ಕರ್ನಾಟಕ

2 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲೆ ದೂರು!

Pinterest LinkedIn Tumblr


ಬೆಂಗಳೂರು: ಸಿಎಂ ಎಚ್​​​.ಡಿ ಕುಮಾರಸ್ವಾಮಿ ಅವರು ಕೂಡ ಎರಡು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದಾರಂತೆ. ಅವರಿದ್ದ ಕಾರು ಅತೀ ವೇಗವಾಗಿ ಹೋಗಿದ್ದಕ್ಕೆ ಹಾಗೂ ಕಾರಿನಲ್ಲಿ ಚಲಿಸುವಾಗ ಮೊಬೈಲ್​​​ ಬಳಕೆ ಮಾಡಿದ್ಧಕ್ಕೆ ಮುಖ್ಯಮಂತ್ರಿಗಳ ಕಾರ್​​​ ಮೇಲೆ ಎರಡು ಕೇಸ್​​ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿಗಳು KA-42 P 0002 ನಂಬರಿನ ರೇಂಜ್​ ರೋವರ್​ ಕಾರನ್ನು ಬಳಸುತ್ತಿದ್ದಾರೆ. ಕಳೆದ ತಿಂಗಳು ಫೆಬ್ರವರಿ 10ರಂದು ಒಂದು ಕೇಸ್​​​ ಮತ್ತು 22ರಂದು ಇನ್ನೊಂದು ಕೇಸ್​​ ದಾಖಲಾಗಿದೆ. ಫೆ 22 ರಂದು ಮಧ್ಯಾಹ್ನ 12.35 ಕ್ಕೆ ಬಸವೇಶ್ವರ ಸರ್ಕಲ್ ಬಳಿ ಓವರ್ ಸ್ಪೀಡ್ ಮಾಡಲಾಗಿದ್ದು, 300 ರೂಪಾಯಿ ದಂಡ ಹಾಕಲಾಗಿದೆ. ಇನ್ನು ಫೆಬ್ರವರಿ 10 ರಂದು ಬೆಳಗ್ಗೆ 9.27ಕ್ಕೆ ಕಾರ್ ಡ್ರೈವಿಂಗ್ ಮಾಡುವಾಗ ಮೊಬೈಲ್ ಬಳಕೆ ಮಾಡಿದ್ದಕ್ಕೆ ಪೊಲೀಸರು 100 ರೂ.ಗಳು ದಂಡ ಹಾಕಿದ್ದಾರೆ. ಅಲ್ಲದೇ ಎರಡು ಬಾರಿಯೂ ನೋಟಿಸ್​​ ನೀಡಿದ್ದಾರೆ ಎನ್ನಲಾಗಿದೆ.

ಎರಡು ಬಾರಿ ನೋಟಿಸ್​​ ನೀಡಿದರು ಸಿಎಂ ಎಚ್​​.ಡಿ ಕುಮಾರಸ್ವಾಮಿಯವರು ದಂಡ ಕಟ್ಟಿಲ್ಲ. ಅಲ್ಲದೇ ಸಿಎಂ ಅವರೇ ನೇರವಾಗಿ ಕಾನೂನು ಉಲ್ಲಂಘನೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ, ರಸ್ತೆ ಸಾರಿಗೆ ನಿಯಮಗಳು ಎಲ್ಲರಿಗೂ ಒಂದೇ. ರಸ್ತೆ ನಿಯಮಗಳನ್ನು ಯಾರೇ ಉಲ್ಲಂಘಿಸಿದರೂ ಅವರು ದಂಡ ಕಟ್ಟಲೇಬೇಕು ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ತಪ್ಪು ಮಾಡಿದಾಗ ಮುಖ್ಯಮಂತ್ರಿ ಎಂಬ ಕಾರಣಕ್ಕೆ ಅವರಿಗೆ ರಿಯಾಯಿತಿ ನೀಡದೆ ಪ್ರಕರಣ ದಾಖಲಿಸಿರುವ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.

Comments are closed.