ರಾಯ್ಪುರ: ಜಾರ್ಖಂಡ್ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ರಘುವರ್ ದಾಸ್ ಅವರ ಏಕೈಕ ಪುತ್ರ ಲಲಿತ್ ದಾಸ್ (28), 8 ಮಾರ್ಚ್ ಶುಕ್ರವಾರ ವಿವಾಹ ಬಂಧನಕ್ಕೊಳಗಾದರು. ರಾಯ್ಪುರದ ನಿವಾಸಿ, ಸಾಮಾನ್ಯ ಕುಟುಂಬದ ಪೂರ್ಣಿಮಾ ಸಾಹು ಅವರು ಮುಖ್ಯಮಂತ್ರಿ ಪರಿವಾರದ ಸೊಸೆಯಾಗಿದ್ದು ಎಲ್ಲರ ಗಮನ ಸೆಳೆದಿದೆ.
ಲಲಿತ್ ದಾಸ್ ಟಾಟಾ ಸ್ಟೀಲ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದಲ್ಲಿ ಸಹಾಯಕ ವ್ಯವಸ್ಥಾಪಕರಾಗಿದ್ದಾರೆ. ಅವರನ್ನು ಮನೆಯಲ್ಲಿ ಪ್ರೀತಿಯಿಂದ ಬಿಟ್ಟು ಎಂದು ಕರೆಯುತ್ತಾರೆ. ಪೂರ್ಣಿಮಾ, ಅವರ ಪರಿವಾರದ ಪ್ರೀತಿಯ ಪಿಹೂ.
ರೈಲಲ್ಲಿ ಬಂತು ಸಿಎಂ ಪರಿವಾರದ ದಿಬ್ಬಣ
ಸಾಮಾನ್ಯ ಕುಟುಂಬದ ಯುವತಿಯೊಂದಿಗೆ ಮಗನ ಮದುವೆ ಮಾಡುತ್ತಿರುವ ರಘುವರ ದಾಸ್ ರೈಲಿನಲ್ಲಿಯೇ ದಿಬ್ಬಣವನ್ನು ಕರೆದೊಯ್ದರು. ರಾಯ್ಪುರದಲ್ಲಿ ನಡೆಯಲಿದ್ದ ಮದುವೆಗೆ ತೆರಳಲು ರೈಲಿನಲ್ಲಿ ಮೂರು ಬೋಗಿಗಳನ್ನು ಬುಕ್ ಮಾಡಲಾಗಿತ್ತು.
ಹೇಗಿದ್ದೇನೋ ಹಾಗೇ ಇರುತ್ತೇನೆ, ಪಾನಿ ಪುರಿ ತಿನ್ನುತ್ತೇನೆ
ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದು ಮತ್ತೀಗ ಸಿಎಂ ಪರಿವಾರ ಸೇರುತ್ತಿರುವ ಪೂರ್ಣಿಮಾ ತಾನು ಇನ್ನು ಮೇಲೆ ಸಹ ಮೊದಲಿನಂತೆ ಇರುತ್ತೇನೆ ಎನ್ನುತ್ತಾರೆ. ಅವರ ತಂದೆ ಭಾಗೀರಥಿ ಸಾಹು ಉದ್ಯಮ ನಡೆಸುತ್ತಿದ್ದು, ತಾಯಿ ಕೌಶಲ್ಯ ಶಿಕ್ಷಕಿಯಾಗಿದ್ದಾರೆ. ಮುಖ್ಯಮಂತ್ರಿ ಪರಿವಾರಕ್ಕೆ ಸೊಸೆಯಾಗಿ ಹೋಗುತ್ತೇನೆಂದು ನಾನು ಅಂದುಕೊಂಡೇ ಇರಲಿಲ್ಲ. ಅಲ್ಲಿ ಹೋದ ಮೇಲೆ ಕೂಡ ಮೊದಲಿನಂತೆ ಇರುತ್ತೇನೆ. ಪಾನೀಪುರಿ ತಿನ್ನುತ್ತೇನೆ. ನನ್ನ ಜತೆಗಿದ್ದವರಿಗೂ ತಿನ್ನಿಸುತ್ತೇನೆ ಎನ್ನುತ್ತಾರೆ.
10 ಮಾರ್ಚ್‌ಗೆ ರಿಸೆಪ್ಶನ್
ವಿವಾಹವನ್ನು ಸರಳವಾಗಿ ಮಾಡಲಾಗಿದ್ದು ಇಂದು ಜೆಮ್‌ಶೆಡ್‌ಪುರದಲ್ಲಿ ಔತಣಕೂಟವನ್ನು ಇಟ್ಟುಕೊಳ್ಳಲಾಗಿದ್ದು 15ರಿಂದ 20 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ.
Comments are closed.