ರಾಷ್ಟ್ರೀಯ

ಭಾರತೀಯ ವಾಯುಗಡಿಯೊಳಗೆ ನುಸುಳಲು ಯತ್ನಿಸಿದ ಪಾಕ್ ಡ್ರೋಣ್; ಅಟ್ಟಾಡಿಸಿ ಓಡಿಸಿದ ಸೇನೆ

Pinterest LinkedIn Tumblr

ಜೈಪುರ: ಭಾರತೀಯ ವಾಯುಗಡಿಯೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನದ ಡ್ರೋಣ್ ವೊಂದನ್ನು ಭದ್ರತಾ ಪಡೆಗಳು ಅಟ್ಟಾಡಿಸಿ ಹಿಂದಕ್ಕೆ ಓಡಿಸಿರುವ ಘಟನೆ ಬೆಳಕಿಗೆ ಬಂದಿದೆ.

ಕಳೆದ ಸೋಮವಾರವಷ್ಟೇ ರಾಜಸ್ಥಾನದ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಭಾಗದಲ್ಲಿ ಸೋಮವಾರ ಬೆಳಗ್ಗೆ 11.30ರ ಹೊತ್ತಿಗೆ ಹಾರಾಡುತ್ತಿದ್ದ ಪಾಕಿಸ್ತಾನದ ಡ್ರೋಣ್‍ನ್ನು ಭಾರತೀಯ ವಾಯುಪಡೆ ವಿಮಾನ ಹೊಡೆದುರುಳಿಸಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನದ ಮತ್ತೊಂದು ಡ್ರೋಣ್ ಭಾರತೀಯ ಗಡಿಯೊಳಗೆ ನುಸುಳಲು ಯತ್ನಿಸಿದ್ದು, ಭದ್ರತಾ ಪಡೆಗಳ ಕರ್ತವ್ಯ ಪ್ರಜ್ಞೆಯಿಂದಾಗಿ ಡ್ರೋಣ್ ಬಂದದಾರಿಗೆ ಸುಂಕವಿಲ್ಲದಂತೆ ವಾಪಸ್ ಆಗಿದೆ.

ಭಾರತವನ್ನು ಪ್ರವೇಶಿಸಲು ಯತ್ನಿಸಿರುವ ಎರಡನೇ ಡ್ರೋಣ್‌ ಇದಾಗಿದ್ದು, ಶ್ರೀರಂಗನಗರದ ಸಮೀಪ ಹಿಂದುಮಲ್‌ಕೋಟ್‌ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತೀಯ ಪ್ರದೇಶವನ್ನು ಮುಂಜಾನೆ 5 ಗಂಟೆ ವೇಳೆಗೆ ಪ್ರವೇಶಿಸಲು ಯತ್ನಿಸಿದೆ. ಅನುಮಾನಾಸ್ಪದ ಡ್ರೋಣ್‌ ಕಂಡ ನಂತರ ಸಿಬ್ಬಂದಿ ಫೈರಿಂಗ್‌ ನಡೆಸಿ ಅದನ್ನು ಹಿಮ್ಮೆಟ್ಟಿಸಿದ್ದಾರೆ ಎಂದು ಬಿಎಸ್‌ಎಫ್‌ ತಿಳಿಸಿದೆ.

ಪಾಕಿಸ್ತಾನ ಡ್ರೋಣ್‌ ರಾಜಸ್ಥಾನದ ಗಡಿಯಲ್ಲಿ ಭಾರತದೊಳಗೆ ನುಸುಳಲು ಮುಂದಾಗಿತ್ತು. ಈ ವೇಳೆ ಗಡಿ ಭದ್ರತಾ ಪಡೆಯು ಡ್ರೋಣ್‌ ಅನ್ನು ಪತ್ತೆಹಚ್ಚಿ ಶೂಟ್‌ ಮಾಡಲು ಯತ್ನಿಸಿದಾಗ ಮರಳಿ ಪಾಕ್‌ಗೆ ಹಿಂತಿರುಗಿದೆ ಎಂದು ಬಿಎಸ್‌ಎಫ್‌ ತಿಳಿಸಿದೆ. ಅಂತೆಯೇ ಪಶ್ಚಿಮ ಗಡಿಯುದ್ದಕ್ಕೂ ಇರುವ ಗ್ರಾಮಸ್ಥರಿಗೂ ಭಾರಿ ಫೈರಿಂಗ್‌ ಸದ್ದು ಕೇಳಿಬಂದಿದೆ. ಬಳಿಕ ಡ್ರೋಣ್‌ ಗಡಿ ಮೂಲಕವೇ ಪಾಕ್‌ಗೆ ಸುರಕ್ಷಿತವಾಗಿ ಹಿಂತಿರುಗಿದೆ ಎಂದು ತಿಳಿಸಿದ್ದಾರೆ.

Comments are closed.