ರಾಷ್ಟ್ರೀಯ

ಸಿಪಿಎಂ ಅಭ್ಯರ್ಥಿಗಳ ಕೊನೆ ಪಟ್ಟಿ!

Pinterest LinkedIn Tumblr

ನವದೆಹಲಿ: ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಕೇಂದ್ರ ಚುನಾವಣೆ ಆಯೋಗವು ಈಗಾಗಲೇ ವೇಳಾಪಟ್ಟಿ ಪ್ರಕಟಿಸಿದೆ. ಈ ಬೆನ್ನಲ್ಲೇ ದೇಶಾದ್ಯಂತ ರಾಜಕೀಯ ಚಟುವಟಿಕೆಗಳು ಬಿರುಸಾಗಿ ಸಾಗುತ್ತಿದ್ದು, ಕಾಂಗ್ರೆಸ್​​-ಬಿಜೆಪಿ ಸೇರಿದಂತೆ ಎಡ ಪಕ್ಷಗಳು ಕೂಡ ಲೋಕಸಭೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡುತ್ತಿವೆ. ಸದ್ಯ ಸಿಪಿಎಂ ಪಕ್ಷವೂ ಕೇರಳ ಸೇರಿದಂತೆ ದೇಶದ ಬೇರೆ ರಾಜ್ಯದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕೇರಳ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದಾರೆ. ಈ ಪೈಕಿ ಕೇವಲ ಕೇರಳದಲ್ಲಿ ಹಾಲಿ 6 ಸಂಸದರು ಹಾಗೂ 4 ಶಾಸಕರು ಸ್ಥಾನ ಪಡೆದಿದ್ದಾರೆ ಎನ್ನಲಾಗಿದೆ. ಕೇರಳದ 20 ಲೋಕಸಭಾ ಸ್ಥಾನಗಳಲ್ಲಿ ಸಿಪಿಎಂ 16ರಲ್ಲಿ, ಸಿಪಿಐ 4ರಲ್ಲಿ ಸ್ಪರ್ಧಿಸಲಿದೆ. ಸಿಪಿಎಂ ಪಟ್ಟಿಯಲ್ಲಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟದ ಇತರ ಪಕ್ಷಗಳಿಗೆ ಯಾವುದೇ ಸ್ಥಾನ ಬಿಟ್ಟುಕೊಡದಿರುವುದು ಗಮನಾರ್ಹ.

ಹಾಗೆಯೇ ಸಿಪಿಎಂ ಕೇರಳದಲ್ಲಿ ಅಧಿಕಾರದಲ್ಲಿದ್ದು, ಒಟ್ಟು 8 ರಾಜ್ಯಗಳಲ್ಲಿ ಚುನಾಯಿತ ಪ್ರತಿನಿಧಿಗಳನ್ನು ಹೊಂದಿದೆ. ಕೇರಳ, ಪಶ್ಚಿಮ ಬಂಗಾಳ, ತ್ರಿಪುರಾ ರಾಜ್ಯದಲ್ಲಿ ದಟ್ಟ ಪ್ರಭಾವ ಹೊಂದಿರುವ ಸಿಪಿಎಂ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನದಲ್ಲೂ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡಿದೆ. ಪಾಲಿಟ್‌ಬ್ಯೂರೊ ಈ ಪಕ್ಷ ದ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಸಂಸ್ಥೆಯಾಗಿದೆ.

ಇನ್ನು ಲೋಕಸಭೆಯಲ್ಲಿ 9, ರಾಜ್ಯಸಭೆಯಲ್ಲಿ 5 ಸಂಸದರನ್ನು ಹೊಂದಿರುವ ಸಿಪಿಎಂ, ಕೇರಳದಲ್ಲಿ 59, ತ್ರಿಪುರಾದಲ್ಲಿ 16 ಮತ್ತು ಪಶ್ಚಿಮ ಬಂಗಾಳದಲ್ಲಿ 26 ಶಾಸಕರನ್ನು ಹೊಂದಿದೆ. ಇನ್ನುಳಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಒಟ್ಟು 7 ಶಾಸಕರು ಸಿಪಿಎಂನಿಂದ ಆಯ್ಕೆಯಾಗಿದ್ದಾರೆ. ಮಾರ್ಕ್ಸ್‌ ಮತ್ತು ಲೆನಿನ್‌ ವಾದ ಸಿಪಿಎಂ ಪ್ರಮುಖ ಸಿದ್ಧಾಂತವಾಗಿದೆ.

ಸಿಪಿಎಂ ಲೋಕಸಭೆ ಅಂತಿಮ ಅಭ್ಯರ್ಥಿಗಳ ಪಟ್ಟಿ ಹೀಗಿದೆ…

ಕೇರಳ:

1. ಚಾಲಕ್ಕುಡಿ- ಇನ್ನೊಸೆಂಟ್
2. ಇಡುಕ್ಕಿ- ಜಾಯ್ಸಿ ವರ್ಗಿಸ್
3. ಪಾಲಕ್ಕಾಡ್‌- ಎಂಬಿ ರಾಜೇಶ್
4. ಅಲತ್ತೂರ್‌- ಪಿಕೆ ಬಿಜು
5. ಅಟ್ಟಿಂಗಲ್‌- ಎ ಸಂಪತ್
6. ಕಣ್ಣೂರು- ಪಿಕೆ ಶ್ರೀಮತಿ( ಹಾಲಿ ಸಂಸದೆ)
7. ಅಲಪ್ಪುಳ- ಆರಿಫ್
8. ಪಟ್ಟಣಂಥಿಟ್ಟ- ವೀಣಾ ಜಾರ್ಜ್
9. ಕೋಝಿಕೋಡ್‌- ಎ.ಪ್ರದೀಪ್ ಕುಮಾರ್
10. ಪೊನ್ನಾಣಿ- ಪಿವಿ ಅನ್ವರ್
11. ಕಾಸರಗೋಡು- ಕೆ.ಪಿ ಸತೀಶ್​​ ಚಂದ್ರನ್​​
12. ವಡಕರ- ಪಿ. ಜಯರಾಜನ್​​​
13. ಮಲಪ್ಪುರಂ- ವಿ.ಪಿ ಸಂಜು
14. ಎರ್ನಾಕುಲಂ- ಪಿ. ರಾಜೀವ್​​
15. ಕೊಲ್ಲಂ- ಬಿ.ಕೆ ಬಾಲಗೋಪಾಲ್​​​

ಹೀಗೆ ಪಶ್ಚಿಮ ಬಂಗಾಳ, ತ್ರಿಪುರಾ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.

Comments are closed.