ರಾಷ್ಟ್ರೀಯ

24 ಗಂಟೆಯಲ್ಲೇ ಬಂಧಿತ ಪಾಕ್‌ ಪ್ರಜೆ ಬಿಡುಗಡೆ

Pinterest LinkedIn Tumblr


ಶ್ರೀನಗರ: ಜಮ್ಮು-ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯ ಬಳಿ, ಭಾರತ ಪ್ರವೇಶಿಸಿದ್ದ ಪಾಕಿಸ್ತಾನದ ಪ್ರಜೆಯೊಬ್ಬರನ್ನು ಸದ್ಭಾವನೆಯ ಸಂಕೇತವಾಗಿ ಭಾರತೀಯ ಗಡಿ ಭದ್ರತಾ (ಬಿಎಸ್‌ಎಫ್‌) ಪಡೆ ಒಂದೇ ದಿನದಲ್ಲಿ ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ.

ಶುಕ್ರವಾರ ಸಾಂಬಾ ಜಿಲ್ಲೆಯ ರಾಮಗಢ ಸೆಕ್ಟರ್‌ನಲ್ಲಿ ಮೊಹಮದ್‌ ಅಶ್ರಫ್‌ (60) ಎಂಬ ಪಾಕ್‌ ಪ್ರಜೆ ಭಾರತದ ಗಡಿಯೊಳಗೆ ಪ್ರವೇಶಿಸಿದ್ದರು. ಕೂಡಲೇ ಬಿಎಸ್‌ಎಫ್‌ ಯೋಧರು ಅವರನ್ನು ಬಂಧಿಸಿದ್ದರು.

ಬಂಧಿತರಿಂದ 12 ಸಾವಿರ ರೂ. ಪಾಕ್‌ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು. ಶನಿವಾರ ಮಧ್ಯಾಹ್ನ 3.30ರ ವೇಳೆಗೆ ಅಶ್ರಫ್‌ ಅವರನ್ನು ಪಾಕ್‌ ರೇಂಜರ್‌ಗಳಿಗೆ ಹಸ್ತಾಂತರಿಸಲಾಗಿದೆ.

ಭಾರತೀಯ ಪಡೆಗಳ ಮಾನವೀಯತೆಯನ್ನು ಪಾಕ್‌ ರೇಂಜರ್‌ಗಳು ಶ್ಲಾಘಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪುಲ್ವಾಮಾ ದಾಳಿ ಹಾಗೂ ವಿಂಗ್‌ ಕಮಾಂಡರ್‌ ಅಭಿನಂದನ್‌ ಬಂಧನ ಪ್ರಕರಣದ ಬಳಿಕ ಈ ಬೆಳವಣಿಗೆ ಗಮನ ಸೆಳೆದಿದೆ.

Comments are closed.