ಕರ್ನಾಟಕ

ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ನ ಬಿ.ಕೆ. ಹರಿಪ್ರಸಾದ್ 20 ವರ್ಷಗಳ ನಂತರ ಮತ್ತೆ ಕಣಕ್ಕೆ

Pinterest LinkedIn Tumblr


ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ಕಾಂಗ್ರೆಸ್​ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಚಾರಕ್ಕೆ ಇದೀಗ ತೆರೆ ಬಿದ್ದಿದೆ. ಭಾನುವಾರ ಕಾಂಗ್ರೆಸ್​ ಕೇಂದ್ರ ಚುನಾವಣಾ ಸಮಿತಿ ಹತ್ತು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಅದರಲ್ಲಿ ಬೆಂಗಳೂರು ದಕ್ಷಿಣದಿಂದ ಬಿ.ಕೆ.ಹರಿಪ್ರಸಾದ್​ ಅವರ ಹೆಸರನ್ನು ಅಂತಿಮಗೊಳಿಸಿದೆ.

2019 ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾದ ಬಿ.ಕೆ.ಹರಿಪ್ರಸಾದ್​ ಅವರು 20 ವರ್ಷಗಳ ನಂತರ ಈ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿದ್ದಾರೆ. 1999ರ ಸಾರ್ವತ್ರಿಕ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಬಿ.ಕೆ.ಹರಿಪ್ರಸಾದ್​ ಬಿಜೆಪಿಯ ಅನಂತ್​ಕುಮಾರ್​ ವಿರುದ್ಧ 65 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು.

1996ರಿಂದ ಕಳೆದ ನವೆಂಬರ್​ವರೆಗೆ ಬಿಜೆಪಿಯ ಅನಂತ್​ಕುಮಾರ್​ ಅವರು ಸತತ ಆರು ಬಾರಿ ಗೆಲ್ಲುವ ಮೂಲಕ ಬೆಂಗಳೂರು ದಕ್ಷಿಣ ಕ್ಷೇತ್ರದ ಮೇಲೆ ಬಿಗಿ ಹಿಡಿತ ಹೊಂದಿದ್ದರು. ಆದರೆ, ಅವರ ಅಕಾಲಿಕ ನಿಧನದಿಂದಾಗಿ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಯಾರು ಸ್ಪರ್ಧಿಸಲಿದ್ದಾರೆ ಎನ್ನುವ ಪ್ರಶ್ನೆ ಮೂಡಿತ್ತು. ಈ ಮೊದಲು ಅನಂತ್​ಕುಮಾರ್ ಅವರ ಹೆಂಡತಿ ತೇಜಸ್ವಿನಿ ಅವರು ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಇದೀಗ ಈ ಕ್ಷೇತ್ರದಿಂದ ಪ್ರಧಾನಿ ಮೋದಿ ಅವರೇ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಈ ಬಗ್ಗೆ ಬಿಜೆಪಿಯಿಂದ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

ನೆನ್ನೆ ರಾತ್ರಿ ಕಾಂಗ್ರೆಸ್​ ತನ್ನ ಪಾಲಿಗೆ ಬಂದಿರುವ 20 ಕ್ಷೇತ್ರಗಳಲ್ಲಿ 18 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿ, ಪಟ್ಟಿ ಬಿಡುಗಡೆ ಮಾಡಿತ್ತು. ಆದರೆ, ಬೆಂಗಳೂರು ದಕ್ಷಿಣ ಹಾಗೂ ಧಾರವಾಡ ಕ್ಷೇತ್ರಗಳಿಗೆ ಯಾವುದೇ ಅಭ್ಯರ್ಥಿಗಳ ಹೆಸರನ್ನು ಘೋಷಿಸಿರಲಿಲ್ಲ. ಬೆಂಗಳೂರು ದಕ್ಷಿಣದಿಂದ ಪ್ರಧಾನಿ ಮೋದಿ ಸ್ಪರ್ಧಿಸಲಿದ್ದಾರೆ ಎನ್ನುವ ವದಂತಿ ಹಬ್ಬಿರುವ ಹಿನ್ನೆಲೆಯಲ್ಲಿ ಬಿಜೆಪಿಯ ನಡೆ ಕಾದುನೋಡುವ ತಂತ್ರಕ್ಕೆ ಕಾಂಗ್ರೆಸ್​ ಮೊರೆಹೋಗಿತ್ತು. ಆದರೆ, ಇಂದು ಮಧ್ಯಾಹ್ನ ಬಿಡುಗಡೆ ಮಾಡಿದ 10 ಕ್ಷೇತ್ರಗಳಲ್ಲಿ ಬೆಂಗಳೂರು ದಕ್ಷಿಣವೂ ಸೇರಿದೆ. ರಾಜ್ಯದಲ್ಲಿ ಇನ್ನು ಧಾರವಾಡ ಒಂದು ಕ್ಷೇತ್ರ ಮಾತ್ರ ಬಾಕಿ ಉಳಿದಿದೆ.

ಇಂದು ಬಿಡುಗಡೆಯಾದ ಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿ

ರಾಜ್ಯ ಕ್ಷೇತ್ರ ಅಭ್ಯರ್ಥಿ

ಬಿಹಾರ ಕಿಸಾನ್​ಗಂಜ್​ ಮೊಹಮ್ಮದ್​ ಜಾವೇದ್​

ಬಿಹಾರ ಕತಿಹಾರ್​ ತಾರೀಖ್​ ಅನ್ವರ್

ಬಿಹಾರ ಪುರ್ನಿಯಾ ಉದಯ್​ ಸಿಂಗ್​ @ಪಪ್ಪು ಸಿಂಗ್​

ಜಮ್ಮು-ಕಾಶ್ಮೀರ ಬಾರಮುಲ್ಲಾ ಹಾಜಿ ಫಾರೂಖ್​ ಎಂಐಆರ್

ಕರ್ನಾಟಕ ಬೆಂಗಳೂರು ದಕ್ಷಿಣ ಬಿ.ಕೆ.ಹರಿಪ್ರಸಾದ್

ಮಹಾರಾಷ್ಟ್ರ ಅಕೋಲಾ ಹಿದಾಯತ್​ ಪಟೇಲ್​

ಮಹಾರಾಷ್ಟ್ರ ರಾಮ್​ಟೆಕ್​ (ಎಸ್​ಸಿ) ಕಿಶೋರ್​ ಉತ್ತಮ್​ರಾವ್​ ಗಜ್​ಬಿಯೆ

ಮಹಾರಾಷ್ಟ್ರ ಚಂದ್ರಪುರ್ ಸುರೇಶ್​ ದಾನೋರ್ಕರ್​

ಮಹಾರಾಷ್ಟ್ರ ಹಿಂಗೋಲಿ ಸುಭಾಷ್​ ವಾಂಖೇಡೆ

ತಮಿಳುನಾಡು ಶಿವಗಂಗಾ ಕಾರ್ತಿ ಚಿದಂಬರಂ

Comments are closed.