ಕರ್ನಾಟಕ

ಬಳ್ಳಾರಿಯಲ್ಲಿ ಶ್ರೀರಾಮುಲುಗೆ ಮುಖಭಂಗ; ಜಿಲ್ಲೆಯ ಹೊರಗಿನವರಿಗೆ ಬಿಜೆಪಿ ಮಣೆ?

Pinterest LinkedIn Tumblr


ಬಳ್ಳಾರಿ: ಬಳ್ಳಾರಿಯಲ್ಲಿ ಕಾಂಗ್ರೆಸ್ ಭದ್ರ‌ಕೋಟೆ ಛಿದ್ರಪಡಿಸಿ ಕಮಲ ಅರಳಲು ರೆಡ್ಡಿ ಸಹೋದರರು ಕಾರಣ. ಆದರೀಗ ರೆಡ್ಡಿ ಸೈಲೆಂಟಾಗಿದ್ದರೆ. ಅವರ ಆಪ್ತ ಸ್ನೇಹಿತ ರಾಮುಲು ಮಾತು ಕೂಡ ಬಳ್ಳಾರಿಯಲ್ಲಿ ನಡೆಯುತ್ತಿಲ್ಲವಂತೆ! ಪಕ್ಷದಲ್ಲಿ ಪ್ರಭಾವಿ ನಾಯಕರಾದ್ರೂ ಬಳ್ಳಾರಿಯಲ್ಲಿ ಈ ಬಾರಿ ಹೊರಗಿನವರಿಗೆ ಟಿಕೆಟ್ ಕೊಡುವ ಮಾಸ್ಟರ್ ಪ್ಲಾನ್ ಬಿಜೆಪಿ ಪಾಳಯದಲ್ಲಿ ನಡೆಯುತ್ತಿದೆ ಎನ್ನಲಾಗಿದೆ.

ಬಳ್ಳಾರಿಯಲ್ಲಿ ಶ್ರೀರಾಮುಲು ಮಾತು ಬಿಜೆಪಿ ಹೈಕಮಾಂಡ್ ಕೇಳುತ್ತಿಲ್ಲ. ರಾಜ್ಯದಲ್ಲಿ ಪ್ರಭಾವಿ ನಾಯಕರಾಗಿರುವ ಶ್ರೀರಾಮುಲು ಉಪ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದರು. ಈಗ ಅವರ ಮಾತು ಬಳ್ಳಾರಿಯಲ್ಲಿಯೇ ನಡೆಯುತ್ತಿಲ್ಲ. ಇಲ್ಲಿಯವರೆಗೆ ತಾವು ಸೂಚಿಸಿದ್ದ ಅಭ್ಯರ್ಥಿಗೆ ಟಿಕೆಟ್ ನೀಡುತ್ತಿದ್ದ ಹೈಕಮಾಂಡ್ ಈ ಬಾರಿ ಮಾತು ಕೇಳುತ್ತಿಲ್ಲ. ಕಾರಣ, ಕಳೆದ ಬಾರಿ ಬಳ್ಳಾರಿ ಲೋಕಸಭಾ ಉಪ ಚುನಾವಣೆಗೆ ಶ್ರೀರಾಮುಲು ಸಹೋದರಿ ಜೆ ಶಾಂತ ಅವರಿಗೆ ಟಿಕೆಟ್ ನೀಡಲಾಗಿತ್ತು. ಅಲ್ಪ ಮತಗಳಿಂದಾದರೂ ಗೆಲ್ಲಲಿದ್ದಾರೆ ಎಂದುಕೊಂಡಿದ್ದ ಬಿಜೆಪಿ ನಾಯಕರಿಗೆ ಭಾರೀ ಮುಖಭಂಗ ತರುವಂಥ ಫಲಿತಾಂಶವೇ ಬಂದಿತ್ತು.

