ಹೊಸಕೋಟೆ: ರಸ್ತೆ ಪಕ್ಕದ ಮನೆಗೆ ಟಿಪ್ಪರ್ ಲಾರಿ ನುಗ್ಗಿ ಇಬ್ಬರು ಮೃತ ಪಟ್ಟ ದಾರುಣ ಘಟನೆ ಭೋದನಹೊಸಹಳ್ಳಿ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ.
ಶನಿವಾರ ಬೆಳಗಿನ ಜಾವ ಸಂಭವಿಸಿದ ದುರಂತದಲ್ಲಿ ರಘ(26) ಹಾಗೂ ಮಂಜುನಾಥ್ (45) ಎಂಬುವವರು ಸಾವನ್ನಪ್ಪಿದ್ದಾರೆ.
ಚಿಕ್ಕತಿರುಪತಿ ಕಡೆಯಿಂದ ಬೆಂಗಳೂರಿಗೆ ಎಮ್.ಸ್ಯಾಂಡ್ ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ಲಾರಿ ಬೋಧನಹೊಸಹಳ್ಳಿ ಗ್ರಾಮದ ರಸ್ತೆ ಬದಿಯಲ್ಲಿದ್ದ ಮನೆಗೆ ನುಗ್ಗಿದೆ. ಬೆಳಗಿನ ಜಾವ ಸುಖನಿದ್ರೆಯಲ್ಲಿದ್ದಾಗಲೇ ಈ ದುರಂತ ನಡೆದಿದ್ದು ಲಾರಿ ನುಗ್ಗಿದ ಪರಿಣಾಮ ಮನೆ ಮೇಲ್ಛಾವಣಿ ಮನೆಯಲ್ಲಿ ಮಲಗಿದ್ದವರ ಮೇಲೆ ಕುಸಿದಿದೆ.
ಘಟನೆ ಮಾಹಿತಿ ಪಡೆದ ತಿರುಮಲಶಟ್ಟಿಹಳ್ಳಿ ಪೋಲೀಸರು ಸ್ಥಳಕ್ಕಾಗಮಿಸಿ ಕ್ರೇನ್ ಸಹಕಾರದಿಂದ ಲಾರಿಯನ್ನು ಬದಿಗೆ ಸರಿಸಿದ್ದು ಮೃತದೇಹವನ್ನು ಹೊರತೆಗೆದಿದ್ದಾರೆ.
ಗ್ರಾಮದ ತಿರುವುನಲ್ಲಿ ಸಾಕಷ್ಟು ಮನೆಗಳಿದ್ದು ಲಾರಿ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೆ ಮನೆಗೆ ನುಗ್ಗಿ ಅಪಘಾತವಾಗುತ್ತದೆ. ಹೆದ್ದಾರಿಯಲ್ಲಿ ಸಂಚರಿಸುವ ಲಾರಿಗೆ ವೇಗ ನಿಯಂತ್ರಣವಿಲ್ಲದಿರುವುದು ಇಂತಹಾ ಘಟನೆಗೆ ಕಾರಣವಾಗಿದ್ದು ಪೋಲೀಸರು ಸೂಕ್ತ ಎಚ್ಚರಿಕೆವಹಿಸಬೇಕೆಂದು ಸ್ಥಳೀಯರು ಆಗ್ರ್ಹಿಸಿದ್ದಾರೆ.
Comments are closed.