ದಾವಣಗೆರೆ: ನನಗೆ ಗೊತ್ತಿಲ್ಲದೆ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಹೆಸರು ಘೋಷಣೆಯಾಗಿದೆ. ಈ ಮೂಲಕ ಹೈಕಮಾಂಡ್ ನನಗೆ ಸಪ್ರೈಸ್ಡ್ ನೀಡಿದೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಟಿಕೆಟ್ಗಾಗಿ ದುಂಬಾಲು ಬಿದ್ದವನಲ್ಲ. ಬೆಂಗಳೂರು, ದೆಹಲಿ ಎಂದು ಅಡ್ಡಾಡಿಲ್ಲ. ದಾವಣಗೆರೆಯಲ್ಲೇ ಇದ್ದೇನೆ. ನನಗೆ ಗೊತ್ತಿಲ್ಲದೆ ನನ್ನ ಹೆಸರು ಘೋಷಣೆಯಾಗಿದೆ. ಈ ಮೂಲಕ ನನಗೆ ಹೈಕಮಾಂಡ್ ನಿಂದ ಸಪ್ರೈಸ್ಡ್ ಕೊಟ್ಟಿದೆ ಎಂದು ಹೇಳಿದರು.
ಒಂದು ಬಾರಿ ಸಂಸದನಾಗಿದ್ದೆ. 5 ಬಾರಿ ಶಾಸಕರಾಗಿದ್ದೇನೆ. ಇಂದು ಬೆಂಗಳೂರಿಗೆ ಹೋಗಿ ಮುಖಂಡರ ಜೊತೆ ಮಾತುಕತೆ ನಡೆಸುತ್ತೇನೆ. ಮುಂದಿನ ಕಾರ್ಯಕ್ರಮಗಳ ಬಗ್ಗೆ ಯೋಜನೆ ರೂಪಿಸಿತ್ತೇನೆ. ಹಿಂದೆ ವಯಸ್ಸಾಗಿದೆ ಎಂದು ಹೇಳುತ್ತಿದ್ದರು. ಈಗ ಅವರೇ ನಮಗೆ ಟಿಕೇಟ್ ನೀಡಿದ್ದಾರೆ. ಮಲ್ಲಿಕಾರ್ಜುನ್ಗೆ ಟಿಕೆಟ್ ಕೊಡುವಂತೆ ಕೇಳುವುದಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ಜಿಎಂ ಸಿದ್ದೇಶ್ವರ ಒಂದು ಲಕ್ಷ ಅಂತರದಲ್ಲಿ ಗೆಲ್ಲುತ್ತೇನೆ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಗೆ ನಿಂತವರೆಲ್ಲಾ ಹೇಳುವುದೇ ಹಾಗೆ. ಒಂದು ಲಕ್ಷ, ಎರಡು ಲಕ್ಷ ಅಂತರದಲ್ಲಿ ಗೆಲ್ಲುತ್ತೇನೆ ಎಂದು. ನಾನು ಹೇಳುತ್ತೇನೆ ಆತನ ಠೇವಣೆ ಕಳೆಯುತ್ತೇನೆ ಎಂದು ಸವಾಲು ಹಾಕಿದರು.
Comments are closed.