ರಾಷ್ಟ್ರೀಯ

ಪಾಕ್ ನ 7 ಪೋಸ್ಟ್ ಗಳು ಧ್ವಂಸ! ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಭಾರತೀಯ ಯೋಧರು ತಕ್ಕ ಪ್ರತ್ಯುತ್ತರ

Pinterest LinkedIn Tumblr

ಜಮ್ಮು: ರಜೌರಿ ಹಾಗೂ ಪೂಂಚ್ ಜಿಲ್ಲೆಗಳಲ್ಲಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಭಾರತೀಯ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

ಎಲ್ ಒಸಿಯಲ್ಲಿ ಪಾಕಿಸ್ತಾನ ನಡೆಸುತ್ತಿದ್ದ ಶೆಲ್ ದಾಳಿಗೆ ಪ್ರತಿಯಾಗಿ ಭಾರತೀಯ ಯೋಧರೂ ದಾಳಿ ನಡೆಸಿದ್ದಾರೆ. ಪರಿಣಾಮ ಪಾಕಿಸ್ತಾನದ 7 ಪೋಸ್ಟ್ ಗಳು ಧ್ವಂಸಗೊಂಡಿದ್ದು, ಪಾಕಿಸ್ತಾನದ ಸೈನ್ಯಕ್ಕೆ ತೀವ್ರ ಹಾನಿಯುಂಟಾಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಗಡಿ ಭಾಗದಲ್ಲಿರುವ ಎಲ್ಲಾ ಶಾಲೆಗಳಿಗೂ ರಜೆ ನೀಡಲಾಗಿದೆ. ಪಾಕಿಸ್ತಾನದ ಶೆಲ್ ದಾಳಿಗೆ ಏ.1 ರಂದು ಬಿಎಸ್ ಎಫ್ ಇನ್ಸ್ ಪೆಕ್ಟರ್ ಹಾಗೂ 5 ವರ್ಶದ ಬಾಲಕಿ ಮೃತಪಟ್ಟಿದ್ದರೆ 24 ಜನರು ಗಾಯಗೊಂಡಿದ್ದರು.

ಏ.2 ರಂದೂ ಸಹ ಶೆಲ್ಲಿಂಗ್ ಮುಂದುವರೆದಿದ್ದು, ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಭಾರತದ ಪ್ರತಿ ದಾಳಿಗೆ ಪಾಕ್ ಆಕ್ರಮಿತ ಕಾಶ್ಮೀರದ ರಾಖಿಕ್ರಿ ಮತ್ತು ರಾವಲಕೋಟೆ ಫಾರ್ವರ್ಡ್ ಏರಿಯಾಗಳಲ್ಲಿ ಪಾಕ್ ಪೋಸ್ಟ್ ಗಳು ಧ್ವಂಸಗೊಂಡಿದ್ದು, ಸಾವುನೋವುಗಳು ಸಂಭವಿಸಿದೆ ಎಂದು ಪಾಕ್ ನ ಸೇನೆ ಹೇಳಿದೆ.

Comments are closed.