ಈ ಕಾರಣಕ್ಕೆ ಬಿಜೆಪಿ ರಾಮುಲುಗೆ ಬಳ್ಳಾರಿ ಉಸ್ತುವಾರಿ ಬದಲು ಪಕ್ಕದ ಕೊಪ್ಪಳ ಜಿಲ್ಲೆ ಉಸ್ತುವಾರಿ ನೀಡಿ ಸೈಲೆಂಟ್ ಮಾಡಿದೆ. ಇಷ್ಟು ಮಾತ್ರವಲ್ಲ ಒಂದು ಹೆಜ್ಜೆ ಮುಂದು ಹೋಗಿ ಈ ಬಾರಿ ಬಳ್ಳಾರಿ ಎಂಪಿ ಟಿಕೆಟ್ ಹೊರಗಡೆಯವರಿಗೆ ನೀಡಲು ಪಕ್ಷದ ಹೈಕಮಾಂಡ್ ನಿರ್ಧರಿಸಿದ್ದಾರೆ! ಲಖನ್ ಕಣಕ್ಕಿಳಿಸುವ ಬಗ್ಗೆಯಾಗಲಿ, ನಾಗೇಂದ್ರ ಸಹೋದರ ಸ್ಪರ್ಧಿಸುವ ಬಗ್ಗೆಯಾಗಲಿ ಪಕ್ಷದಲ್ಲಿ ಚರ್ಚೆಯಾಗಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ‌.

ಹೊರಗಿನವರಿಗೆ ಬಿಜೆಪಿ ಟಿಕೆಟ್ ನೀಡುವ ವಿಚಾರದಿಂದ ಶ್ರೀರಾಮುಲುಗೆ ಭಾರೀ ಮುಖಭಂಗ ಅನುಭವಿಸುತ್ತಿದ್ದಾರೆ. ಹೊರಗಿನವರಿಗೆ ಮಣೆ ಹಾಕುತ್ತಿರುವುದಕ್ಕೆ ರಾಮುಲು ತಮ್ಮ ಕಾರ್ಯಕರ್ತರ ಮೂಲಕ ಅಸಮಾಧಾನ ಹೊರಹಾಕುತ್ತಿದ್ದಾರೆ. ಇದುವರೆಗೆ ರಾಮುಲು ಸೂಚಿಸಿದವರಿಗೆ ಪಕ್ಷ ಟಿಕೆಟ್ ನೀಡುತ್ತಿತ್ತು. ಆದರೆ ಯಾವಾಗ ಉಪ ಚುನಾವಣೆಯಲ್ಲಿ ಬಿಜೆಪಿ ಭಾರೀ ಅಂತರದಲ್ಲಿ ಸೋಲು ಅನುಭವಿಸಿತೋ ಆಗಲೇ ಈ ಬಾರಿಯ ಚುನಾವಣೆಯಲ್ಲಿ ರಾಮುಲು ಕುಟುಂಬದ ಸದಸ್ಯರಿಗೆ ಟಿಕೆಟ್ ಸಿಗೋದು ಡೌಟು ಎನ್ನುವ ಮಾತು ಕೇಳಿ ಬಂದಿತ್ತು. ಆರೇಳು ಬಿಜೆಪಿ ಅಭ್ಯರ್ಥಿಗಳಿದ್ದಾರೆ ಇದರಲ್ಲಿ ಶಾಂತ, ಫಕೀರಪ್ಪ, ಸುರೇಶ್ ಬಾಬು ಎಂದು ಹೇಳಿದ್ದ ರಾಮುಲು, ಎಂಪಿಗೆ ಸ್ಪರ್ಧಿಸುವ ವಿಚಾರ ಪಕ್ಷ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ತಾವು ಕಣಕ್ಕಿಳಿಯಲು ಆಪ್ಶನ್ ಓಪನ್ ಮಾಡಿದ್ದರು.

ಬಳ್ಳಾರಿಗೆ ಲಖನ್ ಜಾರಕಿಹೊಳಿ ಎಂಟ್ರಿ ಕೊಡಲಿದ್ದಾರೆ‌. ಬಿಜೆಪಿ ಅಭ್ಯರ್ಥಿಯಾಗಿ ಲಖನ್‌ ನಿಲ್ಲುವ ಸಾಧ್ಯತೆಯಿದೆ‌. ಬಳ್ಳಾರಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಹುಡುಕಾಟ ಸಂದರ್ಭದಲ್ಲಿ ಬೆಳಗಾವಿಯ ಜಾರಕಿಹೊಳಿ ಸಹೋದರ ಲಖನ್ ಕರೆತರಲು ಬಿಜೆಪಿ ಚಿಂತನೆ ಮಾಡಿದೆ. ಬಳ್ಳಾರಿ ಕ್ಷೇತ್ರದಲ್ಲಿ . ನಾಯಕ ಸಮುದಾಯ ಪ್ರಾಬಲ್ಯವಿದೆ. ಇತ್ತೀಚಿಗಷ್ಟೆ ಹೊಸಪೇಟೆಯಲ್ಲಿ ನಾಯಕ ಮುಖಂಡರ ಸಭೆ ನಡೆಸಿದ್ದ ರಮೇಶ್ ಜಾರಕಿಹೊಳಿ, ನಾಯಕ ಸಮುದಾಯ ಒಗ್ಗೂಡಿಸಬೇಕಿದೆ ಎಂದು ಹೇಳಿದ್ದರು‌.

