ಇವತ್ತು ನಟಸಾರ್ವಭೌಮ ಡಾ. ರಾಜ್ಕುಮಾರ್ ಅವರ 13ನೇ ವರ್ಷದ ಪುಣ್ಯತಿಥಿ. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಡಾ. ರಾಜ್ ಸ್ಮಾರಕಕ್ಕೆ ಭೇಟಿ ಕೊಡಲಿದ್ದಾರೆ. ತಮ್ಮ ನೆಚ್ಚಿನ ನಟನನ್ನು ಮತ್ತೆ ಸ್ಮರಿಸಿಕೊಂಡು, ಕೈ ಮುಗಿದು ಪುಷ್ಪನಮನ ಸಲ್ಲಿಸುತ್ತಿದ್ದಾರೆ.
ಕನ್ನಡ, ಕರ್ನಾಟಕ, ಕನ್ನಡ ಸಿನಿಮಾ ಅಂದಾಕ್ಷಣ ನೆನಪಿಗೆ ಬರುವ ಮೊದಲ ಹೆಸರು, ಕಣ್ಣಮುಂದೆ ಬರುವ ಮೊದಲ ಚಿತ್ರ ಡಾ. ರಾಜ್ ಅವರದ್ದು . ಅಷ್ಟರ ಮಟ್ಟಿಗೆ ತಮ್ಮ ನಟನೆ, ಸರಳ ವ್ಯಕ್ತಿತ್ವ, ನಾಡು-ನುಡಿ-ಜಲದ ಬಗೆಗಿನ ಕಾಳಜಿಯ ಮೂಲಕ ಅಣ್ಣಾವ್ರು ಎಲ್ಲರ ಮನಗಳಲ್ಲಿ ನೆಲೆಸಿದ್ದಾರೆ. ಇಂತಹ ಮೇರು ನಟ ನಮ್ಮಿಂದ ದೂರಾಗಿ ಇವತ್ತಿಗೆ 13 ವರ್ಷ.
ಪ್ರತಿ ವರ್ಷದಂತೆ ಈ ಬಾರಿಯೂ ಬೇರೆ ಬೇರೆ ಜಿಲ್ಲೆಗಳಿಂದ, ದೂರದ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಅಣ್ಣಾವ್ರ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ನಮನ ಸಲ್ಲಿಸಲಿದ್ದಾರೆ.
ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಮಾರ್ ಮತ್ತು ಪುನೀತ್ ಸಹ ಪ್ರತಿ ವರ್ಷದಂತೆ ಕಂಠೀರವ ಸ್ಟುಡಿಯೋಗೆ ಬಂದು, ಅಪ್ಪಾಜಿ ಸ್ಮಾರಕಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಈ ವೇಳೆ ಮಾತನಾಡಿದ ಶಿವಣ್ಣ, ರಾಘವೇಂದ್ರ ರಾಜ್ಕುಮಾರ್ ಅವರ ‘ಅಪ್ಪನ ಅಂಗಿ’ ಸಿನಿಮಾ ಮಾತಾಡಿದ್ದಾರೆ.
‘ಈ ಚಿತ್ರ ತಂದೆಯ ತ್ಯಾಗದ ಕುರಿತಾದ ಕತೆಯಾಗಿರುತ್ತದೆ. ಇದರಲ್ಲಿ ಕುಟುಂಬ ಹಾಗೂ ಮಕ್ಕಳಿಗಾಗಿ ತಂದೆ ಎದುರಿಸುವ ಸಮಸ್ಯೆಗಳು, ತಂದೆ ಮಕ್ಕಳ ನಡುವಿನ ಬೆಸುಗೆ ಕುರಿತಂತೆ ಕತೆ ಹೆಣೆಯಲಾಗಿದೆ. ಈ ಚಿತ್ರ ಪ್ರತಿಯೊಬ್ಬ ತಂದೆ ಮಕ್ಕಳಿಗೂ ಕನೆಕ್ಟ್ ಆಗುವಂತಿರುತ್ತದೆ’ ಎಂದಿದ್ದಾರೆ ಶಿವಣ್ಣ.
ವಿಶೇಷ ಅಂದರೆ ಇಂದೇ ಪುನೀತ್ ರಾಜ್ಕುಮಾರ್ ತಮ್ಮ ಸ್ವಂತ ಬ್ಯಾನರ್ ಪಿಆರ್ಕೆ ಸ್ಟುಡಿಯೋಸ್ನ ಲ್ಲಿ ನಿರ್ಮಿಸಿರುವ ಮೊದಲ ಸಿನಿಮಾ ‘ಕವಲುದಾರಿ’ ಸಹ ಬಿಡುಗಡೆಯಾಗುತ್ತಿದೆ.
Comments are closed.