ಮನೋರಂಜನೆ

ನಾನು ಪುರುಷನಾಗಿದ್ದರೆ ತಮನ್ನಾಳನ್ನ ಮದುವೆ ಮಾಡಿಕೊಳ್ಳುತ್ತಿದ್ದೆ: ಶ್ರುತಿ ಹಾಸನ್

Pinterest LinkedIn Tumblr


ಚೆನ್ನೈ: ನಾನು ಹುಡುಗ ಆಗಿ ಹುಟ್ಟಿದ್ದರೆ, ನಾನು ತಮನ್ನಾ ಭಾಟಿಯಾನನ್ನು ಮದುವೆಯಾಗುತ್ತಿದ್ದೆ ಎಂದು ಬಹುಬಾಷಾ ನಟಿ ಶ್ರುತಿ ಹಾಸನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇತ್ತೀಚೆಗೆ ಶ್ರುತಿ ಹಾಸನ್ ಫೀಲ್ಮ್ ಫೇರ್ ಮ್ಯಾಗಜೀನ್‍ಗೆ ಸಂದರ್ಶನ ನೀಡಿದ್ದರು. ಈ ವೇಳೆ ಸಂದರ್ಶಕಿ ನೀವು ಹುಡುಗ ಆಗಿ ಹುಟಿದ್ದರೆ, ಯಾರನ್ನು ಡೇಟ್ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಆಗ ಶ್ರುತಿ ಹಾಸನ್ ನಾನು ಹುಡುಗ ಆಗಿದ್ದರೆ ತಮನ್ನಾಳನ್ನು ಮದುವೆ ಆಗುತ್ತಿದ್ದೆ ಎಂದು ಉತ್ತರಿಸಿದ್ದಾರೆ.

ನಾನು ಹುಡುಗ ಆಗಿದಿದ್ರೆ ತಮನ್ನಾಳನ್ನು ಡೇಟ್ ಮಾಡುತ್ತಿದೆ. ಅಲ್ಲದೇ ನಾನು ಆಕೆಯನ್ನೇ ಮದುವೆಯಾಗುತ್ತಿದ್ದೆ. ಏಕೆಂದರೆ ಆಕೆ ಒಳ್ಳೆಯ ಹುಡುಗಿ ಹಾಗೂ ನಾನು ಆಕೆಯನ್ನು ಬಿಟ್ಟುಕೊಡಲು ಇಷ್ಟಪಡುವುದಿಲ್ಲ ಎಂದು ಶ್ರುತಿ ಹಾಸನ್ ಸಂದರ್ಶನದಲ್ಲಿ ಹೇಳಿದ್ದಾರೆ.

ಶ್ರುತಿ ಹಾಸನ್ ಅವರು ನಟಿಸಿದ ‘ಕಟಮರಾಯುಡು’ ಚಿತ್ರ ಫ್ಲಾಪ್ ಆಗಿತ್ತು. ಇದು ಅವರ ಸಿನಿಮಾ ವೃತ್ತಿಯಲ್ಲಿ ಫ್ಲಾಪ್ ಆದ ದೊಡ್ಡ ಚಿತ್ರ. ಈ ಚಿತ್ರದ ಸೋಲಿನ ನಂತರ ಶ್ರುತಿ ಈಗ ತಮಿಳು ಹಾಗೂ ತೆಲುಗು ಚಿತ್ರರಂಗದಿಂದ ದೂರ ಇದ್ದಾರೆ. ಅಲ್ಲದೇ ಅವರು ಈಗ ಸಿನಿಮಾಗಳನ್ನು ಆಯ್ಕೆ ಮಾಡುವಾಗ ಯೋಚಿಸಿ ಒಪ್ಪಿಕೊಳ್ಳುತ್ತಿದ್ದಾರೆ.

ಶ್ರುತಿ ಹಾಸನ್ ಈ ಹಿಂದೆ ಪವನ್ ಕಲ್ಯಾಣ್ ಜೊತೆ ‘ಗಬ್ಬರ್ ಸಿಂಗ್’, ರಾಮ್ ಚರಣ್ ಜೊತೆ ‘ಎವಡು’ ಹಾಗೂ ಅಲ್ಲು ಅರ್ಜುನ್ ಜೊತೆ ‘ರೇಸ್ ಗುರಂ’ ಚಿತ್ರಗಳಲ್ಲಿ ನಟಿಸಿದ್ದರು. ಈ ಚಿತ್ರಗಳೆಲ್ಲಾ ಅವರ ಸಿನಿಮಾ ವೃತ್ತಿಯಲ್ಲಿ ಹಿಟ್ ಆಗಿತ್ತು.

Comments are closed.