ಮನೋರಂಜನೆ

ಮಹಿಳಾ ದಿನದ ನೆನಪಿನಲ್ಲಿ ಪತ್ನಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊಟ್ಟ ಐಶಾರಾಮಿ ಉಡುಗೊರೆ ನೋಡಿ….

Pinterest LinkedIn Tumblr

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನದ ನೆನಪಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪತ್ನಿಗೆ ಐಶಾರಾಮಿ ಲ್ಯಾಂಬೋರ್ಗಿನಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಕಾರುಗಳೆಂದರೆ ಎಲ್ಲಿಲ್ಲದ ಕ್ರೇಜ್ ಇದೆ. ಪುನೀತ್ ರಾಜ್ ಕುಮಾರ್ ಬಳಿ ಈಗಾಗಲೇ ಆಡಿ, ರೇಂಜ್ ರೋವರ್ ಕಾರುಗಳು ಸೇರಿದಂತೆ ಐಶಾರಾಮಿ ಸ್ಪೋರ್ಟ್ ಬೈಕ್ ಗಳೂ ಇವೆ.

ಈಗ ನೀಲಿ ಬಣ್ಣದ ಕಣ್ಣು ಕುಕ್ಕುವಂತಹ ಐಶಾರಾಮಿ ಲ್ಯಾಂಬೋರ್ಗಿನಿ ಉರುಸ್ ಕಾರನ್ನು ಖರೀದಿಸಿದ್ದು, ಪತ್ನಿಗೆ ಉಡುಗೊರೆಯಾಗಿ ನೀಡಿದ್ದಾರೆ ಎಂಬುದು ತಿಳಿದುಬಂದಿದೆ.

ಈ ದುಬಾರಿ ಕಾರಿನ ಎಕ್ಸ್ ಶೋ ರೂಮ್ ಬೆಲೆ 3 ಕೋಟಿ ರೂ. ಆಗಿದೆ. ನೋಂದಣಿ ಶುಲ್ಕ, ಲೈಪ್ ಟೈಮ್ ರೋಡ್ ಟ್ಯಾಕ್ಸ್, ವಿಮೆ, ಡೀಲರ್ ಚಾರ್ಜಸ್ ಸೇರಿದರೆ ಬೆಲೆ ಇನ್ನಷ್ಟು ಹೆಚ್ಚಾಗಲಿದೆ ಎನ್ನುತ್ತವೆ ಮೂಲಗಳು.

Comments are closed.