ಮನೋರಂಜನೆ

ಕನ್ನಡದ ಸ್ಟಾರ್‌ಗಳಾದ ಸುದೀಪ್, ದರ್ಶನ್, ಪುನೀತ್ ಒಡೆತನದ ಹೊಸ ‘ಟಿವಿ ಚಾನಲ್ ‘ ಹೆಸರಿಗಾಗಿ ನಡೆಯುತ್ತಿದೆ ಸರ್ಕಸ್ !

Pinterest LinkedIn Tumblr

ಕನ್ನಡದ ಮೂವರು ಸ್ಟಾರ್‌ಗಳಾದ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರೆಲ್ಲ ಸೇರಿಕೊಂಡು ಹೊಸ ‘ಟಿವಿ ಚಾನಲ್‌’ ಒಂದನ್ನು ಲಾಂಚ್ ಮಾಡುವ ವಿಷಯ ನಿಮಗೆಲ್ಲ ಗೊತ್ತೇ ಇದೆ. ಆದರೆ, ಪ್ರಾರಂಭಿಸಲಿರುವ ಹೊಸ ಚಾನಲ್‌ಗೆ ‘ಹೆಸರು’ ಏನು ಎಂಬುದು ಸದ್ಯದಲ್ಲೇ ಫೈನಲ್ ಆಗಲಿದೆ.

ಕಾರಣ, ಈ ಮೂವರು ಸ್ಟಾರ್‌ಗಳ ಹೆಸರುಗಳ ಅಕ್ಷರಗಳನ್ನು ಮ್ಯಾಚ್ ಮಾಡಿ ಒಂದು ಹೆಸರನ್ನು ಸೂಚಿಸುವ ಜವಾಬ್ದಾರಿಯನ್ನು ‘ರಾಜ್‌ಕುಮಾರ’ ಚಿತ್ರದ ನಿರ್ದೇಶಕರಾದ ‘ಸಂತೋಷ್‌ ಆನಂದರಾಮ್‌’ ಅವರಿಗೆ ವಹಿಸಿಕೊಡಲಾಗಿದೆ.

ಮುಂಬರುವ ‘ಮನರಂಜನಾ ವಾಹಿನಿ’ಯ ಹೆಸರಿಡುವ ಪ್ರಕ್ರಿಯೆ ಅಂದುಕೊಂಡಷ್ಟು ಸುಲಭವಲ್ಲ. ಏಕೆಂದರೆ, ಚಾನಲ್ ಹೆಸರು ಈ ಮೂರೂ ಸ್ಟಾರ್‌ಗಳ ಅಭಿಮಾನಿಗಳಿಗೆ ಇಷ್ಟವಾಗುವಂತರಬೇಕು. ಜೊತೆಗೆ, ಆ ಹೆಸರಿಗೆ ಅರ್ಥ ಹಾಗೂ ಯೋಗ್ಯತೆ ಎರಡೂ ಇರಬೇಕು. ಇಂತಹ ಚಾಲೆಂಜಿಂಗ್ ಹಾಗೂ ಮುಖ್ಯವಾದ ಕೆಲಸಕ್ಕೆ ಈಗಾಗಲೇ ಸಂತೋಷ್‌ ಆನಂದ್‌ರಾಮ್ ಹಾಗೂ ಅವರ ಬಳಗ ತೊಡಗಿಕೊಂಡಿದೆ.

ಈ ಸಂಬಂಧ ಅಭಿಮಾನಿಗಳ ಸಲಹೆಗಳನ್ನು ಪಡೆಯಲು ಸಂತೋಷ್‌ ಬಳಗ ಉದ್ದೇಶಿಸಿದೆ ಎನ್ನಲಾಗಿದೆ. ಸದ್ಯದಲ್ಲೇ ವಾಹಿನಿಗೆ ‘ಟೈಟಲ್’ ಸ್ಪರ್ಧೆಯ ಕುರಿತಂತೆ ಪ್ರಕಟಣೆಯೊಂದು ಹೊರಬೀಳುವ ನಿರೀಕ್ಷೆಯಿದೆ.

