ರಾಯಚೂರು: ಮಂಡ್ಯ ಲೋಕಸಭಾ ಕ್ಷೇತ್ರದ ಕೈ ಟಿಕೆಟ್ ಆಕಾಂಕ್ಷಿಯಾಗಿರುವ ನಟಿ ಸುಮಲತಾ ಅವರ ಕುರಿತಂತೆ ಸಚಿವ ಎಚ್ ಡಿ ರೇವಣ್ಣ ನೀಡಿರುವ ಹೇಳಿಕೆ ಸರಿಯಲ್ಲ.. ಅವರ ಪರವಾಗಿ ನಾನು ಕ್ಷಮೆ ಯಾಚಿಸುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಹೇಳಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಮಲತಾರ ಬಗ್ಗೆ ಸಚಿವ ರೇವಣ್ಣ ಹಗುರವಾಗಿ ಮಾತನಾಡುವುದು ಸರಿಯಲ್ಲ. ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರಿಂದ ಇಂಥಹ ಮಾತುಗಳನ್ನು ನಿರೀಕ್ಷಿರಲಿಲ್ಲ. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷನಾಗಿ ಈ ಕುರಿತು ಕ್ಷಮೆ ಕೇಳುತ್ತೇನೆ. ಪಕ್ಷದಲ್ಲಿ ಮಹಿಳೆಯರಿಗೆ ಅಪಾರ ಕೊಡುತ್ತೇವೆ ಎಂದು ವಿಶ್ವನಾಥ್ ಹೇಳಿದರು.
‘ಕುಟುಂಬ ರಾಜಕಾರಣ ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲೂ ಇದೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ ಅವರ ಮನೆಗಳಲ್ಲೂ ಇದೆ. ಮನೆಯಲ್ಲಿ ಇಬ್ಬರಾಗಲಿ, ನಾಲ್ಕು ಜನರಾಗಲಿ ಕುಟುಂಬ ರಾಜಕಾರಣ ಎನ್ನುವ ವಿಷಯ ಪ್ರಶ್ನೆಯಾಗಿ ಉಳಿದಿಲ್ಲ ಎಂದರು.
ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ವಿಶ್ವನಾಥ್ ಅವರು, ಮೋದಿ ಉತ್ತರ ಕರ್ನಾಟಕದ ಕೇಂದ್ರದ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ. ರಾಜ್ಯದ ಅವಭಿವೃದ್ಧಿ ವಿಷಯದಲ್ಲಿ ಮೋದಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
Comments are closed.