ಮನೋರಂಜನೆ

ಕಣ್ಣುಗಳೇ ಆತ್ಮದ ಕನ್ನಡಿ: ನಟಿ ರಾಧಿಕಾ ಪಂಡಿತ್

Pinterest LinkedIn Tumblr


ಬೆಂಗಳೂರು: ನಟಿ ರಾಧಿಕಾ ಪಂಡಿತ್ ಅವರು ಸದ್ಯಕ್ಕೆ ಸಿನಿಮಾ ಮಾಡದಿದ್ದರೂ ಅಭಿಮಾನಿಗಳ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ. ಈಗ ರಾಧಿಕಾ ಅವರು ಕಣ್ಣುಗಳೇ ನಮ್ಮ ಆತ್ಮದ ಕನ್ನಡಿ ಎಂದು ಹೇಳಿದ್ದಾರೆ.

ನಟಿ ರಾಧಿಕಾ ಅವರು ತಮ್ಮ ಇನ್ ಸ್ಟಾಗ್ರಾಂ ಮತ್ತು ಫೇಸ್‍ಬುಕ್ ನಲ್ಲಿ “ಕಣ್ಣುಗಳು ಆತ್ಮದ ಕನ್ನಡಿಯಾಗಿವೆ” ಎಂದು ಬರೆದು ತಮ್ಮ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಅಂದರೆ ಪ್ರತಿಯೊಬ್ಬರ ಆತ್ಮದಲ್ಲಿರುವ ವಿಚಾರ, ಭಾವನೆಯನ್ನು ಕಣ್ಣುಗಳೇ ತಿಳಿಸುತ್ತವೆ ಎಂದು ಹೇಳಿದ್ದಾರೆ.

ರಾಧಿಕಾ ಅವರು ಪೋಸ್ಟ್ ಮಾಡಿದ ತಕ್ಷಣ ಅಭಿಮಾನಿಗಳು ಫೋಟೋ ತುಂಬಾ ಚೆನ್ನಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಮಗಳನ್ನು ತೋರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೆ ರಾಧಿಕಾ ಅವರು “ನನಗೆ ಬೋರ್ ಆದಾಗ, ಅವಳ ಆಟಿಕೆಯ ಜೊತೆ ಆಟವಾಡುತ್ತೇನೆ” ಎಂದು ಮುದ್ದು ಮಗಳ ಆಟಿಕೆ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಸದ್ಯಕ್ಕೆ ರಾಧಿಕಾ ಅವರು ಮಗಳ ಲಾಲನೆ-ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.

Comments are closed.