ಅಂತರಾಷ್ಟ್ರೀಯ

ಭಾರತದ ಎ-ಸ್ಯಾಟ್ ಪರೀಕ್ಷೆಯಿಂದ ಅಂತರಿಕ್ಷದಲ್ಲಿ 400 ಚೂರುಗಳ ಅವಶೇಷ, ಅಂತಾರಾಷ್ಟ್ರೀಯ ಅಂತರಿಕ್ಷ ಕೇಂದ್ರಕ್ಕೆ ಅಪಾಯ : ನಾಸಾ

Pinterest LinkedIn Tumblr

ವಾಷಿಂಗ್ಟನ್: ಭಾರತ ನಾಶಪಡಿಸಿದ ತನ್ನ ಒಂದು ಉಪಗ್ರಹದಿಂದ ಅಂತರಿಕ್ಷ ಕಕ್ಷೆಯಲ್ಲಿ ಸುಮಾರು 400 ಚೂರುಗಳು ಸೃಷ್ಟಿಯಾಗಿದ್ದು ಇದರಿಂದ ಅಂತಾರಾಷ್ಟ್ರೀಯ ಅಂತರಿಕ್ಷ ಕೇಂದ್ರಕ್ಕೆ(ಐಎಸ್ಎಸ್) ಅಪಾಯ ಎದುರಾಗಿದೆ.

ಇಲ್ಲಿಯವರೆಗೆ ಉಪಗ್ರಹದ 60 ಚೂರುಗಳನ್ನು ಪತ್ತೆಹಚ್ಚಲಾಗಿದ್ದು ಅವುಗಳಲ್ಲಿ 24 ಚೂರುಗಳು ಅಂತಾರಾಷ್ಟ್ರೀಯ ಅಂತರಿಕ್ಷ ಕೇಂದ್ರದ ತುತ್ತತುದಿಯಿಂದ ಮೇಲಕ್ಕೆ ಹೋಗಿದೆ ಎಂದು ನಾಸಾ ಆಡಳಿತ ಮುಖ್ಯಸ್ಥ ಜಿಮ್ ಬ್ರಿಡೆನ್ಸ್ಟೈನ್ ತಿಳಿಸಿದ್ದಾರೆ.

ಇದೊಂದು ಭೀಕರವಾಗಿದ್ದು ಅಂತಾರಾಷ್ಟ್ರೀಯ ಅಂತರಿಕ್ಷ ಕೇಂದ್ರದಿಂದ ಮೇಲಕ್ಕೆ ಅವಶೇಷಗಳು ಹೋಗುತ್ತವೆ. ಈ ರೀತಿಯ ಚಟುವಟಿಕೆಯು ಮಾನವ ಬಾಹ್ಯಾಕಾಶನೌಕೆಯ ಭವಿಷ್ಯದೊಂದಿಗೆ ಹೊಂದಾಣಿಕೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಕಳೆದ ವಾರ ಭಾರತ ನಡೆಸಿದ ಎಸ್ಯಾಟ್ ಪರೀಕ್ಷೆಯಿಂದ ಅಂತರಿಕ್ಷದಲ್ಲಿ ಸುಮಾರು 400 ಅವಶೇಷಗಳು ಸಿಕ್ಕಿವೆ ಎಂದು ಹೇಳಿದರು.ಇವುಗಳನ್ನು ಪತ್ತೆಹಚ್ಚಲು ಎಲ್ಲಾ ಚೂರುಗಳು ದೊಡ್ಡದಾಗಿಲ್ಲ, ನಾಸಾ ಸದ್ಯ 10 ಸೆಂಟಿ ಮೀಟರ್ ಮತ್ತು ಅದಕ್ಕಿಂತ ದೊಡ್ಡ ಚೂರುಗಳನ್ನು ಪತ್ತೆಹಚ್ಚುವ ಕೆಲಸದಲ್ಲಿ ತೊಡಗಿದೆ, ಇದುವರೆಗೆ ಕಂಡುಹಿಡಿದಿರುವ 60 ಚೂರುಗಳಲ್ಲಿ ಸುಮಾರು 24 ಚೂರುಗಳು ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಅಪಾಯಕಾರಿಯಾದವು ಎಂದು ಜಿಮ್ ಬ್ರಿಡೆನ್ಸ್ಟೈನ್ ತಿಳಿಸಿದರು.

