ಮನೋರಂಜನೆ

ಇಥಿಯೋಪಿಯಾ ವಿಮಾನ ದುರಂತ – ಭಾರತ ಮೂಲದ ನಾಲ್ವರ ಸಾವು

Pinterest LinkedIn Tumblr

ಆಡಿಸ್ ಅಬಬಾ: ಇಥಿಯೋಪಿಯನ್ ಏರ್ ಲೈನ್ಸ್ ವಿಮಾನ ಪತನಗೊಂಡು 157 ಮಂದಿ ಮೃತಪಟ್ಟಿದ್ದು, ಇದರಲ್ಲಿ ನಾಲ್ವರು ಭಾರತೀಯರು ಕೂಡ ಸೇರಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಇಥಿಯೋಪಿಯದ ರಾಜಧಾನಿ ಆಡಿಸ್ ಅಬಬಾದಿಂದ ಕೀನ್ಯಾದ ರಾಜಧಾನಿ ನೈರೋಬಿಯಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ವಿಮಾನ ಪತನ ಆಗಿತ್ತು. ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ 32 ದೇಶಗಳ ಪ್ರಯಾಣಿಕರಿದ್ದರು.
ಇದರಲ್ಲಿ ಅತಿ ಹೆಚ್ಚು ಅಂದರೆ 32 ಮಂದಿ ಕೀನ್ಯಾ, ಕೆನಡಾ 18, ಇಥಿಯೋಪಿಯಾ 9, ಇಟಲಿ, ಅಮೆರಿಕ, ಚೀನಾ ದೇಶಗಳ ತಲಾ 8 ಮಂದಿ ಸೇರಿದ್ದಾರೆ ಎಂದು ಮಾಧ್ಯಮವೊಂದು ಮಾಹಿತಿ ವರದಿ ಮಾಡಿದೆ.

ಉಳಿದಂತೆ ಇಂಗ್ಲೆಂಡ್‍ನ ಮತ್ತು ಫ್ರಾನ್ಸಿನ ತಲಾ 7 ಮಂದಿ ಹಾಗೂ ಈಜಿಪ್ಟ್ 6, ನೆದಲ್ರ್ಯಾಂಡ್ಸ್‍ನ 5, ಭಾರತ 4 ಮಂದಿ ಪ್ರಯಾಣಿಸುತ್ತಿದ್ದರು. ಇಥಿಯೋಪಿಯನ್ ಕಾಲಮಾನದ ಪ್ರಕಾರ ಬೆಳಗ್ಗೆ 8:38ಕ್ಕೆ ಟೇಕಾಫ್ ಆಗಿದ್ದ ವಿಮಾನ 8:44ಕ್ಕೆ ಸಂಪರ್ಕ ಕಳೆದುಕೊಂಡು ಅಪಘಾತಕ್ಕಿಡಾಗಿತ್ತು. 10:05 ಗಂಟೆಗೆ ವಿಮಾನ ನೈರೋಬಿಯಗೆ ತಲುಪಬೇಕಾಗಿತ್ತು. ಸದ್ಯ ಪ್ರಯಾಣಿಕರ ಸ್ನೇಹಿತರು, ಪೊಲೀಸರು ನೈರೋಬಿ ವಿಮಾನ ನಿಲ್ದಾಣದಲ್ಲೇ ಕಾದುಕುಳಿತ್ತಿದ್ದಾರೆ.

ವಿಮಾನ ಅವಘಡದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರಿಗೆ ಇಥಿಯೋಪಿಯನ್ ಪ್ರಧಾನಿ ಕಚೇರಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದೆ. ಅಲ್ಲದೇ ರಕ್ಷಣಾ ಕಾರ್ಯ ಮುಂದುವರಿದಿದೆ ಎಂಬ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಉಂಟಾಗಿರುವ ಸಾವು ನೋವಿನ ಬಗ್ಗೆ ಖಚಿತ ಮಾಹಿತಿ ಲಭಿಸಿಲ್ಲ. ಇಥಿಯೋಪಿಯಾ ಪೂರ್ವ ಆಫ್ರಿಕಾದ ಪ್ರಮುಖ ರಾಷ್ಟ್ರವಾಗಿದೆ. ವಿಮಾನ ಪತನಕ್ಕೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ.

Comments are closed.