ಕರ್ನಾಟಕ

ಲೋಕಸಭಾ ಚುನಾವಣೆ ಘೋಷಣೆ: ಕುತೂಹಲ ತಂದ 5 ಅಂಶಗಳು

Pinterest LinkedIn Tumblr


ಬೆಂಗಳೂರು: ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆದರೆ ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ನಡೆಯಲಿದೆ.ಇದೆಲ್ಲದಕ್ಕೂ ಮೀರಿ ಈ ಬಾರಿ ಆಯೋಗದ ಘೋಷಣೆಯಲ್ಲಿ ಅನೇಕ ಕುತೂಹಲಕಾರಿ ಅಂಶಗಳು ಇವೆ.

* ತಮಿಳುನಾಡಲ್ಲಿ 39 ಲೋಕಸಭಾ ಕ್ಷೇತ್ರವಿದ್ದರೂ ಒಂದೇ ಹಂತದ ಚುನಾವಣೆ, ಆದರೆ ಕರ್ನಾಟಕದಲ್ಲಿ 28 ಕ್ಷೇತ್ರಗಳಿದ್ದರೂ ಎರಡು ಹಂತ!

* ಅತಿಹೆಚ್ಚು ಕ್ಷೇತ್ರಗಳನ್ನು[80] ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಏಳೂ ಹಂತದಲ್ಲಿ ಮತದಾನ ನಡೆಯಲಿದೆ.

* ಮೊದಲ ಸಾರಿ ಅಭ್ಯರ್ಥಿಯ ಫೋಟೊವನ್ನು ಅವರ ಚಿಹ್ನೆಯ ಜತೆ ಇವಿಎಂನಲ್ಲಿ ಬಳಕೆ ಮಾಡಲಾಗುತ್ತಿದೆ.

* ಅಭ್ಯರ್ಥಿಗಳು ಕಳೆದ 5 ವರ್ಷದ ಆದಾಯ ತೆರಿಗೆ ದಾಖಲೆ ಸಲ್ಲಿಸಬೇಕು

*ಸೋಶಿಯಲ್ ಮೀಡಿಯಾ ಪ್ರಚಾರದ ಮೇಲೆ ಹದ್ದಿನ ಕಣ್ಣಿಡಲಾಗಿದ್ದು ಎಲೆಕ್ಷನ್ ಕಮಿಷನ್ ಹೇಳಿರುವ ಆ್ಯಪ್ ಬಳಸಿ ಸಾರ್ವಜನಿಕರು ದೂರು ದಾಖಲಿಸಬಹುದು.

Comments are closed.