ರಾಷ್ಟ್ರೀಯ

17ನೇ ಲೋಕಸಭಾ ಚುನಾವಣೆಗೂ ಪಾಕ್ ನ್ನು ಎಳೆದುತಂದ ರಾಜ್ಯ ಬಿಜೆಪಿ

Pinterest LinkedIn Tumblr


ನವದೆಹಲಿ: 17ನೇ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 23 ರಂದು ಫಲಿತಾಂಶ ಪ್ರಕಟವಾಗಲಿದೆ.

ಇನ್ನು ಕರ್ನಾಟಕದಲ್ಲಿ ಒಟ್ಟು 28 ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 18 ಗುರುವಾರ 14 ಕ್ಷೇತ್ರಗಳಿಗೆ ಮೊದಲನೇ ಹಂತ ಮತದಾನ ನಡೆದರೆ, ಇನ್ನುಳಿದ 14 ಕ್ಷೇತ್ರಗಳಿಗೆ ಏಪ್ರಿಲ್ 23 ಮಂಗಳವಾರ 2ನೇ ಹಂತದ ಮತದಾನ ನಡೆಯಲಿದೆ.

ಕರ್ನಾಟಕದಲ್ಲಿ 2 ಹಂತದಲ್ಲಿ ಲೋಕಸಭಾ ಚುನಾವಣೆ, ಏ.18,23ರಂದು ಮತದಾನ

ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದ್ದು, ಇದರಲ್ಲಿ ಬಿಜೆಪಿ ಚುನಾವಣೆಗೂ ಪಾಕಿಸ್ತಾನವನ್ನು ಎಳೆದುತಂದಿದೆ.

‘ಚುನಾವಣೆ ಫಲಿತಾಂಶ ಮಣ್ಣಿನಲ್ಲಿ ಸಂಭ್ರಮಿಸುವಂತಿರಲಿ, ಪಾಕಿಸ್ತಾನದಲ್ಲಲ್ಲ. ಕಾಂಗ್ರೆಸ್ ಮುಕ್ತ ಭಾರತದ ನಿರ್ಮಾಣಕ್ಕೆ ದಿನಾಂಕ ನಿಗದಿಯಾಗಿದೆ. ಪ್ರತಿಪಕ್ಷಗಳು ಸುಳ್ಳಿನ ಕಂತೆಯೊಂದಿಗೆ ನಿಮ್ಮ ಮುಂದೆ ಬರಲಿ. ನಾವು ಪ್ರತಿಪಕ್ಷಗಳ ಸುಳ್ಳಿನ ಕಂತೆ ಬಯಲು ಮಾಡಲು ಸಿದ್ಧವಿದ್ದೇವೆ’ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.

ಇನ್ನೊಂದು ಮುಖ್ಯ ಅಂಶ ಅಂದ್ರೆ ಯಾವುದೇ ಕಾರಣಕ್ಕೂ ಚುನಾವಣೆಗೆ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಫೋಟೋಗಳನ್ನು ಬಳಸಬಾರದು ಎಂದು ಕೇಂದ್ರ ಚುನಾವಣೆ ಆಯೋಗ ಆದೇಶ ಹೊರಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

Comments are closed.