ಇನ್ನು, ಶ್ರೀರಾಮುಲು ಸಹೋದರರಿಗಿಲ್ಲ ಈ ಬಾರಿ ಟಿಕೆಟ್ ಸಿಗೋ ಲಕ್ಷಣ ಕಾಣುತ್ತಿಲ್ಲ. ಮಾಜಿ ಸಂಸದೆ ಜೆ ಶಾಂತಗೆ ಬಳ್ಳಾರಿ ಎಂಪಿ ಟಿಕೆಟ್ ಸಿಗಲು ಅವಕಾಶವೇ ಇಲ್ಲ. ಯಾಕೆಂದರೆ ಕಳೆದ‌ ಬಾರಿ ಉಪ ಚುನಾವಣೆಯಲ್ಲಿ ಯಾರೂ ಊಹಿಸದ ರೀತಿಯಲ್ಲಿ 2.40 ಲಕ್ಷ ಅಧಿಕ ಮತಗಳಿಂದ ಕಾಂಗ್ರೆಸ್ ಉಗ್ರಪ್ಪ ಗೆಲುವು ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿ ಜೆ ಶಾಂತ ಭಾರೀ ಅಂತರದಲ್ಲಿ ಸೋಲು ಅನುಭವಿಸಿದ್ದರು. ಕಣದಲ್ಲಿರುವುದು ನಾನಲ್ಲ ನನ್ನ ಅಣ್ಣ ಶ್ರೀರಾಮುಲು ಎಂದು ಹೇಳಿಕೊಂಡಿದ್ದ ಶಾಂತ, ಕಳೆದ ಬಾರಿ ಬಿಜೆಪಿ ಭಾರೀ ಮುಖಭಂಗವೇ ಆಗಿತ್ತು. ಈ ಬಾರಿ ಅಪ್ಪಿತಪ್ಪಿ ಶಾಂತಗೆ ಬಿಜೆಪಿ ಟಿಕೆಟ್ ಕೊಡದಲಿರುವ ಬಿಜೆಪಿ ನಿರ್ಧಾರ ಮಾಡಿದೆಯಂತೆ.

ಇನ್ನು ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಕಳೆದ ಉಪ ಚುನಾವಣೆಯಲ್ಲಿ ಕೈ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಸಾದ್ ಕೊನೆ ಕ್ಷಣದಲ್ಲಿ ಉಗ್ರಪ್ಪ ಹೆಸರು ಅಂತಿಮಗೊಂಡಿತ್ತು. ಈ ಬಾರಿ ಕೈ ಟಿಕೆಟ್ ಉಗ್ರಪ್ಪ ಬದಲಾವಣೆಯಾಗದ ಹಿನ್ನೆಲೆ ಪ್ರಸಾದ್ ಟಿಕೆಟ್ ಸಿಕ್ಕರೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಸಾಧ್ಯತೆಯಾಗಬಹುದು‌. ತಾವು ಕಾಂಗ್ರೆಸ್ ನಲ್ಲಿಯೇ ಇದ್ದುಕೊಂಡು ಹಿರಿಯ ಸಹೋದರ ವೆಂಕಟೇಶ್ ಪ್ರಸಾದ್ ಬಿಜೆಪಿ ಕಳುಹಿಸುವ ಚಿಂತನೆಯೂ ಇದೆ. ಈ ಮೂಲಕ ಕಾಂಗ್ರೆಸ್ ನಾಯಕರಿಗೆ ಮತ್ತೆ ಮಗ್ಗಲು ಮುಳ್ಳಾಗಲು ನಾಗೇಂದ್ರ ಮುಂದಾದಂತಿದೆ.

Comments are closed.