ಕರ್ನಾಟಕ

ಜೆಡಿಎಸ್ ಗೆ ಆಘಾತ: ಬಿಜೆಪಿ ಸೇರಿದ ಮುಖಂಡರು

Pinterest LinkedIn Tumblr


ಚಾಮರಾಜನಗರ: ಲೋಕಸಭಾ ಚುನಾವಣಾ ಕಣ ರಂಗೇರುತ್ತಿದೆ. ಕೆಲ ದಿನವಷ್ಟೇ ರಾಜ್ಯದಲ್ಲಿ ಚುನಾವಣೆಗೆ ಬಾಕಿ ಉಳಿದಿದ್ದು, ಪಕ್ಷಾಂತರ ಪರ್ವ ಜೋರಾಗಿದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಲವು ಮುಖಂಡರು ಪಕ್ಷಾಂತರ ಮಾಡುತ್ತಿದ್ದಾರೆ.

ಚಾಮರಾಜನಗರದಲ್ಲಿ ಕುರುಬ ಸಮುದಾಯದ ಜೆಡಿಎಸ್ ಮುಖಂಡರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಮುಸುವಿನಕೊಪ್ಪಲು ಗ್ರಾಮದ ಮುಖಂಡರು ಚುನಾವಣೆ ಬೆನ್ನಲ್ಲೇ ಜೆಡಿಎಸ್ ಬಿಟ್ಟು ಶಾಕ್ ನೀಡಿದ್ದಾರೆ.

ಬಿಜೆಪಿ ಮುಖಂಡ ಸಿ.ಬಸವೇಗೌಡ ಮತ್ತು ಜಿಪಂ ಮಾಜಿ ಉಪಾಧ್ಯಕ್ಷ ನಟರಾಜು ನೇತೃತ್ವದಲ್ಲಿ ಜೆಡಿಎಸ್ನ ಪುಟ್ಟಸ್ವಾಮಿ, ಆನಂದ್, ಮಹದೇವು ಕಮಲ ಪಡೆ ಸೇರಿದ್ದಾರೆ.

ಇನ್ನು ಬಿಜೆಪಿ ಸೇರಿದ ಬಳಿಕ ಮಾತನಾಡಿದ ಮುಖಂಡರು ಪಕ್ಷದ ಆಡಳಿತಕ್ಕೆ ಬೇಸತ್ತು ಕಮಲ ಪಡೆ ಸೇರಿದ್ದಾಗಿ ಹೇಳಿದ್ದಾರೆ. ಅಲ್ಲದೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಮ್ಮ ಬೆಂಬಲ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮೈತ್ರಿಗೆ ನಮ್ಮ ಬೆಂಬಲ ಇರುವುದಿಲ್ಲ ಎಂದು ಹೇಳಿದರು.

Comments are closed.