ಮನೋರಂಜನೆ

“ಡಿಯರ್ ಕಾಮ್ರೆಡ್’: ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಲಿಪ್‍ಲಾಕ್ !

Pinterest LinkedIn Tumblr


ತೆಲುಗಿನ “ಗೀತಾ ಗೋವಿಂದಂ’ ಖ್ಯಾತಿಯ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಮತ್ತೆ “ಡಿಯರ್ ಕಾಮ್ರೆಡ್’ ಮೂಲಕ ಒಂದಾಗಿದ್ದು, ಇದೀಗ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಹೌದು, ಟಾಲಿವುಡ್​​ನ ಬಹುನಿರೀಕ್ಷಿತ ಈ ಸಿನಿಮಾದ ಟೀಸರ್, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗಿದೆ.

ಟೀಸರ್ 1 ನಿಮಿಷ 7 ಸೆಕೆಂಡ್ ಅವಧಿಯ ಟೀಸರ್ ಇದಾಗಿದ್ದು, “ಕಡಲಂತೆ ಕಾದ ಕಣ್ಣು, ನದಿಯಂತೆ ಓಡುವ ಮನಸು” ಎಂಬ ಹಾಡಿನ ಸಾಲಿನೊಡನೆ ಟೀಸರ್ ಪ್ರಾರಂಭವಾಗುತ್ತದೆ. ಅಲ್ಲದೇ ನಟ ವಿಜಯ್ ಆ್ಯಂಗ್ರಿ ಯಂಗ್​ಮ್ಯಾನ್ ಹಾಗೂ ರೊಮ್ಯಾಂಟಿಕ್ ಲುಕ್‍ನಲ್ಲಿ ಕಾಣಿಸಿಕೊಂಡರೆ, ನಟಿ ರಶ್ಮಿಕಾ ಸಖತ್ ಬೋಲ್ಡ್ ಆಗಿ ಮಿಂಚಿದ್ದಾರೆ. ಈ ಹಿಂದಿನ ಚಿತ್ರ “ಗೀತಾ ಗೋವಿಂದಂ’ನಂತೆಯೇ ಇಲ್ಲಿಯೂ ರಶ್ಮಿಕಾ ಹಾಗೂ ವಿಜಯ್ ಲಿಪ್‍ಲಾಕ್ ಸೀನ್ ಇದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

ಇನ್ನು ಭರತ್ ಕಮ್ಮ ಕಥೆ ಬರೆದು ನಿದೇಶಿಸಿರುವ ಈ ಚಿತ್ರದ ಟೀಸರ್ ಲಿಂಕ್‍ಗಳನ್ನು ನಟಿ ರಶ್ಮಿಕಾ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದು “ಡಿಯರ್ ಕಾಮ್ರೆಡ್ ಟೀಸರ್ ಇದು, ಹೆಚ್ಚು ಬಯಸುವಿರಾ? ಶೀಘ್ರದಲ್ಲೇ ಬರಲಿದೆ!” ಎಂದು ಟ್ವೀಟ್ ಮಾಡಿದ್ದಾರೆ. ನವೀನ್ ಯೆರನೆನಿ, ವೈ.ರವಿಶಂಕರ್, ಮೋಹನ್ ಮತ್ತು ಯಶ್ ರಂಗಿನೇನಿ ಜಂಟಿ ನಿರ್ಮಾಣದ ಈ ಚಿತ್ರಕ್ಕೆ ಜಸ್ಟಿನ್ ಪ್ರಭಾಕರನ್ ಸಂಗೀತವಿದ್ದು, ಮೇ 31ರಂದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ.

Comments are closed.