ಮನೋರಂಜನೆ

ರಜನಿಕಾಂತ್’ಗೆ ಸೂಪರ್ ಸ್ಟಾರ್ ಪಟ್ಟ ತಂದುಕೊಟ್ಟ ಹಿರಿಯ ನಿರ್ದೇಶಕ ಜೆ.ಮಹೇಂದ್ರನ್ ನಿಧನ

Pinterest LinkedIn Tumblr

ಚೆನ್ನೈ: ಕಾಲಿವುಡ್ ನ ಹಿರಿಯ ಸಿನಿಮಾ ನಿರ್ದೇಶಕ ಜೆ. ಮಹೇಂದ್ರನ್ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ.

79 ವರ್ಷದ ಮಹೇಂದ್ರನ್ ಮುಳ್ಳುಮ್ ಮಲರುಮ್, ಉದಿರಿ ಪೂಕ್ಕಳ್ ಎಂಬಂತಹ ಎವರ್ ಗ್ರೀನ್ ಸಿನಿಮಾ ನೀಡಿದ್ದಾರೆ, ತೀವ್ರ ಆನಾರೋಗ್ಯದ ಕಾರಣ ಮಹೇಂದ್ರನ್ ಅವರನ್ನು ಮಾರ್ಚ್ 27 ರಂದು ಚೆನ್ನೈ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಹೇಂದ್ರನ್ ಅವರ ಪುತ್ರ ಈ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯ ತಿಳಿಸಿದ್ದಾರೆ, ನೆಂಜತ್ತೆಯ್ ಕಿಲ್ಲಾದೆ ಎಂಬ ಸಿನಿಮಾ ನಿರ್ದೇಶಿಸಿದ್ದಾರೆ.

ರಜನಿಕಾಂತ್ ಅವರ ಆರಂಭಿಕ ದಿನಗಳಲ್ಲಿ ಅವರಿಗೆ ಮಾರ್ಗದರ್ಶಕರಾಗಿದ್ದರು. ತಮ್ಮ ಯಶಸ್ಸಿಗೆ ಹಿರಿಯ ನಿರ್ದೇಶಕರೇ ಕಾರಣ ಎಂದು ಹಲವು ಬಾರಿ ರಜನಿಕಾಂತ್ ಹೇಳಿದ್ದಾರೆ. ಇಂದು ಬೆಳಗ್ಗೆ 10 ಗಂಟೆಯಿಂದ ಮಹೇಂದ್ರನ್ ಅವರ ನಿವಾಸದಲ್ಲಿ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು, ಸಂಜೆ 5 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ.

Comments are closed.