ರಾಷ್ಟ್ರೀಯ

ಬಿಜೆಪಿಯಲ್ಲಿ ಇನ್ಮುಂದೆ 75 ವರ್ಷದ ವಯೋಮಿತಿ ನಿಯಮವಿಲ್ಲ !

Pinterest LinkedIn Tumblr


ನವದೆಹಲಿ: ಪಕ್ಷದಲ್ಲಿನ 75 ವರ್ಷದ ವಯೋಮಿತಿ ನಿಯಮದಿಂದ ಬಿಜೆಪಿ ಹಿಂದೆ ಸರಿಯಲು ನಿರ್ಧರಿಸಿದೆ .ಈ ಹಿನ್ನಲೆಯಲ್ಲಿ ಈಗ ಪಕ್ಷದ ಹಿರಿಯ ನಾಯಕರಿಗೆ ನಿರಾಳವಾಗಿದೆ.ಸಂಸದೀಯ ಸಮಿತಿ ಸಭೆಯಲ್ಲಿ ಪಕ್ಷದ ನಾಯಕರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಆದರೆ ಇದುವರೆಗೂ ಪಕ್ಷದಿಂದ ಈ ವಿಚಾರವಾಗಿ ಅಧಿಕೃತ ಹೇಳಿಕೆ ಹೊರಬಿದ್ದಿದ್ದಲ್ಲ, ಪಕ್ಷದ ಮೂಲಗಳು ಹೇಳಿರುವಂತೆ ಈ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲಾಗಿದೆ. ಆ ಮೂಲಕ ಈಗ ಪಕ್ಷವು ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಷಿ,ರಂತಹ ನಾಯಕರಿಗೆ ಚುನಾವಣೆಗೆ ಸ್ಪರ್ಧಿಸುವ ದಾರಿಯನ್ನು ಸುಲಭ ಮಾಡಿದೆ. ಆದರೆ 75 ವರ್ಷದ ವಯೋಮೀತಿ ನಿಯಮವು ಪಕ್ಷದ ಹಾಗೂ ಸರ್ಕಾರದ ಸ್ಥಾನಗಳನ್ನು ಹೊಂದಬೇಕಾದರೆ ಅನ್ವಯವಾಗುತ್ತದೆ ಎನ್ನಲಾಗಿದೆ.

ಪಕ್ಷದ ಸಂಸದೀಯ ಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಸೇರಿದಂತೆ ಇತರ ಸಂಸದೀಯ ಸಮಿತಿ ಸದಸ್ಯರು ಭಾಗವಹಿಸಿದ್ದರು. ಈ ವೇಳೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಮಾಡಬೇಕಾದರೆ ಪಾಲಿಸಬೇಕಾದ ನಿಯಮಗಳ ಬಗ್ಗೆಯೂ ಕುರಿತು ಚರ್ಚೆ ನಡೆಸಲಾಗಿದೆ.ಸದ್ಯ ಲೋಕಸಭೆಯಲ್ಲಿ ಎಲ್.ಕೆ ಅಡ್ವಾಣಿ(91) ಅವರು ಅತಿ ಹಿರಿಯ ಸದಸ್ಯರಾಗಿದ್ದಾರೆ. ಗಾಂಧಿ ನಗರ ಕ್ಷೇತ್ರವನ್ನು ಅವರು 1991 ರಿಂದ ಪ್ರತಿನಿಧಿಸುತ್ತಾ ಬಂದಿದ್ದಾರೆ .

Comments are closed.