ಮನೋರಂಜನೆ

ಸಲ್ಮಾನ್ ಖಾನ್ ಅಭಿನಯದ ‘ದಬಾಂಗ್-3’ ಚಿತ್ರತಂಡವನ್ನು ಸೇರಿಕೊಳ್ಳಲಿರುವ ಕಿಚ್ಚ ಸುದೀಪ್

Pinterest LinkedIn Tumblr

ಬೆಂಗಳೂರು: ಪ್ರಭುದೇವ ನಿರ್ದೇಶನದ ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ದಬಾಂಗ್-3 ಚಿತ್ರದ ಚಿತ್ರೀಕರಣ ಇಂದೋರ್ ನಲ್ಲಿ ಇಂದಿನಿಂದ ಆರಂಭವಾಗುತ್ತಿದ್ದು, ಮೇ ಮೊದಲ ವಾರದಿಂದ ಕಿಚ್ಚ ಸುದೀಪ್ ಕೂಡಾ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.

ಪೊಂಕ್, ರಣ್, ಮತ್ತು ರಕ್ತ ಚರಿತ್ರ ಚಿತ್ರಗಳಲ್ಲಿ ಅಭಿನಯದ ಮೂಲಕ ಬಾಲಿವುಡ್ ನಲ್ಲಿ ಹೆಸರಾಗಿರುವ ಕಿಚ್ಚ ಸುದೀಪ್ ದಬಾಂಗ್ -3ರಲ್ಲಿ ವಿಲಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸುದೀಪ್ ಅಭಿನಯದ ತೆಲುಗು ಚಿತ್ರ ಈಗಾ ಹಿಂದಿಯಲ್ಲಿ ಮಕ್ಕಿ ಚಿತ್ರವಾಗಿ ಬಿಡುಗಡೆಯಾಗಿತ್ತು. ದಶಕದ ನಂತರ ಸುದೀಪ್ ಮತ್ತೆ ಬಾಲಿವುಡ್ ನಲ್ಲಿ ಅಭಿನಯಿಸುತ್ತದ್ದಾರೆ. ಸಲ್ಮಾನ್ ಖಾನ್ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮೂಲಕ ಈ ಚಿತ್ರದ ಬಗ್ಗೆ ವಿಷಯವನ್ನು ಹಂಚಿಕೊಂಡಿದ್ದಾರೆ.

ದಬಾಂಗ್ -3 ಚಿತ್ರದ ಚಿತ್ರೀಕರಣಕ್ಕಾಗಿ ತಮ್ಮ ಹುಟ್ಟೂರು ಇಂದೋರ್ ನ ಮಂಡಲೇಶ್ವರ ಹಾಗೂ ಮಹೇಶ್ವರ ನಗರಕ್ಕೆ ಸಹೋದರ್ ಅರ್ಬಾಜ್ ಖಾನ್ ಜೊತೆ ಬಂದಿಳಿದಿರುವುದಾಗಿ ಸಲ್ಮಾನ್ ಖಾನ್ ತಿಳಿಸಿದ್ದಾರೆ.

Comments are closed.