ಮನೋರಂಜನೆ

ನಟ ರಣ್‌ವೀರ್-ದೀಪಿಕಾ ಬಿಜೆಪಿ ಪರ ಪ್ರಚಾರ ! ನಿಜ ಏನು ಗೊತ್ತೇ…?

Pinterest LinkedIn Tumblr

ಮುಂಬೈ: ಸದ್ಯ ಲೋಕಸಭೆ ಚುನಾವಣೆಯ ಕಾವು ದೇಶದೆಲ್ಲಡೆ ಜೋರಾಗಿದೆ. ಈ ಮಧ್ಯೆ ಮೊದಲ ಹಂತದ ಚುನಾವಣೆ ಗುರುವಾರ ಮುಗಿದಿದ್ದು ರಾಜಕೀಯ ಮುಖಂಡರು ಅಬ್ಬರದ ಪ್ರಚಾರದ ಮೊರೆ ಹೋಗುತ್ತಿದ್ದಾರೆ.

ಇನ್ನು ಬಾಲಿವುಡ್ ನಟ-ನಟಿಯಾರದ ರಣ್‌ವೀರ್ ಮತ್ತು ದೀಪಿಕಾ ಪಡುಕೋಣೆ ಬಿಜೆಪಿ ಪರ ಮಾಡುತ್ತಿದ್ದಾರೆ ಎಂದು ಹೇಳುವ ಫೋಟೋವೊಂದು ಇದೀಗ ವೈರಲ್ ಆಗಿದೆ. ಆದರೆ ಇದು ಸತ್ಯಕ್ಕೆ ದೂರವಾಗಿದೆ.

ಹೌದು, ಕಳೆದ ಎರಡು ದಿನಗಳಿಂದ ಸತಿ-ಪತಿಗಳಾದ ದೀಪ್‍ವೀರ್ ಅವರು ಕೇಸರಿ ಶಾಲು ಹಾಕಿಕೊಂಡಿದ್ದು ಅದರ ಮೇಲೆ ಬಿಜೆಪಿಗೆ ಮತ ಹಾಕಿ ಎಂಬ ಸಾಲುಗಳಿರುವ ಫೋಟೋ ವೈರಲ್ ಆಗಿದೆ. ಅಸಲಿಗೆ ದೀಪ್‍ವೀರ್ ಕೇಸರಿ ಶಾಲು ಹಾಕಿಕೊಂಡಿರುವುದು ನಿಜ. ಆದರೆ ಬಿಜೆಪಿ ಪರ ಮತಯಾಚನೆ ಮಾಡುತ್ತಿಲ್ಲ.

2018ರಲ್ಲಿ ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ದೀಪ್‍ವೀರ್ ಜೋಡಿ ಭೇಟಿ ನೀಡಿತ್ತು. ಈ ವೇಳೆ ಕೇಸರಿ ಶಾಲು ಹಾಕಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಅಂದು ಕ್ಲಿಕ್ಕಿಸಿದ ಫೋಟೋದಲ್ಲಿ ಶಾಲು ಮೇಲೆ ಯಾವುದೇ ಅಕ್ಷರಗಳು ಇರಲಿಲ್ಲ. ಇದೀಗ ಅದೇ ಫೋಟೋದ ಶಾಲು ಮೇಲೆ ವೋಟ್ ಫಾರ್ ಬಿಜೆಪಿ ಎಂಬ ಸಾಲು ಬರೆದು ಕೊಂಚ ಎಟಿಡ್ ಮಾಡಿ ಹರಿಬಿಡಲಾಗಿದೆ.

Comments are closed.