ಮನೋರಂಜನೆ

ಮೋದಿ ಜೀವನಾಧರಿತ “ಪಿಎಂ ನರೇಂದ್ರ ಮೋದಿ’ ಚಿತ್ರ ಬಿಡುಗಡೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

Pinterest LinkedIn Tumblr


ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಜೀವನಾಧರಿತ “ಪಿಎಂ ನರೇಂದ್ರ ಮೋದಿ’ ಚಿತ್ರ ಬಿಡುಗಡೆ ಮಾಡದಂತೆ ಚಿತ್ರ ನಿರ್ಮಾಪಕರಿಗೆ ನಿರ್ದೇಶನ ನೀಡುವಂತೆ ಕೋರಿ ವಕೀಲ ಎಲ್. ರಮೇಶ್‌ ನಾಯಕ್‌ ಚುನಾವಣ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ತುಮಕೂರು ಮೂಲದ ವಕೀಲ ರಮೇಶ್‌ ನಾಯಕ್‌ ಕೇಂದ್ರ ಚುನಾವಣ ಆಯೋಗ ಮತ್ತು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಇ-ಮೇಲ್‌ ಮೂಲಕ ಶನಿವಾರ ಪತ್ರ ಬರೆದಿ¨ದ್ದಾರೆ. ದೇಶದಲ್ಲಿ 17ನೇ ಲೋಕಸಭೆಗೆ ಚುನಾವಣೆ ನಡೆಯುತ್ತಿದೆ. ದೇಶಾದ್ಯಂತ ಈಗಾಗಲೇ ಚುನಾವಣ ನೀತಿ ಸಂಹಿತೆ ಜಾರಿಯಲ್ಲಿದೆ. ಇಂಥ ಸಂದರ್ಭದಲ್ಲಿ ಪ್ರಧಾನಿ ಜೀವನ ಆಧಾರಿತ ಚಿತ್ರ ಬಿಡುಗಡೆಯಾದರೆ ಅದು ದೇಶದ ಮತದಾರರ ಮೇಲೆ ವ್ಯಾಪಕವಾಗಿ ಸಕಾರಾತ್ಮಕ ಅಥವಾ ನಕಾರಾತ್ಮಕ ಪ್ರಭಾವ ಬೀರುತ್ತದೆ ಮತ್ತು ಇದು ಚುನಾವಣ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಲಿದೆ. ಆದ್ದರಿಂದ ಎ.12ರಂದು ಬಿಡುಗಡೆಗೊಳ್ಳಲಿರುವ ಪಿಎಂ ನರೇಂದ್ರ ಮೋದಿ ಚಿತ್ರ ಬಿಡುಗಡೆ ಮಾಡದಂತೆ ಚಿತ್ರ ನಿರ್ಮಾಪಕರು ಮತ್ತು ಸಂಬಂಧಪಟ್ಟ ಇತರರಿಗೆ ನಿರ್ದೇಶನ ನೀಡಬೇಕು ಎಂದು ವಕೀಲ ರಮೇಶ್‌ ನಾಯಕ್‌ ಚುನಾವಣ ಆಯೋಗವನ್ನು ಮನವಿ ಮಾಡಿದ್ದಾರೆ.

Comments are closed.