ಮಂಗಳೂರು, ಎಪ್ರಿಲ್. 21: ಹಳೇ ವಿದ್ಯಾರ್ಥಿ ಸಂಘ ಸರಕಾರಿ ಪ್ರೌಡಶಾಲೆ ಹಾಗು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೊಕ್ಕಪಟ್ಟಣ ಮಂಗಳೂರು ಇದರ ಆಶ್ರಯದಲ್ಲಿ ಜರಗುತ್ತಿರುವ 18ನೇ ವರ್ಷದ ಎಂಟು ದಿನಗಳ ಚಿಣ್ಣರ ಚಿಲಿಪಿಲಿ ಬಾಲ ಪ್ರತಿಭಾ ಶಿಬಿರವು ಇಂದು ಆರಂಭಗೊಂಡಿತ್ತು.
ಬೊಕ್ಕಪಟ್ಣ ಸರಕಾರಿ ಶಾಲೆಯಲ್ಲಿ ಹಮ್ಮಿಕೊಂಡಿರುವ ಚಿಣ್ಣರ ಚಿಲಿಪಿಲಿ ಬಾಲ ಪ್ರತಿಭಾ ಶಿಬಿರವನ್ನು ರವಿವಾರ ಡಾ” ಶಿವರಾಮ ಆರ್ಟ ಅಫ್ ಲಿವಿಂಗ್ ಇದರ ಉಪಾನ್ಯಸಕರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಸಮಾರಂಭದಲ್ಲಿ ನಿವೃತ್ತ ಮುಖ್ಯೋಪಧ್ಯಾಯನಿ ಶ್ರೀಮತಿ ಜ್ಯೋಲಿಯಟ್ ಪಿಂಟೋ ಸಂಘದ ಮಾಜಿ ಅಧ್ಯಕ್ಷರಾದ ಅಜಿತ ಕುಮಾರ, ಶಿಬಿರಾಧಿಕಾರಿ ಪ್ರಕಾಶ್ ನಾಯಕ್ ಹಾಗೂ ನವೀನ ಬೋಳೂರು, ಶ್ರೀಮತಿ ವಿಜೇತ ರೋಷನ್, ಕುಮಾರಿ ಅಶ್ವಿಜ , ಜ್ಞಾನೇಶ ಉಪಸ್ಥಿರಿದ್ದರು.
ಸಂಘದ ಗೌರವ ಅಧ್ಯಕ್ಷರಾದ ಪ್ರವೀಣ.ಕುಮಾರ ಸ್ವಾಗತಸಿ ಪ್ರಸ್ಥಾವನೆಯನ್ನು ಮಾಡಿದರು. ಅಧ್ಯಕ್ಷರಾದ ಮೋಹನ ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.