ಮುಂಬೈ

ಸನ್ನಿ ಲಿಯೋನ್‍ನಿಂದ 8ನೇ ವಿವಾಹ ವಾರ್ಷಿಕೋತ್ಸವಕ್ಕೆ ಕ್ಯೂಟ್ ಪೋಸ್ಟ್

Pinterest LinkedIn Tumblr


ಮುಂಬೈ: ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಬುಧವಾರ ತಮ್ಮ 8ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಪತಿ ಡೇನಿಯಲ್ ವೆಬರ್ ಹಾಗೂ ತಮ್ಮ ಮಗಳು ನಿಶಾ ಕೌರ್ ಜೊತೆ ಆಚರಿಸಿಕೊಂಡಿದ್ದಾರೆ. ಸನ್ನಿ ತನ್ನ ವಿವಾಹ ವಾರ್ಷಿಕೋತ್ಸವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಸನ್ನಿ ಲಿಯೋನ್ ತನ್ನ ಇನ್‍ಸ್ಟಾಗ್ರಾಂನಲ್ಲಿ, “ವಿವಾಹ ವಾರ್ಷಿಕೋತ್ಸದ ಶುಭಾಶಯಗಳು ಡೇನಿಯಲ್. ನೀನು ನನ್ನ ಜೀವನದ ಅತ್ಯುತ್ತಮದ ಭಾಗ. ನೀನು ನನ್ನ ಆತ್ಮೀಯ ಗೆಳೆಯ ಹಾಗೂ ನಮ್ಮ ಮಕ್ಕಳಿಗೆ ಅತ್ಯುತ್ತಮ ತಂದೆ. ಖುಷಿಯ ವಿಚಾರವೆನೆಂದರೆ ನಮ್ಮ ಮಗಳು ನಮಗಾಗಿ ಕೇಕ್ ತಯಾರಿಸಿದ್ದಾಳೆ” ಎಂದು ಪೋಸ್ಟ್ ಮಾಡಿದ್ದಾರೆ.

ಕಳೆದ ವರ್ಷ ಸರೊಗಸಿ ಮೂಲಕ ಸನ್ನಿ ಲಿಯೋನ್ ಹಾಗೂ ಅವರ ಪತಿ ಡೇನಿಯಲ್ ವೆಬರ್ ಇಬ್ಬರು ಅವಳಿ ಗಂಡು ಮಕ್ಕಳನ್ನು ಪಡೆದಿದ್ದರು. ಅಲ್ಲದೆ ಸನ್ನಿ 2017ರಲ್ಲಿ ಮಹಾರಾಷ್ಟ್ರದ ಲಾತೂರಿನಲ್ಲಿ ನಿಶಾ ಎಂಬ ಮಗುವನ್ನು ದತ್ತು ಪಡೆದುಕೊಂಡಿದ್ದರು.

ಸನ್ನಿ ಲಿಯೋನ್ ಹಿಂದಿ ರಿಯಾಲಿಟಿ ಶೋ ಬಿಗ್ ಬಾಸ್-5 ಕಾರ್ಯಕ್ರಮದ ಮೂಲಕ ಭಾರತೀಯ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಅವರು, ‘ಜಿಸ್ಮ್-2’, ‘ಹೇಟ್ ಸ್ಟೋರಿ-2’, ‘ರಾಗಿಣಿ ಎಂಎಂಎಸ್-2’ ಹಾಗೂ ‘ಏಕ್ ಪೆಹಲಿ ಲೀಲಾ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಸದ್ಯ ಸನ್ನಿ ಲಿಯೋನ್ ಈಗ `ವೀರಮಾದೇವಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Comments are closed.