ಅಂತರಾಷ್ಟ್ರೀಯ

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಬ್ರಿಟಿಷ್ ಸಂಸದೆಯ ಮುಂದೆಯೇ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿ !

Pinterest LinkedIn Tumblr

ಲಂಡನ್: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವ ಪಾಕಿಸ್ತಾನ ಮೂಲದ ಬ್ರಿಟಿಷ್ ಸಂಸದೆ ಎದುರೇ ಹಸ್ತಮೈಥುನ ಮಾಡಿಕೊಂಡಿದ್ದಾನೆ.

ಏಪ್ರಿಲ್ 1ರ ಬೆಳಗ್ಗೆ 10:50ರ ಸುಮಾರಿನಲ್ಲಿ ಬ್ರಾಡ್ ಫೋರ್ಡ್ ವೆಸ್ಟ್ ನ ಲೇಬರ್ ಪಾರ್ಟಿ ನಾಯಕಿ ನಾಜ್ ಶಾ ಅವರು ಲಂಡನ್ ಸೆಂಟ್ರಲ್ ನ ವೈಟ್ ಹಾಲ್ ಗೆ ತಲುಪಿದ ಮೇಲೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಲಂಡನ್ ಮೆಟ್ರೋಪೋಲಿಟನ್ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದ್ದಾರೆ.

ಈ ಬಗ್ಗೆ ಹೇಳಿಕೊಂಡಿರುವ ನಾಜ್ ಶಾ ಅವರು, ಈ ಘಟನೆಯಿಂದ ನಾನು ಆಘಾತಕ್ಕೆ ಒಳಗಾಗಿದ್ದೇನೆ. ಆ ವ್ಯಕ್ತಿ ನಾರ್ಮಲ್ ಆಗಿ ನನ್ನ ಮುಂದೆ ಕುಳಿತಿದ್ದನು. ಬಳಿಕ ಹಸ್ತಮೈಥುನ ಮಾಡಿಕೊಂಡನು. ನನಗೆ ಆ ತಕ್ಷಣ ಏನು ಮಾಡಬೇಕು ಎಂದು ಗೊತ್ತಾಗಲಿಲ್ಲ. ಆ ವ್ಯಕ್ತಿ ಅಸಭ್ಯವಾಗಿ ವರ್ತಿಸಿದರ ಬಗ್ಗೆ ದೂರು ನೀಡಿದ್ದೇನೆ ಎಂದರು.

ನಾಜ್ ಶಾ ತಮಗಾದ ಅನುಭವವನ್ನು ಸಾಮಾಜಿಕ ಜಾಲತಾಣ ಯುಟ್ಯೂಬ್ ನಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಶೇ.90ರಷ್ಟು ಮಂದಿ ತಮಗೆ ಆಗಿರುವ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಯಾವುದೇ ಘಟನೆಯನ್ನು ಹಂಚಿಕೊಂಡಿಲ್ಲ ಎಂದು ತಿಳಿಸಿದ್ದಾರೆ.

Comments are closed.