ಕನ್ನಡ ಚಿತ್ರರಂಗದ ಸ್ಟಾರ್‌ಗಳಲ್ಲಿ ಮುಖ್ಯರಾದ ಮೂವರು ಸ್ಟಾರ್‌ಗಳು ಸೇರಿ ‘ಎಂಟರ್‌ಟೈನ್‌ಮೆಂಟ್ ಚಾನಲ್’ ಒಂದನ್ನು ಪ್ರಾರಂಭಿಸಲಿದ್ದಾರೆ.ಈ ಮಹಾನ್ ಕಾರ್ಯವು ಸದ್ಯದಲ್ಲೇ ಪ್ರಾರಂಭವಾಗಲು ಸಜ್ಜಾಗಿತ್ತು. ಆದರೆ, ಲೋಕಸಭಾ ಚುನಾವಣೆ ಹತ್ತಿರ ಬಂದು, ಈ ಮನರಂಜನಾ ವಾಹಿನಿ ಲಾಂಚ್ ಕಾರ್ಯಕ್ರಮ ಸ್ವಲ್ಪ ಮುಂದಕ್ಕೆ ಹೋಗಿದೆ. ಚುನಾವಣೆ ಕಾವು ಮುಗಿದ ತಕ್ಷಣ, ಈ ಮೂರು ‘ತ್ರಿಮೂರ್ತಿ ಸ್ಟಾರ್‌’ಗಳು ಸೇರಿ ಹೊಸ ಚಾನೆಲ್ ಪ್ರಾರಂಭಿಸಲಿದ್ದಾರೆ.

ಕನ್ನಡದ ಈ ಮೂರು ಖ್ಯಾತ ನಟರು ಮನರಂಜನಾ ವಾಹಿನಿ ಶುರುಮಾಡಲಿರುವ ವಿಷಯವನ್ನು ನಟರು ಈಗಾಗಲೇ ಖಚಿತ ಪಡಿಸಿದ್ದಾರೆ. “ನಾವು ಮೂವರು ಗೆಳೆಯರು ಸೇರಿಕೊಂಡು ಎಂಟರ್‌ಟೈನ್‌ಮೆಂಟ್‌ ಚಾನಲ್‌ ಪ್ರಾರಂಭಿಸುತ್ತಿರುವುದು ನಿಜ. ನಾವೆಲ್ಲರೂ ಕಳೆದೊಂದು ವರ್ಷದಿಂದ ಈ ನಿಟ್ಟಿನಲ್ಲಿ ಸಿದ್ಧತೆ ನಡೆಸುತ್ತಿದ್ದೇವೆ.

ಸದ್ಯದಲ್ಲೇ ಸ್ಪಷ್ಟ ಚಿತ್ರಣ ಹಾಗೂ ಸಿಹಿ ಸುದ್ದಿಯೊಂದಿಗೆ ನಿಮ್ಮೆದುರು ಬರಲಿದ್ದೇವೆ’ ಎಂದಿದ್ದಾರೆ ಮೂವರಲ್ಲೊಬ್ಬರಾದ ಕನ್ನಡದ ಸ್ಟಾರ್. ಕೇವಲ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳಿಂದ ಮಂಕಾಗಿ ಕುಳಿತಿರುವ ಕನ್ನಡ ಕಿರುತೆರೆ ಲೋಕಕ್ಕೆ ಸಂಚಲನ ಉಂಟುಮಾಡುವ ಉತ್ಸಾಹ ಈ ಮೂವರಲ್ಲಿ ಎದ್ದು ಕಾಣುತ್ತಿದೆ.

ಸಿಕ್ಕ ಮಾಹಿತಿ ಪ್ರಕಾರ, ಈ ವರ್ಷದ ಯುಗಾದಿ ಹಬ್ಬದ ದಿನ, ಅಂದರೆ ಏಪ್ರಿಲ್ 6 ರಂದು ಅಥವಾ ಏಪ್ರಿಲ್‌ 24ರ ರಾಜಕುಮಾರ್‌ ಜನ್ಮದಿನದಂದು ಹೊಸ ವಾಹಿನಿಯ ಪ್ರಸಾರ ಆರಂಭಿಸಬೇಕಾಗಿತ್ತು. ಆದರೆ, ಚುನಾವಣಾ ಕಾವು ಏರಿರುವುದರಿಂದ ಇದು ಮನರಂಜನಾ ವಾಹಿನಿಯ ಆರಂಭಕ್ಕೆ ಸರಿಯಾದ ಸಮಯ ಅಲ್ಲ ಎಂದು ಈ ಕಾರ್ಯಕ್ರಮ ಮುಂದಕ್ಕೆ ಹೋಗಿದೆ.

ಇನ್ನೂ ಒಂದು ಸಮಸ್ಯೆಯೆಂದರೆ, ವಾಹಿನಿಯ ಆಧಾರ ಸ್ಥಂಭಗಳಲ್ಲಿ ಒಬ್ಬರಾದ ದರ್ಶನ್‌ ಅವರು ಮಂಡ್ಯ ಲೋಕಸಭಾ ಕಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿರುವುದು. ಈ ಎಲ್ಲ ಕಾರಣಕ್ಕೆ ಚಾನಲ್ ಆರಂಭ ಮುಂದೆ ಹೋಗಿದೆ” ಎಂದಿದ್ದಾರೆ ಮೂವರು ಸ್ಟಾರ್‌ಗಳು.

Comments are closed.