ರಾಷ್ಟ್ರೀಯ

ಮದ್ಯಪ್ರಿಯರಿಗೊಂದು ಸಿಹಿ ಸುದ್ದಿ! ಕಾಫಿ, ಮಿಲ್ಕ್ ಪೌಡರ್ ರೀತಿಯಲ್ಲೇ ಬರುತ್ತಿದೆ ಬಿಯರ್ ಪೌಡರ್..!

Pinterest LinkedIn Tumblr

ಮದ್ಯಪ್ರಿಯರಿಗೊಂದು ಸಿಹಿ ಸುದ್ದಿ. ನಿಮ್ಮ ಬಹುಕಾಲದ ಕಾತುರತೆ ಇತಿಶ್ರೀ ಹಾಡಲು ಕಿಂಗ್ ಪಿಶರ್ ಕಂಪೆನಿ ಮುಂದಾಗಿದೆ. ಹೌದು ಇನ್ಸ್​ಟಂಟ್ ಕಾಫಿ ಪೌಡರ್, ಮಿಲ್ಕ್​ ಪೌಡರ್ ರೀತಿಯಲ್ಲಿ ಇನ್ಮುಂದೆ ಇನ್ಸ್​ಟಂಟ್​ ಬಿಯರ್ ಮಿಕ್ಸ್ ಕೂಡ ಲಾಂಚ್ ಆಗಲಿದೆಯಂತೆ. ಒಂದು ಸಣ್ಣ ಶ್ಯಾಷೆ ಪ್ಯಾಕ್​ನಲ್ಲಿರುವ ಈ ಪೌಡರ್​ ಅನ್ನು ನೀರಿನಲ್ಲಿ ಮಿಕ್ಸ್​ ಮಾಡಿದರೆ ಬಿಯರ್ ರೆಡಿ ಎಂಬ ವಿಡಿಯೋವನ್ನು ಕಿಂಗ್​ ಫಿಶರ್ ಬಿಡುಗಡೆ ಮಾಡಿದೆ.

ಸಾಮಾನ್ಯವಾಗಿ ಬಿಯರ್ ಬಾಟಲ್​ಗಳನ್ನು ತರುವುದು ಹಾಗೂ ಅದನ್ನು ಫ್ರಿಡ್ಜ್​ನಲ್ಲಿಡುವುದು ತುಸು ಪ್ರಯಾಸದಾಯಕ. ಇಂತಹ ಸಮಸ್ಯೆಗೆ ಪರಿಹಾರವಾಗಿ ಕಿಂಗ್ ಫಿಶರ್ ಹೊಸ ಉಪಾಯವನ್ನು ಕಂಡುಕೊಂಡಿದೆ. ಈ ಪೌಡರ್​ ಅನ್ನು ಕೋಲ್ಡ್​ ನೀರಿನಲ್ಲಿ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿದರೆ ಬಿಯರ್ ತಯಾರಾಗುತ್ತದೆ.

ಇದರಿಂದ ಇನ್ಮುಂದೆ ಬಿಯರ್ ಬಾಟಲ್​ಗಳನ್ನು ಹೊತ್ತುಕೊಂಡು ಹೋಗುವ ತೊಂದರೆ ಇರುವುದಿಲ್ಲ. ಅಲ್ಲದೆ ನೀವು ಬಯಸಿದಾಗೆಲ್ಲ ಒಂದೇ ನಿಮಿಷದೊಳಗೆ ಬಿಯರ್ ತಯಾರಿಸಿ ಕುಡಿಯಬಹುದು ಎಂದು ಕಂಪೆನಿ ತನ್ನ ಜಾಹೀರಾತಿನಲ್ಲಿ ತಿಳಿಸಿದೆ.

ಈ ಜಾಹೀರಾತನ್ನು ನೋಡಿ ನೀವು ನಿಂತಲ್ಲಿ ಕೂತಲ್ಲಿ ಚಿಯರ್ಸ್​ ಅನ್ನಬಹುದು ಅಂದುಕೊಂಡರೆ ಇದರ ಮಾರಾಟ ಏಪ್ರಿಲ್ 1 ರಿಂದ ಪ್ರಾರಂಭ ಎಂದಿದ್ದಾರೆ. ಈಗ ಅರ್ಥಾಯ್ತು ತಾನೆ. ಕಿಂಗ್ ಫಿಶರ್ ಏಪ್ರಿಲ್​ ಫೂಲ್​ ಡೇ ಅನ್ನು ಮದ್ಯಪ್ರಿಯರೊಂದಿಗೆ ಇನ್ಸ್​ಟಂಟ್​ ಬಿಯರ್ ಮಿಕ್ಸ್​ನೊಂದಿಗೆ ಆಚರಿಸಿದ್ದಾರೆಂದು.

Comments are closed.