ಮುಂಬೈ

ದಾವೂದ್ ಸೋದರಿಯ ಮುಂಬೈನ ನಾಗ್ಪಾಡಾದಲ್ಲಿನ ಫ್ಲ್ಯಾಟ್ 1.80 ಕೋಟಿ ರು.ಗೆ ಮಾರಾಟ

Pinterest LinkedIn Tumblr

ಮುಂಬೈ: ಕುಖ್ಯಾತ ಭೂಗತ ದೊರೆ ದಾವೂದ್ ಇಬ್ರಾಹಿಂ ಸೊದರಿ ಹಸೀನಾ ಪಾರ್ಕರ್ ಗೆ ಸೇರಿದ್ದ ಮುಂಬೈನ ನಾಗ್ಪಾಡಾದಲ್ಲಿನ ಫ್ಲ್ಯಾಟ್ 1.80 ಕೋಟಿ ರು. ಗೆ ಮಾರಾಟವಾಗಿದೆ. ಇಂದು ಸ್ಮಗ್ಲಿಂಗ್ ಆಂಡ್ ಫಾರಿನ್ ಎಕ್ಸ್ ಚೇಂಜ್ ಮಲ್ಟಿಪ್ಯುಲೇಷನ್ಸ್ ಆಕ್ಟ್ (ಸಫೇಮಾ) ಅಡಿಯಲ್ಲಿ ಪ್ಲ್ಯಾಟ್ ಅನ್ನು ಹರಾಜು ಹಾಕಲಾಗಿದೆ.

ದಾವೂದ್ ಇಬ್ರಾಹಿಂನ ಕಿರಿಯ ಸಹೋದರಿ ಹಸೀನಾ ಪಾರ್ಕರ್ ಹೃದಯಾಘಾತದಿಂದಾಗಿ 2014 ರಲ್ಲಿ ನಿಧನರಾಗಿದ್ದರು. ಪಾರ್ಕರ್ ತಾವು ನಾಗ್ಪಾಡ್ ನಲ್ಲಿನ ಇದೇ ಫ್ಲ್ಯಾಟ್ ನಲ್ಲಿ ಕೊನೆಯುಸಿರೆಳಿದಿದ್ದರು. ಅ;;ಅದೆ ದಾವೂದ್ ಸೋದರ ಇಕ್ಬಾಲ್ ಕನ್ವರ್ ಅವರನ್ನು ಇದೇ ಫ್ಲ್ಯಾಟ್ ನಿಂದ ಎನ್ ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿ ಪ್ರದೀಪ್ ಶರ್ಮಾ 2017ರಲ್ಲಿ ಬಂಧಿಸಿದ್ದರು.

ಸಫೇಮಾ ಕಾಯ್ದೆಯ 68-ಎಫ್ ವಿಭಾಗದಡಿಯಲ್ಲಿ ದೇಶಭ್ರಷ್ಟರ ಸಂಬಂಧಿಗಳಿಗೆ ಸೇರಿದ ಆಸ್ತಿಗಳನ್ನು ಸಹ ವಶಕ್ಕೆ ಪಡೆದುಕೊಳ್ಳುವುದಕ್ಕೆ ಅವಕಾಶವಿದೆ. ಹಾಗಾಗಿ ಇದೇ ಕಾನೂನಿನನ್ವಯ ವಶಕ್ಕೆ ಪಡೆಯಲಾದ ಫ್ಲ್ಯಾಟ್ ಅನ್ನು ಇಂದು ಹರಾಜಿಗಿಡಲಾಗಿತ್ತು.

Comments are closed.