ಕರ್ನಾಟಕ

ಬೆಂಗಳೂರಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಮೂವರು ಯುವಕರಿಂದ ಗ್ಯಾಂಗ್ ರೇಪ್

Pinterest LinkedIn Tumblr

ಬೆಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಮೂವರು ಯುವಕರು ಗ್ಯಾಂಗ್ ರೇಪ್ ಮಾಡಿರುವ ಘಟನೆ ವೈಟ್ ಫೀಲ್ಡ್ ಬಳಿಯ ಕಾಡುಗೋಡಿಯಲ್ಲಿ ನಡೆದಿದೆ.

ಕಲಾವತಿ ( ಹೆಸರು ಬದಲಿಸಲಾಗಿದೆ) ಮೇಲೆ ಕಾಮಾಂಧರು ಅತ್ಯಾಚಾರ ನಡೆಸಿದ್ದಾರೆ. ಆಕೆಯ ಕಿರುಚಾಟದಿಂದಾಗಿ ಸ್ಥಳಕ್ಕೆ ಧಾವಿಸಿದ ನೆರೆಹೊರೆಯವರು ಆರೋಪಿಗಳನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.

ಹರೀಶ್ ಕುಮಾರ್ (22) ವೆಂಕಟಾಚಲಪತಿ (19) ಮತ್ತು ಬಾಪಿಲ್ ಅಸರುಲ್ಲಾ ಖಾನ್ (22) ಬಂಧಿತ ಆರೋಪಿಗಳು ಇವರೆಲ್ಲರೂ ಕಾಡುಗೋಡಿಯ ನಿವಾಸಿಯಾಗಿದ್ದಾರೆ.ಆರೋಪಿಗಳ ಮೇಲೆ ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ರಾತ್ರಿ 8-30ರ ಸುಮಾರಿನಲ್ಲಿ ಬಾಲಕಿ ಹತ್ತಿರದ ಪ್ರಾವಿಷನ್ ಸ್ಟೋರಿಗೆ ಹೋಗುತ್ತಿದ್ದಾಗ ಆಕೆಯನ್ನು ಹರೀಶ್ ಹಿಂಬಾಲಿಸಿದ್ದು, ಮಾತಾನಾಡಲು ಬರುವಂತೆ ಕೇಳಿದ್ದಾನೆ. ಅದಕ್ಕೆ ಆಕೆ ನಿರಾಕಿಸಿದ್ದಾಗ ಸ್ನೇಹಿತ ವೆಂಕಟಾಚಲಪತಿಯನ್ನು ಕರೆದಿದ್ದಾನೆ. ನಂತರ ಖಾನ್ ಕೂಡಾ ಸೇರಿಕೊಂಡಿದ್ದಾನೆ ಎಂದು ಡಿಸಿಪಿ ಅಬ್ದುಲ್ ಅಹಾದ್ ತಿಳಿಸಿದ್ದಾರೆ.

ಬಾಲಕಿಯನ್ನು ಹತ್ತಿರದ ಸಾರ್ವಜನಿಕರ ಪ್ರವೇಶವಿಲ್ಲದ ಪ್ರದೇಶವೊಂದಕ್ಕೆ ಕರೆದೊಯ್ದು ಹರೀಶ್ ಹಾಗೂ ವೆಂಕಟಾಚಲಪತಿ ಅತ್ಯಾಚಾರ ನಡೆಸಿದ್ದಾರೆ. ಖಾನ್ ಯಾರೂ ಬಾರದಂತೆ ಎಚ್ಚರಿಕೆ ವಹಿಸಿದ್ದಾರೆ ಎಂದು ಸಂತ್ರಸ್ತ ಬಾಲಕಿ ಪೊಲೀಸರಿಗೆ ಮುಂದೆ ಹೇಳಿದ್ದಾರೆ.

ಸಂತ್ರಸ್ತೆಯನ್ನು ಸರ್ಕಾರಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆದಿರುವುದನ್ನು ವೈದ್ಯರು ಸ್ಪಷ್ಪಪಡಿಸಿದ್ದಾರೆ ಎಂದು ಅಬ್ದುಲ್ ಅಹಾದ್ ಹೇಳಿದ್ದಾರೆ.

Comments are closed.