ಮನೋರಂಜನೆ

ಸುಮಲತಾ ಅಂಬರೀಶ್ ಪರ ಪ್ರಚಾರದ ವೇಳೆ ನಟ ಯಶ್’ಗೆ ನಿಂಬೆಹಣ್ಣು ಕೊಟ್ಟ ಅಭಿಮಾನಿ ! ಯಾಕೆ ಗೊತ್ತೇ ?

Pinterest LinkedIn Tumblr

ಮಂಡ್ಯ: ಸದ್ಯ ಕರ್ನಾಟಕ ರಾಜಕೀಯದಲ್ಲಿ ನಿಂಬೆಹಣ್ಣು ಸಹ ದೊಡ್ಡ ಹೆಸರು ಮಾಡಿದೆ. ಪ್ರಮುಖ ನಾಯಕರು ತಮ್ಮ ಕೈಯಲ್ಲಿ ನಿಂಬೆಹಣ್ಣು ಹಿಟ್ಟುಕೊಂಡು ತಿರುಗುತ್ತಿರುವುದು ನಿಂಬೆಹಣ್ಣಿಗೂ ಬೆಲೆ ಜಾಸ್ತಿಯಾಗಿದೆ. ಈ ಮಧ್ಯೆ ಪ್ರಚಾರದಲ್ಲಿ ತೊಡಗಿದ್ದ ರಾಕಿಂಗ್ ಸ್ಟಾರ್ ಯಶ್‍ಗೆ ಅಭಿಮಾನಿಯೊಬ್ಬ ನಿಂಬೆಹಣ್ಣು ಕೊಟ್ಟಿದ್ದಾರೆ.

ಸ್ವತಂತ್ರ್ಯ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಯಶ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇಂದು ಹಳ್ಳಿಕೆರೆಯಲ್ಲಿ ಪ್ರಚಾರ ಮಾಡುತ್ತಿದ್ದಾಗ ಅಭಿಮಾನಿಯೊಬ್ಬ ಯಶ್ ಗೆ ಅಣ್ಣ ಸೇಫ್ಟಿಗೆ ಇರಲಿ ಅಂತಾ ನಿಂಬೆಹಣ್ಣನ್ನು ಕೊಟ್ಟಿದ್ದಾರೆ.

ಅಭಿಮಾನಿ ನಿಂಬೆಹಣ್ಣು ಕೊಟ್ಟಾಗ ಯಶ್ ಯಾಕೋ ನಿಂಬೆಹಣ್ಣು ಸೇಫ್ಟಿಗಾ? ಎಂದು ಗ್ರಾಮಸ್ಥರ ಮುಂದೆ ನಿಂಬೆಹಣ್ಣನ್ನು ಕೈಯಲ್ಲಿ ಹಿಡಿದು ತೋರಿಸಿದರು. ಬಳಿಕ ಜನರ ಪ್ರೀತಿ ಇರುವವರೆಗೂ ಇದ್ಯಾವುದೂ ಬೇಡ ಬಿಡ್ರೋ ಅಂತ ಹೇಳಿ ಪ್ರಚಾರ ಕಾರ್ಯ ಮುಂದುವರೆಸಿದರು.

Comments are closed.