌಟ್ ಮಾಡಲು ಹೋದ ಅಶ್ವಿನ್’ಗೆ ಧವನ್ ಕೊಟ್ಟ ತಿರುಗೇಟು ನೋಡಿ….

Pinterest LinkedIn Tumblr

ಈ ಬಾರಿಯ ಐಪಿಎಲ್​​ನಲ್ಲಿ ಮನ್​​​​​​​​​ಕಡ್ ರನೌಟ್ ಭಾರೀ ಸುದ್ದಿ ಮಾಡುತ್ತಿದೆ. ಕಳೆದ ರಾಜಸ್ಥಾನ್ ರಾಯಲ್ಸ್​ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ನಾಯಕ ಆರ್. ಅಶ್ವಿನ್ ಜೋಸ್ ಬಟ್ಲರ್​​​​ರನ್ನು ಮನ್​​​​ಕಡ್ ರನೌಟ್ ಮಾಡಿ ಅನೇಕರಿಂದ ಟೀಕೆಗೆ ಗುರಿಯಾಗಿದ್ದರು. ಸದ್ಯ ಮತ್ತೆ ಅಶ್ವಿನ್ ತಮ್ಮ ಹಳೆ ಚಾಳಿ ಮುಂದುವರಿಸಿದ್ದಾರೆ. ಆದರೆ, ಈ ಬಾರಿ ಅದು ಯಶಸ್ವಿ ಆಗಲಿಲ್ಲ.

ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಅಶ್ವಿನ್​ ಅವರು ಶಿಖರ್ ಧವನ್​ರನ್ನು ಮನ್​​ಕಡ್ ರನೌಟ್ ಮಾಡಲು ಯತ್ನಿಸಿದರು. ಆದರೆ, ಧವನ್ ತಮ್ಮದೆ ಶೈಲಿಯಲ್ಲಿ ಸರಿಯಾಗಿ ತಿರುಗೇಟು ನೀಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

13ನೇ ಓವರ್ ಬೌಲ್ ಮಾಡಲು ಬಂದ ಅಶ್ವಿನ್​​​ ಇನ್ನೇನು ಚೆಂಡು ಎಸೆಯಬೇಕು ಎನ್ನುವಷ್ಟರಲ್ಲಿ ಬಾಲ್ ಹಾಕದೆ ತಿರುಗಿದರು. ಈ ಸಂದರ್ಭ ಧವನ್ ಕ್ರೀಸ್​​ನಲ್ಲೇ ಇದ್ದು ಅಲ್ಲಿಂದ ಕದಲಲಿಲ್ಲ. ಮುಂದಿನ ಎಸೆತ ಅಶ್ವಿನ್ ಬಾಲ್ ಮಾಡಲು ಬಂದಾಗ ಧವನ್ ಕ್ರೀಸ್​ನಲ್ಲೇ ಮೈ ಕುಣಿಸುತ್ತಾ ಅಶ್ವಿನ್​​ಗೆ ತಿರುಗೇಟು ನೀಡಿ ಕೆರಳಿಸಿದ್ದಾರೆ.

Comments are closed.