ಕುಂದಾಪುರ: ಜಡ್ಕಲ್ ಗ್ರಾಮ ಕೋಡೆಪಾಲ್ ಕೊಟ್ಟಿಗೆಯಲ್ಲಿ ಕಟ್ಟಿಗೆ ನುಗ್ಗಿ ದಾಳಿ ನಡೆಸಿದ ಪ್ರಾಣಿ ಹಸು ಬಲಿ ಪಡೆದುಕೊಂಡಿದೆ. ಹುಲಿಯೋ ಅಥವಾ ಚಿರತೆಯೋ ಎನ್ನುವುದು ಗ್ರಾಮಸ್ಥರಲ್ಲಿ ಭೀತಿಯನ್ನುಂಟು ಮಾಡಿದೆ.
ಕೊಡೆಪಾಲ್ ಕೋಡಿಮನೆ ನಿವಾಸಿ ಕೃಷಿಕ ಅರ್ಮ ಎಂಬವರಿಗೆ ಸೇರಿದ್ದ ಹಸು ಕಾಡು ಪ್ರಾಣಿ ದಾಳಿಗೆ ಬಲಿಯಾಗಿದೆ. ಅರ್ಮ ಮನೆ ಸಮೀಪವಿರುವ ತೆರೆದ ಕೊಟ್ಟಿಗೆಯಲ್ಲಿ ಹಸುವನ್ನು ಕಟ್ಟಿ ಹಾಕಲಾಗಿತ್ತು. ಗುರುವಾರ ರಾತ್ರಿ ಕಾಡುಪ್ರಾಣಿ ದಾಳಿ ನಡೆಸಿ ಹಸುವಿನ ಬೆನ್ನಿನ ಭಾಗವನ್ನು ತಿಂದು ಪರಾರಿಯಾಗಿದೆ. ಬೆಳಿಗ್ಗೆ ಮನೆಯವರು ನೋಡುವಾಗ ಘಟನೆ ಬೆಳಕಿಗೆ ಬಂದಿದೆ. ಸಮೀಪದ ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಬಳಿಕ ದನದ ಅವಶೇಷವನ್ನು ಹೂತು ಹಾಕಲಾಗಿದೆ. ಹಸು ತಿಂದಿದ್ದು ಹುಲಿ ಎಂದು ಸ್ಥಳೀಯರು ಹೇಳುತ್ತಿದ್ದು, ಹಸು ತಿಂದಿರುವುದು ಹುಲಿಯೋ ಚಿರತೆಯೋ ಎನ್ನೋದು ಸ್ಪಷ್ಟವಾಗಿಲ್ಲ. ಸ್ಥಳೀಯರು ಹುಲಿ ನೀಡಿದ್ದೇವೆ ಎನ್ನುವ ಜತೆ ಹೆಜ್ಜೆ ಗುರುತು ಕೂಡಾ ನೋಡಿದ್ದೇವೆ ಎನ್ನುತ್ತಾರೆ.
ಈ ಬಗ್ಗೆ ಕಾಡಂಚಿನ ನಿವಾಸಿಗಳು ಚಿರತೆ ಭಯದಿಂದ ದಿನ ಕಳೆಯುತ್ತಿದ್ದು, ಹುಲಿ ಎನ್ನುವ ಮತ್ತೊಂದು ಭೀತಿ ತಲೆ ದೋರಿದೆ.
Comments are closed.