ಕ್ರೀಡೆ

ಪಂದ್ಯ ಮುಗಿದ ಬಳಿಕ ಚೆನ್ನೈ ಏರ್​ಪೋರ್ಟ್​ನಲ್ಲಿ ನೆಲದ ಮೇಲೆಯೇ ಮಲಗಿದ ಎಂ.ಎಸ್​.ಧೋನಿ ಮತ್ತು ಸಾಕ್ಷಿ

Pinterest LinkedIn Tumblr

ಚೆನ್ನೈ: ಭಾರತ ಕ್ರಿಕೆಟ್​ ತಂಡದ ಮಾಜಿ ಕ್ಯಾಪ್ಟನ್​, ಸದ್ಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ ತುಂಬ ಸರಳ. ಅವರ ಸರಳತೆ ಈಗಾಗಲೇ ಹಲವು ಬಾರಿ ಬೆಳಕಿಗೆ ಬಂದಿದೆ. ಈಗ ಮತ್ತೊಮ್ಮೆ ಧೋನಿ ಇದೇ ವಿಷಯಕ್ಕೆ ಸುದ್ದಿಯಾಗಿದ್ದಾರೆ.

ಕೋಲ್ಕತಾ ನೈಟ್​ ರೈಡರ್ಸ್​ ವಿರುದ್ಧ ಜಯ ಸಾಧಿಸಿದ ಧೋನಿ ಟೀಂ ಬುಧವಾರ ಬೆಳಗ್ಗೆಯೇ ಜಯಪುರಕ್ಕೆ ಹೊರಡಬೇಕಿತ್ತು. ಈ ವೇಳೆ ಚೆನ್ನೈ ಏರ್​ಪೋರ್ಟ್​ನಲ್ಲಿ ಧೋನಿ ಹಾಗೂ ಅವರ ಪತ್ನಿ ನೆಲದ ಮೇಲೆಯೇ ಮಲಗಿ ನಿದ್ರೆ ಹೋಗಿದ್ದಾರೆ. ಈ ಫೋಟೋ ಈಗ ಟ್ವಿಟರ್​ನಲ್ಲಿ ವೈರಲ್​ ಆಗಿದೆ.

ಮಂಗಳವಾರ ಚೆನ್ನೈ ಕ್ರೀಡಾಂಗಣದಲ್ಲಿ ಕೆಕೆಆರ್​ ವಿರುದ್ಧ ಸಿಎಸ್​ಕೆ ಗೆಲುವು ಸಾಧಿಸಿತು. ಆದರೆ, ಗುರುವಾರ ಜಯಪುರದಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಬುಧವಾರ ಮುಂಜಾನೆಯ ಫ್ಲೈಟ್​ಗೆ ಟೀಂ ತೆರಳಬೇಕಿತ್ತು. ಈ ವೇಳೆ ಸಾಕ್ಷಿ ಕೂಡ ಜತೆಯಲ್ಲಿದ್ದರು. ಮುಂಜಾನೆ ತಂಡದ ಆಟಗಾರರೊಂದಿಗೆ ಏರ್​ಪೋರ್ಟ್​ಗೆ ತೆರಳಿದ್ದರು. ವಿಮಾನಕ್ಕಾಗಿ ಕಾಯುತ್ತಿದ್ದ ಮಹೇಂದ್ರ ಸಿಂಗ್​ ಧೋನಿ ಹಾಗೂ ಸಾಕ್ಷಿ ತಮ್ಮ ಬ್ಯಾಗ್​ ಅನ್ನೇ ತಲೆದಿಂಬಾಗಿಸಿಕೊಂಡು ನೆಲದ ಮೇಲೆ ಮಲಗಿದ್ದಾರೆ.

ಈ ಫೋಟೋವನ್ನು ಧೋನಿ ಕೂಡ ತಮ್ಮ ಇನ್​ಸ್ಟಾಗ್ರಾಂನಲ್ಲಿ ಈ ಫೋಟೋ ಶೇರ್​ ಮಾಡಿಕೊಂಡಿದ್ದಾರೆ.

Comments are closed.