ಕರಾವಳಿ

ಸುರತ್ಕಲ್‌ನಲ್ಲಿ ಮಾತೃವಂದನಾ, ಮಾತೃ ಧ್ಯಾನ ಕಾರ್ಯಕ್ರಮ / ಯೋಗದಿಂದ ಆರೋಗ್ಯ ಸುಧಾರಣೆ: ಸುಧಾಕರ ಪೂಂಜಾ

Pinterest LinkedIn Tumblr

ಸುರತ್ಕಲ್: ಎಸ್.ಪಿ.ವೈ.ಎಸ್.ಎಸ್.ಯೋಗ ಸಮಿತಿಯ ವತಿಯಿಂದ ಸುರತ್ಕಲ್ ಬಂಟರಸಂಘದ ಆಶ್ರಯದಲ್ಲಿ ಮಾತೃವಂದನಾ, ಮಾತೃಧ್ಯಾನ, ಮಾತೃಭೋಜನ ಕಾರ್ಯಕ್ರಮ ಬಂಟರ ಭವನದಲ್ಲಿ ಜರುಗಿತು.

ಕಾರ್ಯಕ್ರಮದ ಮೊದಲಿಗೆ ಯೋಗಬಂಧುಗಳಿಗೆ ಹಾಗೂ ಸಾರ್ವಜನಿಕರಿಗೆ ದೇಶೀಯ ಬಾಲ್ಯದ ಆಟಗಳನ್ನು ಆಡಿಸಲಾಯಿತು. ತದನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಮಾತೆಯ ಹಾಗೂ ಮಾತೃತ್ವದ ಮಹತ್ವದ ಬಗ್ಗೆ, ಸಮಿತಿಯ ಜಿಲ್ಲಾ ಸಂಘಟನಾ ಪ್ರಮುಖರಾದ ಶಿವಪ್ರಸಾದ್ ಇವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಮನಮುಟ್ಟುವಂತೆ ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ ಮಾತನಾಡಿ, ಯೋಗದಿಂದ ಆರೋಗ್ಯ ಸುಧಾರಣೆಯಾಗುತ್ತದೆ. ಸುರತ್ಕಲ್ ಬಂಟರ ಸಂಘವು ಸಮಾಜ ಸೇವಾ ಕಾರ್ಯಕ್ರಮಕ್ಕೆ ಆದ್ಯತೆ ಕೊಡುವ ನಿಟ್ಟಿನಲ್ಲಿ ಈ ಯೋಗಾಭ್ಯಾಸವನ್ನು ಮುಂದುವರಿಸಲು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಯೋಗ ಬಂಧುಗಳನ್ನು ಸೇರಿಸಿ, ಸಂಸ್ಕಾರ , ಸಂಘಟನೆ, ಸೇವೆಯ ಮೂಲಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಿ. ಇದಕ್ಕೆ ಸುರತ್ಕಲ್ ಬಂಟರ ಸಂಘದ ಸಹಕಾರವು ಇದೆ ಎಂದರು. ಸುರತ್ಕಲ್ ಬಂಟರ ಸಂಘದ ನಿರ್ದೇಶಕಿ ಸುಜಾತ ಶೆಟ್ಟಿ ಕಾಟಿಪಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಭಾಕಾರ್ಯಕ್ರಮದ ಬಳಿಕ ಮಾತೃಭೋಜನದಲ್ಲಿ ದೇಶೀಯ ಅಡುಗೆಗಳನ್ನು ಅಮ್ಮನ ನೆನಪಿನೊಂದಿಗೆ ಕೈತುತ್ತು ನೀಡಲಾಯಿತು.
ಉಚಿತವಾಗಿ ಯೋಗಶಿಕ್ಷಣ ಪಡೆದಂತಹ ಬಂಧುಗಳು ನೆನಪಿನ ಕಾಣಿಕೆಯನ್ನು ಬಂಟರಭವನಕ್ಕೆ ನೀಡಿದರು.

ನೇತ್ರಾವತಿ ವಲಯ ಸಂಚಾಲಕರಾದ ಹರೀಶ್ ಕೋಟ್ಯಾನ್ ಮಾರ್ಗದರ್ಶನ ಮಾಡಿದರು. ನಂದನೇಶ್ವರ ಉಪವಲಯ ಸಹಸಂಚಾಲ ಕರಾದ ಜಗನ್ನಾಥ ಜಿಲ್ಲಾ ಸೇವಾ ಪ್ರಮುಖರಾದ ಚಂದ್ರಶೇಖರ , ವ್ಯವಸ್ಥಾಪನಾ ಪ್ರಮುಖರಾದ ಲಕ್ಷ್ಮೀ ನಾರಾಯಣ, ಹಾಗೂ ಬಂಟರ ಸಂಘದ ಪದಾಧಿಕಾರಿಗಳಾದ ಜಗನ್ನಾಥ ಶೆಟ್ಟಿ ಬಾಳ, ರತ್ನಾಕರ ಶೆಟ್ಟಿ, ಪ್ರವೀಣ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ ಅಧ್ಯಕ್ಷೆ ಬೇಬಿ ಶೆಟ್ಟಿ ಮಹಿಳಾ ವೇದಿಕೆಯ ಕಾರ್ಯದರ್ಶಿ ಚಿತ್ರಾ ಜೆ. ಶೆಟ್ಟಿ, ಸತೀಶ್ ಶೆಟ್ಟಿ ಬಾಳಿಕೆ ಮೊದಲಾದವರು ಉಪಸ್ಥಿತರಿದ್ದರು.

ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು. ದೀಕ್ಷಾ ಸ್ವಾಗತಿಸಿದರು ಹಾಗೂ ಶಾಶ್ವಿತ ವಂದಿಸಿದರು.

Comments are closed.