ಮನೋರಂಜನೆ

ಬಾಹುಬಲಿ ನಟ ಪ್ರಭಾಸ್ ಕೆನ್ನೆಗೆ ಬಾರಿಸಿದ ಯುವತಿ!

Pinterest LinkedIn Tumblr


ಹೈದರಾಬಾದ್: ಸಾಮಾಜಿಕ ಜಾಲತಾಣದಲ್ಲಿ ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅವರಿಗೆ ಸಂಬಂಧಿಸಿದ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಇದರಲ್ಲಿ ಅಭಿಮಾನಿಯೊಬ್ಬರು ಮಾಡಿದ ತರಲೆಯ ದೃಶ್ಯವನ್ನ ಕಾಣಬಹುದಾಗಿದೆ.

ವಿಡಿಯೋದಲ್ಲಿ ನಟ ಪ್ರಭಾಸ್‍ರೊಂದಿಗೆ ಸೆಲ್ಫಿ ಕೇಳಿದ ಅಭಿಮಾನಿ ಮನವಿಗೆ ಸಮ್ಮಿತಿಸಿ ಫೋಟೋಗೆ ಪೋಸ್ ಕೊಟುತ್ತಾರೆ. ಆದರೆ ನೆಚ್ಚಿನ ನಟನ ಜೊತೆ ಸೆಲ್ಫಿ ಪಡೆದ ಸಂಭ್ರಮದಲ್ಲಿದ್ದ ಯುವತಿ ಸ್ಥಳದಲ್ಲೇ ಕುಣಿದು ಸಂತಸ ಪಡುತ್ತಾಳೆ. ಆದರೆ ಅಂತಿಮ ಕ್ಷಣದಲ್ಲಿ ಯುವತಿ ಪ್ರಭಾಸ್ ಕೆನ್ನೆ ಟಚ್ ಮಾಡಲು ಯತ್ನಿಸಿದ್ದು, ಆದರೆ ಆಕೆ ಸಂಭ್ರಮಿದಲ್ಲಿದ್ದ ಕಾರಣ ಅದು ಪ್ರಭಾಸ್ ಕೆನ್ನೆಗೆ ಬಾರಿಸಿದಂತೆ ಕಾಣಿಸುತ್ತದೆ.

ಇದಾದ ವೇಳೆಯೇ ಮತ್ತಷ್ಟು ಅಭಿಮಾನಿಗಳು ಫೋಟೋ ತೆಗೆಸಿಕೊಳ್ಳಲು ಮುಂದಾದರೂ ಕೂಡ ಯುವತಿಯ ಅಚಾನಕ್ ವರ್ತನೆ ಕಂಡ ಪ್ರಭಾಸ್ ಮಾತ್ರ ಕೆನ್ನೆ ನೆವರಿಸಿಕೊಂಡು ಮತ್ತೆ ಫೋಟೋ ಪೋಸ್ ಕೊಡುತ್ತಾರೆ.

ಪ್ರಭಾಸ್ ಸದ್ಯ ಸಾಹೋ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಚಿತ್ರ ಈಗಾಗಲೇ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಮಾರ್ಚ್ 3ರಂದು ಚಿತ್ರದ ನಾಯಕಿ ಶ್ರದ್ಧಾ ಕಪೂರ್ ಹುಟ್ಟುಹಬ್ಬದ ನಿಮಿತ್ತ ಚಿತ್ರತಂಡ ಸಿನಿಮಾ ವಿಡಿಯೋ ಬಿಡುಗಡೆ ಮಾಡಿ ಗಿಫ್ಟ್ ನೀಡಿತ್ತು.

ಚಿತ್ರದ ತಾರಾಗಣವೂ ಕೂಡ ಹಲವು ಬಾಲಿವುಡ್ ನಟರನ್ನು ಒಳಗೊಂಡಿದೆ. ಸಾಹೋ 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿದ್ದು, ಹಿಂದಿ, ತೆಲುವು, ತಮಿಳು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.

Comments are closed.