ಕೆಳಗಿನ ಕಕ್ಷೆಯಲ್ಲಿದ್ದ ತನ್ನ ಉಪಗ್ರಹವನ್ನು ಭಾರತದ ಕ್ಷಿಪಣಿ ನಾಶಪಡಿಸಿದ ನಾಲ್ಕೈದು ದಿನಗಳ ಬಳಿಕ ನಾಸಾದ ಆಡಳಿತ ಮುಖ್ಯಸ್ಥ ಜಿಮ್ ಬ್ರಿಡೆನ್ಸ್ಟೈನ್ ಅಲ್ಲಿನ ಸಿಬ್ಬಂದಿ ಉದ್ದೇಶಿಸಿ ಮಾತನಾಡಿದರು. ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆ ಮೂಲಕ ಭಾರತ ಜಗತ್ತಿನಲ್ಲಿ ಅತ್ಯಾಧುನಿಕ ಗಗನಶಕ್ತಿ ಹೊಂದಿರುವ ರಾಷ್ಟ್ರಗಳಲ್ಲಿ ತನ್ನ ಸ್ಥಾನ ಖಚಿತಪಡಿಸಿತ್ತು. ಈ ವಿಷಯವನ್ನು ಕಳೆದ ವಾರ ಸ್ವತಃ ಪ್ರಧಾನಿ ಮೋದಿ ತಿಳಿಸಿದ್ದರು.

ಭಾರತ ನಾಶಪಡಿಸಿರುವ ಉಪಗ್ರಹ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಹಾಗೂ ಬಹುತೇಕ ಉಪಗ್ರಹಗಳು ಸುತ್ತುತ್ತಿರುವ ಕಕ್ಷೆಗಿಂತಲೂ ಕೆಳ ಮಟ್ಟದಲ್ಲಿ ಅಂದರೆ ಭೂಮಿಯಿಂದ ಸುಮಾರು 300 ಕಿಮೀ ಎತ್ತರದಲ್ಲಿತ್ತು.

ಕಡಿಮೆ ಭೂಸ್ಥಿರ ಕಕ್ಷೆಯ ವಾಣಿಜ್ಯೀಕರಣಗೊಳಿಸುವ ಬಗ್ಗೆ ನಮ್ಮ ಆರೋಪವಿದೆ. ಮಾನವನ ಜೀವನಕ್ಕೆ ಅಪಾಯವಾಗುವ ರೀತಿಯಲ್ಲಿ ಅಂತರಿಕ್ಷದಲ್ಲಿ ಇನ್ನಷ್ಟು ಚಟುವಟಿಕೆಗಳಿಗೆ ಅನುವು ಮಾಡಿಕೊಡುವುದರ ಬಗ್ಗೆ ನಮ್ಮ ಆಕ್ಷೇಪವಿದೆ. ಇಂತಹ ಪ್ರಯೋಗಗಳು ನಡೆದರೆ ಭೂಮಿ ಮೇಲಿರುವ ಎಲ್ಲಾ ರೀತಿಯ ಜೀವಸಂಕುಲಕ್ಕೆ ಅಪಾಯಗಳು ಎದುರಾಗುತ್ತವೆ. ಭಾರತದ ಎಸ್ಯಾಟ್ ಪರೀಕ್ಷೆಯಿಂದ ಬೇರೆ ದೇಶಗಳು ಇಂತಹ ಚಟುವಟಿಕೆಗಳನ್ನು ನಡೆಸುವ ಸಾಧ್ಯತೆಯಿದೆ ಎಂಬ ಆತಂಕವಿದೆ ಎಂದು ಬ್ರೈಡೆನ್ಸ್ಟೈನ್ ಹೇಳಿದ್ದಾರೆ.

ಒಂದು ದೇಶ ಇಂತಹ ಪ್ರಯೋಗ ಮಾಡಿದಾಗ ಇನ್ನೊಂದು ದೇಶ ಅದನ್ನು ಅನುಕರಿಸಲು ನೋಡುತ್ತದೆ, ತಾನು ಕೂಡ ಅಂತಹ ಪ್ರಯೋಗ ನಡೆಸಬಾರದೇಕೆ ಎಂಬ ಯೋಚನೆಗೆ ಮುಂದಾಗುತ್ತದೆ. ಇಂತಹ ನಡೆಯನ್ನು ಒಪ್ಪಲು ಸಾಧ್ಯವಿಲ್ಲ. ಇಂತಹ ಪ್ರಯೋಗಗಳು ನಮ್ಮ ಮೇಲೆ ಯಾವ ರೀತಿಯ ಅಪಾಯ ತಂದೊಡ್ಡುತ್ತದೆ ಎಂಬ ಬಗ್ಗೆ ನಾಸಾ ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಹೇಳಿದರು.

Comments are closed.