ಮನೋರಂಜನೆ

ಮನೆಗೆ ಬಂದರೆ ಸಾಯಿಸ್ತೀನಿ – ಅಕ್ಷಯ್ ಹುಚ್ಚು ಸಾಹಸಕ್ಕೆ ಟ್ವಿಂಕಲ್ ಖನ್ನಾ

Pinterest LinkedIn Tumblr


ಮುಂಬೈ: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರ ಹುಚ್ಚು ಸಾಹಸಕ್ಕೆ ಅವರ ಪತ್ನಿ, ನಟಿ ಟ್ವಿಂಕಲ್ ಖನ್ನಾ ಅವರು ಗರಂ ಆಗಿ ಮನೆಗೆ ಬಂದ್ರೆ ಸಾಯಸ್ತೀನಿ ಎಂದು ಎಚ್ಚರಿಕೆ ನೀಡಿದ್ದಾರೆ.

ಅಕ್ಷಯ್ ಕುಮಾರ್ ನಟಿಸುತ್ತಿರುವ ತಮ್ಮ ಮೊದಲ ವೆಬ್ ಸಿರೀಸ್ ‘ದಿ-ಎಂಡ್’ ಬಗ್ಗೆ ಘೋಷಣೆ ಮಾಡಲು ತಮ್ಮ ದೇಹ ಹಾಗೂ ಕೈ- ಕಾಲುಗಳಿಗೆ ಬೆಂಕಿ ಹಚ್ಚಿಕೊಂಡು ಕಾರ್ಯಕ್ರಮಕ್ಕೆ ಎಂಟ್ರಿ ನೀಡಿದ್ದರು. ಅಲ್ಲದೇ ಅಕ್ಷಯ್ ಕುಮಾರ್ ತಾವು ಬೆಂಕಿ ಹಚ್ಚಿಕೊಂಡ ಫೋಟೋವನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದರು.

ಈ ಟ್ವೀಟ್‍ಗೆ ಅವರ ಪತ್ನಿ ಟ್ವಿಂಕಲ್ ಖನ್ನಾ ಅವರು, “ನೀವು ಈ ರೀತಿ ಬೆಂಕಿ ಹಚ್ಚಿಕೊಂಡಿದ್ದೀರಿ ಎನ್ನುವುದು ಈಗ ನನಗೆ ಗೊತ್ತಾಯಿತು. ನೀವು ಈ ಬೆಂಕಿಯಲ್ಲಿ ಸತ್ತಿಲ್ಲ ಎಂದರೆ ನೀವು ಮನೆಗೆ ಬಂದಾಗ ನಾನೇ ಸಾಯಸುತ್ತೇನೆ” ಎಂದು ಟ್ವೀಟ್ ಮಾಡಿ, “ದೇವರೇ ನನ್ನನ್ನು ರಕ್ಷಿಸು” ಎಂಬ ಹ್ಯಾಶ್‍ಟ್ಯಾಗ್ ಬಳಸಿ ರೀ ಟ್ವೀಟ್ ಮಾಡಿದ್ದಾರೆ.

ಟ್ವಿಂಕಲ್ ಅವರು ತಮಾಷೆಗಾಗಿ ಈ ರೀತಿ ಟ್ವೀಟ್ ಮಾಡಿದ್ದರೂ ಕೆಲವರು ಅಕ್ಷಯ್ ಮನೆಗೆ ಬಂದ ಮೇಲೆ ಏನಾಯಿತು. ನಮಗೆ ಅಪ್‍ಡೇಟ್ ಮಾಡಿ. ನಾವು ಕುತೂಹಲದಿಂದ ಇದ್ದೇವೆ ಎಂದು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

ಸದ್ಯ ಅಕ್ಷಯ್ ಕುಮಾರ್ ಅಭಿನಯದ ಕೇಸರಿ ಚಿತ್ರ ಮಾರ್ಚ್ 21ರಂದು ಬಿಡುಗಡೆಯಾಗಲಿದೆ. ಅಲ್ಲದೇ ಅಕ್ಷಯ್ ‘ಹೌಸ್‍ಫುಲ್-4’, ‘ಗುಡ್ ನ್ಯೂಸ್’ ಹಾಗೂ ‘ಮಿಶನ್ ಮಂಗಲ್’ ಚಿತ್ರದಲ್ಲಿ ನಟಿಸಲಿದ್ದಾರೆ.

Comments are closed.