ನಟಿ ರಶ್ಮಿಕಾ ಮಂದಣ್ಣ ಅವರಿಗೆ ಕನ್ನಡದಲ್ಲಿ ಮೊದಲ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಂತೆಯೇ ಕನ್ನಡದಲ್ಲೂ ಸಾಲು ಸಾಲು ಅವಕಾಶಗಳು ಅರಸಿ ಬಂದಿದ್ದವು. ಅದರ ಜತೆಗೆ ಟಾಲಿವುಡ್ನಿಂದ ಸಹ ಆಫರ್ ಬಂದಿತ್ತು. ‘ಕಿರಿಕ್ ಪಾರ್ಟಿ’ಯಲ್ಲಿ ಸಾನ್ವಿಯಾಗಿ ಮೃದು ಸ್ವಾಭಾವದ ಚೆಲುವೆಯಾಗಿ ಮಿಂಚಿದ್ದ ಕೊಡಗಿನ ಬೆಡಗಿ ‘ಚಲೋ’ ಚಿತ್ರದ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಟ್ಟಿದ್ದರು.
2017 ಏಪ್ರಿಲ್ 10ರಂದು ರಶ್ಮಿಕಾ ‘ಚಲೋ’ ಚಿತ್ರತಂಡದೊಂದಿಗೆ ಸೇರಿಕೊಂಡಿದ್ದರು. ನಾಯಕ ನಾಗಶೌರ್ಯ ನಾಯಕನಾಗಿ ಅಭಿನಯಿಸಿದ್ದ ಈ ಚಿತ್ರದಿಂದ ಕಿರಿಕ್ ಹುಡುಗಿಗೆ ಲಕ್ ಖುಲಾಯಿಸಿತ್ತು.
ಈ ಸಿನಿಮಾ ಬಿಡುಗಡೆಯಾದ ನಂತರ ತೆಲುಗು ಅಭಿಮಾನಿಗಳ ಹೃದಯದಲ್ಲಿ ರಶ್ಮಿಕಾಗೆ ಒಂದು ವಿಶೇಷ ಸ್ಥಾನ ಸಿಕ್ಕಿತ್ತು. ಇದಾದ ನಂತರ ರಶ್ಮಿಕಾ ಆಂಧ್ರದವರ ಮನೆ ಮಗಳಾಗಿ ಬಿಟ್ಟಿದ್ದಾರೆ. ಹೀಗಾಗಿಯೇ ಈ ದಿನವನ್ನು ರಶ್ಮಿಕಾರ ತೆಲುಗು ಅಭಿಮಾನಿಗಳು ವಿಶೇಷವಾಗಿ ಆಚರಿಸಿಕೊಳ್ಳುತ್ತಿದ್ದಾರೆ.
‘ಚಲೋ’ ನಂತರ ‘ಗೀತ ಗೋವಿಂದಂ’ ಸೂಪರ್ ಡೂಪರ್ ಹಿಟ್ ಆಗಿತ್ತು. ಆದರೆ ‘ದೇವ್ದಾಸ್’ನಲ್ಲಿ ರಶ್ಮಿಕಾಗೆ ಅಂದುಕೊಂಡ ಮಟ್ಟಕ್ಕೆ ಯಶಸ್ಸು ಸಿಗಲಿಲ್ಲವಾದರೂ, ನಂತರ ಸಾಲು ಸಾಲು ಚಿತ್ರಗಳಿಗೆ ಸಹಿ ಮಾಡಿದ್ದಾರೆ.
ಮತ್ತೆ ನಟ ವಿಜಯ್ ದೇವಕೊಂಡ ಜತೆ ‘ಡಿಯರ್ ಕಾಮ್ರೆಡ್’ನಲ್ಲಿ ಅಭಿನಯಿಸುತ್ತಿದ್ದು, ಇದು ಟಾಲಿವುಡ್ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದರ ಜತೆಗೆ ನಿತಿನ್ ಜತೆ ‘ಬೀಷ್ಮ’ ಹಾಗೂ ಅಲ್ಲು ಅರ್ಜುನ್ ಜತೆ ಇನ್ನೂ ಹೆಸರಿಡದ ಚಿತ್ರದಲ್ಲಿ ರಶ್ಮಿಕಾ ಅಭಿನಯಿಸಲಿದ್ದರೆ. ತಮಿಳಿನಲ್ಲಿ ಕಾರ್ತಿ ಜತೆ ಸಹ ಒಂದು ಚಿತ್ರ ಮಾಡುತ್ತಿದ್ದು, ಅದರ ಚಿತ್ರೀಕರಣವೂ ಆರಂಭವಾಗಿದೆ.
ಹೀಗಾಗಿಯೇ ಕೊಡಗಿನ ಬೆಡಗಿ ರಶ್ಮಿಕಾಗೆ ಸದ್ಯ ಕನ್ನಡಕ್ಕಿಂತ ಟಾಲಿವುಡ್ನಲ್ಲೇ ದೊಡ್ಡ ಅಭಿಮಾನಿ ಬಳಗವಿದೆ. ಅತಿ ಕಡಿಮೆ ಸಮಯದಲ್ಲಿ ಸ್ಟಾರ್ ನಟಿಯರಿಗೆ ಇಲ್ಲಷ್ಟು ಫ್ಯಾನ್ ಫಾಲೋಯಿಂಗ್ ಇವರಿಗಿದೆ. ಇದಕ್ಕೆ ಸಾಕ್ಷಿ ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಇರುವ ಬೇಡಿಕೆ.
Comments are closed.