ಮನೋರಂಜನೆ

ಸ್ಯಾಂಡಲ್‍ವುಡ್‍ನ ನವರಸನಾಯಕ ಜಗ್ಗೇಶ್ ಬರ್ತ್‌ಡೇಗೆ “ಪ್ರೀಮಿಯರ್ ಪದ್ಮಿನಿ” ಗಿಫ್ಟ್

Pinterest LinkedIn Tumblr


ಸ್ಯಾಂಡಲ್‍ವುಡ್‍ನ ನವರಸನಾಯಕ ಜಗ್ಗೇಶ್‍ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಟ ಜಗ್ಗೇಶ್ ಪ್ರತಿ ಬಾರಿಯಂತೆ ಈ ಬಾರಿಯೂ ತಮ್ಮ ಹುಟ್ಟುಹಬ್ಬದಂದು ಮಂತ್ರಾಲಯಕ್ಕೆ ತೆರಳಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದಿದ್ದಾರೆ. ಇದೇ ವೇಳೆ ಜಗ್ಗೇಶ್‍ಗೆ ಉಡುಗೊರೆಯಾಗಿ “ಪ್ರೀಮಿಯರ್ ಪದ್ಮಿನಿ’ ಚಿತ್ರತಂಡ ಚಿತ್ರದ ಟೀಸರ್‌ನ್ನು ಬಿಡುಗಡೆ ಮಾಡಿದೆ.

ಅಲ್ಲದೇ ಚಿತ್ರದಲ್ಲಿ ವಿಭಿನ್ನ ಗೆಟಪ್‍ನಲ್ಲಿ ಕಾಣಿಸಿಕೊಂಡಿರುವ ಜಗ್ಗೇಶ್ ಜೊತೆಗೆ ಹಿರಿಯ ನಟಿ ಮಧುಬಾಲಾ ಹಾಗೂ ಸುಧಾರಾಣಿ ಸಹ ಕಾಣಿಸಿಕೊಂಡಿದ್ದಾರೆ. ಜೊತೆಗೆ ದತ್ತಣ್ಣ, ಪ್ರಮೋದ್ ಪಂಜು, ಹಿತಾ ಚಂದ್ರಶೇಖರ್, ವಿವೇಕ್ ಸಿಂಹ ಸಹ ಚಿತ್ರದಲ್ಲಿ ನಟಿಸಿರುವುದು ಚಿತ್ರಕ್ಕೆ ಹೊಸದೊಂದು ಕಳೆಗಟ್ಟುವಂತಾಗಿದೆ.

ಇನ್ನು ವಿಚ್ಛೇದನವಾದ ಪತಿಯ ತೊಳಲಾಟದ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಲಾಗಿದ್ದು, ಶ್ರುತಿ ನಾಯ್ಡು ನಿರ್ಮಾಣದ ಈ ಚಿತ್ರಕ್ಕೆ ರಮೇಶ್‌ ಇಂದ್ರ ನಿರ್ದೇಶನವಿದೆ. ಅರ್ಜುನ್ ಜನ್ಯ ಸಂಗೀತವಿರುವ ಈ ಚಿತ್ರದ ಆಡಿಯೋ ಈಗಾಗಲೇ ಬಿಡುಗಡೆಯಾಗಿದ್ದು, ಇಂದು ಟೀಸರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರವು ತೆರೆ ಮೇಲೆ ಬರಲು ಸಜ್ಜಾಗಿದೆ.

Comments are closed.