ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿ ಇಂದು ಸಂಜೆ 4 ಗಂಟೆಗೆ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ. ಇಂದು 150ಕ್ಕೂ ಹೆಚ್ಚು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಲಭ್ಯವಾಗಿದೆ. ಯಾವ ಕ್ಷೇತ್ರದಿಂದ ಯಾವ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ
ಬೆಳಗಾವಿ – ಸುರೇಶ್ ಅಂಗಡಿ
ಬಾಗಲಕೋಟೆ – ಪಿ.ಸಿ.ಗದ್ದೀಗೌಡರ್
ವಿಜಯಪುರ – ರಮೇಶ್ ಜಿಗಜಿಣಗಿ
ಬೀದರ್ – ಭಗವಂತ ಖೂಬಾ
ಕೊಪ್ಪಳ – ಕರಡಿ ಸಂಗಣ್ಣ
ದಾವಣಗೆರೆ – ಜಿ.ಎಂ.ಸಿದ್ದೇಶ್ವರ್
ಶಿವಮೊಗ್ಗ – ಬಿ.ವೈ. ರಾಘವೇಂದ್ರ
ಉತ್ತರ ಕನ್ನಡ – ಅನಂತಕುಮಾರ್ ಹೆಗಡೆ
ದಕ್ಷಿಣ ಕನ್ನಡ – ನಳಿನ್‌ಕುಮಾರ್ ಕಟೀಲು
ಧಾರವಾಡ-ಹುಬ್ಬಳ್ಳಿ – ಪ್ರಹ್ಲಾದ್ ಜೋಶಿ
ಹಾವೇರಿ-ಗದಗ – ಶಿವಕುಮಾರ್ ಉದಾಸಿ
ಚಿತ್ರದುರ್ಗ – ಮಾನಪ್ಪ ವಜ್ಜಲ್/ಮಾದಾರ ಚೆನ್ನಯ್ಯ ಶ್ರೀಗಳು/ಜೆ.ಜನಾರ್ದನ ಸ್ವಾಮಿ
ತುಮಕೂರು – ಜೆ.ಎಸ್.ಬಸವರಾಜು/ ಸುರೇಶ್ ಗೌಡ/ ಮುದ್ದುಹನುಮೇಗೌಡ(ಆಪರೇಷನ್ ಕಮಲ).
ಕೋಲಾರ – ಡಿ.ಎಸ್.ವೀರಯ್ಯ
ಬಳ್ಳಾರಿ – ದೇವೇಂದ್ರಪ್ಪ/ ವೆಂಕಟೇಶ್ ಪ್ರಸಾದ್
ಬೆಂಗಳೂರು ಉತ್ತರ – ಡಿ.ವಿ.ಸದಾನಂದಗೌಡ
ಬೆಂಗಳೂರು ಕೇಂದ್ರ – ಪಿ.ಸಿ.ಮೋಹನ್
ಬೆಂಗಳೂರು ದಕ್ಷಿಣ – ಡಾ. ತೇಜಸ್ವಿನಿ ಅನಂತಕುಮಾರ್
ಬೆಂಗಳೂರು ಗ್ರಾಮಾಂತರ – ಸಿ.ಪಿ.ಯೋಗೇಶ್ವರ್
ಹಾಸನ – ಎ.ಮಂಜು(ಆಪರೇಷನ್ ಕಮಲ)
ಮಂಡ್ಯ – ಡಾ.ಎಲ್.ಸಿದ್ಧರಾಮಯ್ಯ/ (ಸುಮಲತಾ ಅಂಬರೀಷ್‌ಗೆ ಬೆಂಬಲ)
ಮೈಸೂರು-ಕೊಡಗು – ಪ್ರತಾಪ್ ಸಿಂಹ
ಚಾಮರಾಜನಗರ – ವಿ. ಶ್ರೀನಿವಾಸಪ್ರಸಾದ್
ಉಡುಪಿ-ಚಿಕ್ಕಮಗಳೂರು – ಶೋಭಾ ಕರಂದ್ಲಾಜೆ
ಚಿಕ್ಕೋಡಿ-ಸದಲಗಾ – ರಮೇಶ್ ಕತ್ತಿ
ರಾಯಚೂರು – ಬಿ.ವಿ.ನಾಯಕ್(ಆಪರೇಷನ್ ಕಮಲ)/ ಶಿವನಗೌಡ ನಾಯಕ್/ಸಣ್ಣ ಫಕೀರಪ್ಪ
ಕಲ್ಬುರ್ಗಿ – ಡಾ.ಉಮೇಶ್ ಜಾಧವ್
ಚಿಕ್ಕಬಳ್ಳಾಪುರ – ಬಿ.ಎನ್.ಬಚ್ಚೇಗೌಡ.
ಈ ಪಟ್ಟಿಯಲ್ಲಿ ನಾಲ್ಕೈದು ಕ್ಷೇತ್ರವನ್ನು ಹೊರತುಪಡಿಸಿದ್ರೆ, ಬಾಕಿಯಿರುವ ಕ್ಷೇತ್ರಗಳ ಅಭ್ಯರ್ಥಿಗಳು ಬಹುತೇಕ ಅಂತಿಮ ಎನ್ನಲಾಗಿದೆ. ಅತಿ ಶೀಘ್ರದಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಪಕ್ಷ ಘೋಷಣೆ ಮಾಡಲಿದೆ.
Comments are closed.