ಮನೋರಂಜನೆ

‘ಕೆಜಿಎಫ್’ ಸಿನಿಮಾದಲ್ಲಿ ಖಳನಟನಾಗಿ ಅಬ್ಬರಿಸಿದ್ದ ಗರುಡನಿಂದ ದುಬಾರಿ ಕಾರು ಖರೀದಿ

Pinterest LinkedIn Tumblr


ಬೆಂಗಳೂರು: ಕರ್ನಾಟಕದಲ್ಲಿ ಇತಿಹಾಸ ನಿರ್ಮಿಸಿದ್ದ ‘ಕೆಜಿಎಫ್’ ಸಿನಿಮಾದಲ್ಲಿ ಖಳನಟನಾಗಿ ಅಬ್ಬರಿಸಿದ್ದ ಗರುಡ ಅವರು ದುಬಾರಿ ಕಾರನ್ನು ಖರೀದಿಸಿದ್ದಾರೆ.

ರಾಮಚಂದ್ರ ರಾಜು ಅವರು ಕೆಜಿಎಫ್ ಸಿನಿಮಾದಲ್ಲಿ ಗರುಡ ಪಾತ್ರದಲ್ಲಿ ಮಿಂಚಿದ್ದರು. ‘ಕೆಜಿಎಫ್’ ಸಿನಿಮಾದ ಮೊದಲ ಭಾಗದಲ್ಲಿ ರಾಕಿ ಭಾಯ್‍ಯಿಂದ ಕೊಲೆಯಾಗುವ ಗರುಡ ಪಾತ್ರಧಾರಿ ಪಾರ್ಟ್-2 ಗೆ ರೋಚಕ ತಿರುವು ನೀಡುವ ಮೂಲಕ ಅಭಿಮಾನಿಗಳಲ್ಲಿ ಉಳಿದುಕೊಂಡಿದ್ದಾರೆ.

‘ಕೆಜಿಎಫ್’ ನ ಸಕ್ಸಸ್ ಖುಷಿಯಲ್ಲಿರುವ ರಾಮ್ ಅವರು ಇವರು ಬಿಳಿ ಬಣ್ಣದ ಫಾರ್ಚೂನರ್ ಕಾರು ಖರೀದಿಸಿದ್ದಾರೆ. ವಿಶೇಷವೆಂದರೆ ಕಾರಿನ ಮೇಲೆ ಅವರಿಗೆ ಇಷ್ಟವಾದ ಮತ್ತು ತಮಗೆ ಖ್ಯಾತಿ ತಂದುಕೊಟ್ಟ ‘ಗರುಡ’ ಪ್ರತಿಮೆ ಹಾಕಿಸಿಕೊಂಡಿದ್ದಾರೆ. ಈ ಖುಷಿಯನ್ನು ತಮ್ಮ ಗೆಳೆಯ ನಟ ಯಶ್ ಜೊತೆ ಹಂಚಿಕೊಂಡಿದ್ದಾರೆ.

ರಾಮ್ ಅವರು ಕಾರ್ ಖರೀದಿಸಿದ ತಕ್ಷಣ ನೇರವಾಗಿ ಯಶ್ ಮನೆಗೆ ಹೋಗಿ ಹೊಸ ಕಾರನ್ನು ಅವರಿಗೆ ತೋರಿಸಿದ್ದಾರೆ. ಜೊತೆಗೆ ಅವರ ಮತ್ತು ಕಾರಿನ ಜೊತೆ ನಿಂತುಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕಾರು ಖರೀದಿಸಿದ್ದ ತಮ್ಮ ಗೆಳೆಯ ರಾಮ್ ಅವರಿಗೆ ಯಶ್ ಶುಭ ಕೋರಿದ್ದಾರೆ.

ಯಶ್ ಮತ್ತು ರಾಮ್ ಅವರು ಇಬ್ಬರು ಸ್ನೇಹಿತರಾಗಿದ್ದಾರೆ. ರಾಮ್ ಯಾವಾಗಲೂ ಯಶ್ ಜೊತೆಯೇ ಇರುತ್ತಿದ್ದರು. ‘ಕೆಜಿಎಫ್’ ಸಿನಿಮಾದಲ್ಲಿ ಗರುಡ ಪಾತ್ರಕ್ಕೆ ಅಭಿನಯಿಸಲು ಅವಕಾಶ ಕೊಟ್ಟಿದ್ದಕ್ಕೆ ಯಶ್ ಮೇಲೆ ಅಪಾರ ಅಭಿಮಾನ ಇಟ್ಟುಕೊಂಡಿದ್ದಾರೆ. ಸದ್ಯಕ್ಕೆ ರಾಮ್ ಅವರು ರಶ್ಮಿಕಾ ಮಂದಣ್ಣ ಮತ್ತು ಕಾರ್ತಿಕ್ ಅಭಿನಯಿಸುತ್ತಿರುವ ತಮಿಳು ಸಿನಿಮಾದಲ್ಲಿ ವಿಲನ್ ಆಗಿ ಅಭಿನಯಿಸುತ್ತಿದ್ದಾರೆ.

Comments are closed.